Select Your Language

Notifications

webdunia
webdunia
webdunia
webdunia

Babar Azam: ಪಾಕಿಸ್ತಾನ ತಂಡದ ನಾಯಕತ್ವದ ಸಹವಾಸವೇ ಬೇಡವೆಂದ ಬಾಬರ್ ಅಜಮ್

Babar Azam

Krishnaveni K

ಇಸ್ಲಾಮಾಬಾದ್ , ಬುಧವಾರ, 2 ಅಕ್ಟೋಬರ್ 2024 (11:57 IST)
ಇಸ್ಲಾಮಾಬಾದ್: ಪಾಕಿಸ್ತಾನ ಕ್ರಿಕೆಟ್ ತಂಡದ ಇತ್ತೀಚೆಗಿನ ಕಳಪೆ ನಿರ್ವಹಣೆಯಿಂದ ಬೇಸತ್ತು ನಾಯಕ ಬಾಬರ್ ಅಜಮ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪಾಕಿಸ್ತಾನ ತಂಡದ ಸೀಮಿತ ಓವರ್ ಗಳ ಪಂದ್ಯದ ನಾಯಕರಾಗಿದ್ದ ಬಾಬರ್ ಅಜಮ್ ಈಗ ನಾಯಕತ್ವ ತ್ಯಜಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಅವರ ನಾಯಕತ್ವದ ಬಗ್ಗೆ ಮತ್ತು ವೈಯಕ್ತಿಕ ಫಾರ್ಮ್ ಬಗ್ಗೆ ಇತ್ತೀಚೆಗಿನ ದಿನಗಳಲ್ಲಿ ಭಾರೀ ಟೀಕೆಗಳು ಬಂದಿತ್ತು. ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನಕ್ಕೆ ಅವರನ್ನೇ ದೂಷಿಸಲಾಗುತ್ತಿತ್ತು.

ಇದೆಲ್ಲದರ ಹಿನ್ನಲೆಯಲ್ಲಿ  ಅವರು ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಮುಂಬರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ಹೊಸ ನಾಯಕನ ನಾಯಕತ್ವದಲ್ಲಿ ಕಣಕ್ಕಿಳಿಯುವುದು ಪಕ್ಕಾ ಆಗಿದೆ. ಬಾಬರ್ ಈ ಹಿಂದೆ ಏಕದಿನ ವಿಶ್ವಕಪ್ ಸೋಲಿನ ಬಳಿಕ ನಾಯಕತ್ವ ತ್ಯಜಿಸಿದ್ದರು. ಬಳಿಕ ಮತ್ತೆ ಟಿ20 ವಿಶ್ವಕಪ್ ವೇಳೆಗೆ ಅವರನ್ನೇ ತಂಡದ ನಾಯಕನಾಗಿ ಮಾಡಲಾಗಿತ್ತು.

ಬಾಬರ್ ಅಜಮ್ ನೇತೃತ್ವದಲ್ಲಿ ಪಾಕಿಸ್ತಾನ 147 ಪಂದ್ಯಗಳಲ್ಲಿ ಆಡಿದ್ದು, 83 ಗೆಲುವು ಮತ್ತು 50 ಸೋಲು ಕಂಡಿದೆ. ನಾಲ್ಕು ಪಂದ್ಯಗಳು ಡ್ರಾ ಮತ್ತು 2 ಪಂದ್ಯಗಳು ಟೈ ಆಗಿತ್ತು.  ಇನ್ನು ಮುಂದೆ ಕೇವಲ ಆಟಗಾರನಾಗಿ ತಂಡದಲ್ಲಿ ಮುಂದುವರಿಯುವುದಾಗಿ ಅವರು ಪ್ರಕಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೊಹಮ್ಮದ್ ಶಮಿಯನ್ನು ಮರೆಸಿಯೇ ಬಿಟ್ಟ ಆಕಾಶ್ ದೀಪ್ ಸಿಂಗ್