ಡ್ರೀಮ್‌ 11 ಕೈಕೊಟ್ಟ ಬೆನ್ನಲ್ಲೇ ಷರತ್ತಿನೊಂದಿಗೆ ಟೈಟಲ್ ಪ್ರಾಯೋಜಕರಿಗೆ ಬಿಸಿಸಿಐ ಆಹ್ವಾನ

Sampriya
ಮಂಗಳವಾರ, 2 ಸೆಪ್ಟಂಬರ್ 2025 (20:20 IST)
ನವದೆಹಲಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯೊಂದಿಗೆ ಡ್ರೀಮ್‌ 11 ಮಾಡಿಕೊಂಡ ಒಪ್ಪಂದ ಮುರಿದ ಬೆನ್ನಲ್ಲೇ ಭಾರತ ಕ್ರಿಕೆಟ್ ತಂಡದ ಟೈಟಲ್‌ ಪ್ರಾಯೋಜಕರಿಗಾಗಿ ಬಿಸಿಸಿಐ ಬಿಡ್‌ ಆಹ್ವಾನಿಸಿದೆ. ಆದರೆ, ಈ ಬಾರಿ ಕೆಲವೊಂದು ಷರತ್ತುಗಳನ್ನು ವಿಧಿಸಿದೆ.

ಈ ಬಾರಿಯ ಬಿಡ್‌ನಲ್ಲಿ ಹಣದ ಜೂಜಾಟಗಳು ಮತ್ತು ಕ್ರಿಪ್ಟೋ ಕರೆನ್ಸಿ ವ್ಯವಹರಿಸುವ ಕಂಪೆನಿಗಳನ್ನು ಬಿಡ್‌ನಲ್ಲಿ ಭಾಗವಹಿಸದಂತೆ  ನಿರ್ಬಂಧಿಸಲಾಗಿದೆ. ಆಸಕ್ತಿ ಅಭಿವೃಕ್ತಿ ಅರ್ಜಿ ನಮೂನೆ ಖರೀದಿಸಲು ಸೆ.12 ಕೊನೆಯ ದಿನವಾಗಿದೆ. ಬಿಡ್ ದಾಖಲೆಗಳನ್ನು ಸೆ. 16ರೊಳಗೆ ಸಲ್ಲಿಸಬೇಕು.  

ಈ ಹಿಂದೆ ಡ್ರೀಮ್‌ 11 ಮತ್ತು ಮೈ ಇಲೆವನ್ ಸರ್ಕಲ್ ಗೇಮಿಂಗ್‌ ಆ್ಯಪ್‌ಗಳ ಪ್ರಾಯೋಜಕತ್ವದಿಂದ ಬಿಸಿಸಿಐಗೆ ಸುಮಾರು ಒಂದು ಕೋಟಿ ರೂಪಾಯಿ ಆದಾಯವಿತ್ತು.  ಪ್ರಸ್ತುತ ಬಿಸಿಸಿಐನೊಂದಿಗೆ ಒಪ್ಪಂದದಲ್ಲಿರುವ ಸಹಪ್ರಾಯೋಜಕ ಸಂಸ್ಥೆಗಳೂ ಈ ಬಿಡ್‌ನಲ್ಲಿ ಭಾಗವಹಿಸುವಂತಿಲ್ಲ ಎಂದೂ ತಿಳಿಸಲಾಗಿದೆ. 

ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆಯನ್ನು ಕೇಂದ್ರ ಸರ್ಕಾರವು ಈಚೆಗೆ  ಜಾರಿಗೊಳಿಸಿದೆ. ಅದರಿಂದಾಗಿ ಈ ಮೊದಲು ಭಾರತ ತಂಡದ ಟೈಟಲ್ ಪ್ರಾಯೋಜಕರಾಗಿದ್ದ ಡ್ರಿಮ್ ಇಲೆವನ್‌ ಜೊತೆಗಿನ ಒಪ್ಪಂದವನ್ನು ಬಿಸಿಸಿಐ ರದ್ದುಗೊಳಿಸಿದೆ. ಆದ್ದರಿಂದ ಈಗ ಹೊಸ ಪ್ರಾಯೋಜಕರನ್ನು ಆಹ್ವಾನಿಸುತ್ತಿದೆ. 

ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ ಅನ್ವಯ ಜೂಜಾಟ, ಬೆಟ್ಟಿಂಗ್‌ ಪ್ರಚಾರ, ವ್ಯವಹಾರಗಳಲ್ಲಿ ತೊಡಗಿರುವ ಕಂಪೆನಿಗಳಿಗೆ ಬಿಡ್ ಸಲ್ಲಿಸುವಂತಿಲ್ಲ. ಅಷ್ಟೇ ಅಲ್ಲ; ತಂಬಾಕು, ಮದ್ಯ, ಅಶ್ಲೀಲತೆ ಮತ್ತು  ಸಾರ್ವಜನಿಕರ ನೈತಿಕತೆಗೆ ಧಕ್ಕೆ ತರುವ ಯಾವುದೇ ರೀತಿಯ ಸಂಸ್ಥೆಗಳಿಗೂ ನಿರ್ಬಂಧ ಹಾಕಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಕ್ಯಾಪ್ಟನ್ ಜೊತೆ ಹೊಂದಾಣಿಕೆಯಾಗ್ತಿಲ್ಲ ಎಂದಾಕ್ಷಣ ಕೋಚ್ ಹುದ್ದೆ ಬಿಟ್ಟಿದ್ದ ಅನಿಲ್ ಕುಂಬ್ಳೆ: ಆದ್ರೆ ಗಂಭೀರ್...

ಗೌತಮ್ ಗಂಭೀರ್ ಹಾಯ್ ಹಾಯ್: ಸೋತ ಬೆನ್ನಲ್ಲೇ ಕೋಚ್ ಗೆ ಮೈದಾನದಲ್ಲೇ ಫ್ಯಾನ್ಸ್ ಮಂಗಳಾರತಿ Video

IND vs SA: ಗೌತಮ್ ಗಂಭೀರ್ ತೊಲಗಬೇಕು, ಇದು ಬಿಸಿಸಿಐಗೂ ತಲುಪಬೇಕು

ಬಾಸ್ಕೆಟ್ ಬಾಲ್ ಕಂಬ ಬಿದ್ದು ರಾಷ್ಟ್ರಮಟ್ಟದ ಆಟಗಾರ ಸಾವು, ಎದೆ ಝಲ್ಲೆನಿಸುತ್ತದೆ, Video

ಭಾರತದಲ್ಲಿ ಹೊಸ ಇತಿಹಾಸ ನಿರ್ಮಿಸಿದ ತೆಂಬಾ ಬವುಮಾ ಪಡೆ: ಗೌತಮ್‌ ಗಂಭೀರ್‌ಗೆ ಭಾರೀ ಮುಖಭಂಗ

ಮುಂದಿನ ಸುದ್ದಿ
Show comments