Publish Date: Mon, 05 Jan 2026 (10:41 IST)
Updated Date: Mon, 05 Jan 2026 (10:45 IST)
ಬೆಂಗಳೂರು: ಬಾಂಗ್ಲಾದೇಶೀಯರೇ ನಿಮಗೆ ನಿಜವಾಗಿ ಭಾರತದ ಮೇಲೆ ಸೇಡು ತೀರಿಸಬೇಕೆಂದಿದ್ದರೆ ಕ್ರಿಕೆಟ್ ಅಲ್ಲ, ನಿಮ್ಮ ದೇಶವರನ್ನು ಮೊದಲು ಭಾರತದಿಂದ ವಾಪಸ್ ಕರೆಸಿಕೊಳ್ಳಿ.. ಹೀಗಂತ ಈಗ ಸೋಷಿಯಲ್ ಮೀಡಿಯಾದಲ್ಲಿ ಬಾಂಗ್ಲಾದೇಶದವರನ್ನು ಕಿಚಾಯಿಸಲಾಗುತ್ತಿದೆ.
ಐಪಿಎಲ್ ನಲ್ಲಿ ಬಾಂಗ್ಲಾ ಆಟಗಾರ ಮುಸ್ತಫಿಜುರ್ ನನ್ನು ಕೈ ಬಿಟ್ಟಿದ್ದಕ್ಕೆ ಆ ದೇಶ ಭಾರತದ ಮೇಲೆ ಸೇಡು ತೀರಿಸಲು ಮುಂದಾಗಿದೆ. ಭಾರತದಲ್ಲಿ ಟಿ20 ವಿಶ್ವಕಪ್ ಕ್ರಿಕೆಟ್ ಆಡಲ್ಲ ಎಂದಿದೆ. ಇನ್ನು ಬಾಂಗ್ಲಾದೇಶದಲ್ಲಿ ಐಪಿಎಲ್ ಪ್ರಸಾರಕ್ಕೂ ನಿರ್ಬಂಧ ಹೇರಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಭಾರತದ ಜೊತೆಗಿನ ಉಭಯ ದೇಶಗಳ ಸರಣಿಗೂ ಕತ್ತರಿ ಹಾಕಲು ಯೋಜನೆ ನಡೆಸಿದೆ.
ಬಾಂಗ್ಲಾದೇಶವೇನೋ ಭಾರತದ ಮೇಲೆ ಸೇಡು ತೀರಿಸಿಕೊಳ್ಳಲು ಈ ರೀತಿ ಎಲ್ಲಾ ಪ್ಲ್ಯಾನ್ ಮಾಡುತ್ತಿದೆ. ಆದರೆ ಬಾಂಗ್ಲಾದಲ್ಲಿ ಹೊಟ್ಟೆಗೆ ಹಿಟ್ಟಿಲ್ಲದೇ ಅಲ್ಲಿನ ಎಷ್ಟೋ ನಾಗರಿಕರು ನಮ್ಮ ದೇಶಕ್ಕೆ ಕಳ್ಳ ಮಾರ್ಗದಲ್ಲಿ ಬಂದು ಇಲ್ಲಿ ಜೀವನ ಮಾಡುತ್ತಿದ್ದಾರೆ.
ಇದಕ್ಕೇ ಸೋಷಿಯಲ್ ಮೀಡಿಯಾದಲ್ಲಿ ಭಾರತೀಯರು ಬಾಂಗ್ಲಾದೇಶಕ್ಕೆ ಟಾಂಗ್ ಕೊಟ್ಟಿದ್ದಾರೆ. ನಿಜವಾಗಲೂ ನಿಮಗೆ ಸೇಡು ತೀರಿಸಿಕೊಳ್ಳಬೇಕೆಂದಿದ್ದರೆ ತಾಕತ್ತಿದ್ದರೆ ನಿಮ್ಮವರನ್ನು ಇಲ್ಲಿಂದ ವಾಪಸ್ ಕರೆಸಿಕೊಳ್ಳಿ ಎಂದಿದೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಬಾಂಗ್ಲಾದೇಶೀಯರು ಭಾರತದ ಮೇಲೇ ಸೇಡು ತೀರಿಸಿಕೊಳ್ಳುತ್ತದಂತೆ ಎಂದು ವ್ಯಂಗ್ಯ ಮಾಡಿದ್ದಾರೆ.