Webdunia - Bharat's app for daily news and videos

Install App

ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಸೇರಿದ ಬೇಬಿ ಎಬಿ: ಇನ್ನಾದರೂ ಪುಟದೇಳುತ್ತಾ ಧೋನಿ ಪಡೆ

Sampriya
ಶುಕ್ರವಾರ, 18 ಏಪ್ರಿಲ್ 2025 (19:05 IST)
Photo Credit X
ಚೆನ್ನೈ: ಐಪಿಎಲ್‌ನಲ್ಲಿ ಈ ಬಾರಿ ಆಡಿರುವ ಏಳು ಪಂದ್ಯಗಳಲ್ಲಿ ಐದರಲ್ಲಿ ಸೋತು ಪಾಯಿಂಟ್ಸ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಪ್ರಬಲ ಆಲ್‌ರೌಂಡ್‌ ಆಟಗಾರನ ಆಗಮನವಾಗಿದ್ದು, ತಂಡವು ಪುಟಿದೇಳುವ ನಿರೀಕ್ಷೆ ಮೂಡಿಸಿದೆ.

ದಕ್ಷಿಣ ಆಫ್ರಿಕಾದ ಯುವ ಆಲ್‌ರೌಂಡರ್‌ ಡೆವಾಲ್ಡ್‌ ಬ್ರೆವಿಸ್ ಅವರು ಚೆನ್ನೈ ತಂಡವನ್ನು ಸೇರಿಕೊಂಡಿದ್ದಾರೆ. ಚೆನ್ನೈ ತಂಡದಲ್ಲಿದ್ದ ವೇಗಿ ಗುರಜಪನೀತ್‌ ಸಿಂಗ್‌ ಗಾಯಗೊಂಡಿದ್ದು, ಅವರ ಸ್ಥಾನವನ್ನು ಬ್ರೆವಿಸ್ ತುಂಬುವರು. ಹೀಗಾಗಿ, ಮಹೇಂದ್ರ ಸಿಂಗ್‌ ಧೋನಿ ಪಡೆಗೆ ಶಕ್ತಿ ಬಂದಂತಾಗಿದೆ.

21 ವರ್ಷ ವಯಸ್ಸಿನ ಬ್ರೆವಿಸ್‌ ಈಗಾಗಲೇ ಐಪಿಎಲ್‌, ಸಿಪಿಎಲ್‌, ಎಂಎಲ್‌ಸಿ ಮತ್ತು ಎಸ್‌ಎ20 ಟೂರ್ನಿಗಳಲ್ಲಿ ಆಡಿದ್ದಾರೆ. ಈ ವರ್ಷ ಎಸ್‌ಎ 20 ಲೀಗ್‌ನಲ್ಲಿ ಎಂಐ ಕೇಪ್‌ ಟೌನ್ ತಂಡ ಮೊದಲ ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಅವರ ಪಾತ್ರ ಪ್ರಮುಖ. 184.17ರ ಸ್ಟ್ರೈಕ್‌ರೇಟ್‌ನಲ್ಲಿ ಅವರು 291 ರನ್ ಬಾರಿಸಿದ್ದು, ಸರ್ವಾಧಿಕ ಸ್ಕೋರ್‌ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಆರನೇ ಸ್ಥಾನ ಗಳಿಸಿದ್ದರು.

ಈ ಹಿಂದೆ 2022 ಮತ್ತು 2024ರಲ್ಲಿ ಮುಂಬೈ ಇಂಡಿಯನ್ಸ್ ಪರ ಅವರು ಒಟ್ಟು 10 ಪಂದ್ಯಗಳನ್ನು ಆಡಿದ್ದರು. ಅವರ ಆಟ ದಿಗ್ಗಜ ಬ್ಯಾಟರ್‌ ಎಬಿ ಡಿ ವಿಲಿಯರ್ಸ್‌ ಆಟವನ್ನು ಹೋಲುವ ಕಾರಣ ಅವರನ್ನು ‘ಬೇಬಿ ಎಬಿ’ ಎಂದೂ ಕರೆಯಲಾಗುತ್ತಿದೆ. ಅವರು ₹2.2 ಕೋಟಿ ಮೊತ್ತಕ್ಕೆ ಸಿಎಸ್‌ಕೆ ಪಾಲಾಗಿದ್ದಾರೆ.<>

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ENG vs IND: ಇಂಗ್ಲೆಂಡ್ ತಂಡಕ್ಕೆ ದೊಡ್ಡ ಆಘಾತ, ತಂಡದ ನಾಯಕನೇ ಪ್ರಮುಖ ಪಂದ್ಯದಿಂದ ಹೊರಕ್ಕೆ

ENG vs IND: ನಾಳೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ಟೀಂ ಇಂಡಿಯಾಗೆ ಬಿಗ್ ಶಾಕ್‌, ಪ್ರಮುಖ ಆಟಗಾರನೇ ಪಂದ್ಯಕ್ಕಿಲ್ಲ

ಟಿ20 ಕ್ರಿಕೆಟ್‌ನಲ್ಲಿ ಅಗ್ರಸ್ಥಾನಕ್ಕೇರಿದ ಭಾರತದ ಎಡಗೈ ಬ್ಯಾಟರ್‌ ಅಭಿಷೇಕ್ ಶರ್ಮಾ

Video: ಗೌತಮ್ ಗಂಭೀರ್ ಪಿಚ್ ಕ್ಯುರೇಟರ್ ನಡುವೆ ನಿಜಕ್ಕೂ ನಡೆದಿದ್ದೇನು ಇಲ್ಲಿದೆ ವಿವರ

ಇಂಗ್ಲೆಂಡ್ ವಿರುದ್ಧ ಐದನೇ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ವಿಕೆಟ್ ಕೀಪರ್ ಯಾರು

ಮುಂದಿನ ಸುದ್ದಿ
Show comments