Webdunia - Bharat's app for daily news and videos

Install App

ಕೊನೆಗೂ ಇಂಗ್ಲೆಂಡ್ ಮಣ್ಣುಮುಕ್ಕಿಸಿದ ಬಾಂಗ್ಲಾ

Webdunia
ಸೋಮವಾರ, 31 ಅಕ್ಟೋಬರ್ 2016 (08:57 IST)
ಢಾಕಾ: ಕಳೆದ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿತ್ತು. ಆದರೆ ಈ ಬಾರಿ ತುತ್ತು ಕೆಳಗೆ ಜಾರದಂತೆ ಸ್ಪಿನ್ನರ್ ಮೆಹದಿ ಹಸನ್ ನೋಡಿಕೊಂಡರು. ಹೀಗಾಗಿ ಇತಿಹಾಸದಲ್ಲೇ ಮೊದಲ ಬಾರಿಗೆ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿತು.

273 ರನ್ ಗಳ ಬೆನ್ನತ್ತಿದ್ದ ಇಂಗ್ಲೆಂಡ್ ಚಹಾ ವಿರಾಮದ ವೇಳೆಗೆ ಯಾವುದೇ ವಿಕೆಟ್ ನಷ್ಟವಿಲ್ಲದೆ 100 ರನ್ ಪೇರಿಸಿತ್ತು. ಆಗ ಬಾಂಗ್ಲಾ ಗೆಲ್ಲುತ್ತದೆಂದು ಯಾರೂ ಕನಸಲ್ಲೂ ಎಣಿಸಿರಲಿಲ್ಲ. ಆದರೆ ಯುವ ಬೌಲರ್ ಮೆಹದಿ ಹಸನ್ ರಂಗಕ್ಕೆ ಇಳಿಯುತ್ತಿದ್ದಂತೆ ಪಂದ್ಯದ ಚಿತ್ರಣವೇ ಬದಲಾಯಿತು.

ಕೊನೆಯ ಅವಧಿಯಲ್ಲಿ ಹಸನ್ ಒಬ್ಬರೇ 6 ವಿಕೆಟ್ ಕಿತ್ತರು. ಕೊನೆಯಲ್ಲಿ ಇಂಗ್ಲೆಂಡ್ 164 ಕ್ಕೆ ಆಲೌಟ್ ಆಯಿತು. ಒಟ್ಟಾರೆ ಈ ಪಂದ್ಯದಲ್ಲಿ ಹಸನ್ 12 ವಿಕೆಟ್ ಕಿತ್ತರು.

ಬಾಂಗ್ಲಾದೇಶಕ್ಕೆ 2000 ರಲ್ಲಿ ಟೆಸ್ಟ್ ಮಾನ್ಯತೆ ಸಿಕ್ಕಿತ್ತು. ಇದುವರೆಗೆ ಅದು ವಿವಿಧ ದೇಶಗಳ ವಿರುದ್ಧ 95 ಟೆಸ್ಟ್ ಪಂದ್ಯವಾಡಿತ್ತು. ಇದು ಬಾಂಗ್ಲಾದ 8 ನೇ ಗೆಲುವಾಗಿದೆ. ಹೀಗಾಗಿ ಇಡೀ ದೇಶವೇ ಸಂಭ್ರಮದಲ್ಲಿ ಮುಳುಗಿದೆ. ಇಂಗ್ಲೆಂಡ್ ಮುಂದಿನ ಸರಣಿಗಾಗಿ ಭಾರತಕ್ಕೆ ಆಗಮಿಸಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ರಿಷಭ್ ಪಂತ್ ನಾಲ್ಕನೇ ಟೆಸ್ಟ್ ಆಡುವ ಬಗ್ಗೆ ಇಲ್ಲಿದೆ ಲೇಟೆಸ್ಟ್ ಅಪ್ ಡೇಟ್

ತೂಕ ಇಳಿಸಿಕೊಂಡ ಕ್ರಿಕೆಟಿಗ ಸರ್ಫರಾಜ್ ಖಾನ್: ಇವರೇನಾ ಅವರು

Kantara Chpater 1: ಕೊನೆಗೂ ಕಾಂತಾರ ಚಾಪ್ಟರ್ 1 ಶೂಟಿಂಗ್ ಮುಗಿಯಿತು: video

ಮ್ಯಾಂಚೆಸ್ಟರ್ ನಲ್ಲಿ ಹೊಸ ದಾಖಲೆ ಬರೆಯಲು ಸಜ್ಜಾದ ಕೆಎಲ್ ರಾಹುಲ್

IND vs ENG: ಆಕಾಶ್ ದೀಪ್, ಅರ್ಷ್ ದೀಪ್ ಬಳಿಕ ಟೀಂ ಇಂಡಿಯಾದ ಮತ್ತೊಬ್ಬ ಆಟಗಾರನಿಗೆ ಗಾಯ

ಮುಂದಿನ ಸುದ್ದಿ
Show comments