ಮಹಿಳಾ ಟಿ20 ವಿಶ್ವಕಪ್ ಗೆ ಭಾರತ ತಂಡದ ಘೋಷಣೆ ಮಾಡಿದ ಬಿಸಿಸಿಐ

ಭಾನುವಾರ, 12 ಜನವರಿ 2020 (16:57 IST)
ಮುಂಬೈ: ಫೆಬ್ರವರಿ 21 ರಿಂದ ಆರಂಭವಾಗಲಿರುವ ಮಹಿಳಾ ಟಿ20 ವಿಶ್ವಕಪ್ ಕ್ರೀಡಾಕೂಟಕ್ಕೆ ಭಾರತ ಮಹಿಳಾ ಕ್ರಿಕೆಟ್ ತಂಡದ ಘೋಷಣೆಯಾಗಿದೆ.


ಹರ್ಮನ್ ಪ್ರೀತ್ ನೇತೃತ್ವದಲ್ಲಿ 15 ಸದಸ್ಯರ ಮಹಿಳಾ ತಂಡವನ್ನು ಬಿಸಿಸಿಐ ಘೋಷಣೆ ಮಾಡಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ಮಹಿಳಾ ವಿಶ್ವಕಪ್ ತಂಡದಲ್ಲಿ ಪಶ್ಚಿಮ ಬಂಗಾಲದ ರಿಷಾ ಘೋಷ್ ಬಿಟ್ಟರೆ ಉಳಿದ ಆಟಗಾರ್ತಿಯರೆಲ್ಲಾ ಹಳಬರೇ ಆಗಿದ್ದಾರೆ.

ತಂಡ ಇಂತಿದೆ: ಹರ್ಮನ್ ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧನ, ಶಫಾಲಿ ವರ್ಮ, ಜೆಮಿಮಾ ರೋಡ್ರಿಗಝ್, ಹರ್ಲಿನ್ ಡಿಯೋಲ್, ದೀಪ್ತಿ ಶರ್ಮಾ,ವೇದಾ ಕೃಷ್ಣಮೂರ್ತಿ, ರಿಚಾ ಘೋಷ್,  ತಾನಿಯಾ ಭಾಟಿಯಾ, ಪೂನಮ್ ಯಾದವ್, ರಾಧಾ ಯಾದವ್, ರಾಜೇಶ್ವರಿ ಗಾಯಕ್ವಾಡ್,  ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್, ಆರುಂಧತಿ ರೆಡ್ಡಿ ಮತ್ತು ನುಝತ್ ಪ್ರವೀಣ್.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಟಿ20 ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿಯನ್ನೂ ಮೀರಿದ ಕೆಎಲ್ ರಾಹುಲ್