ನವದೆಹಲಿ: ಭಾರತದಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಪಾಕಿಸ್ತಾನ ತಂಡದ ಹೀನಾಯ ಪ್ರದರ್ಶನ ಎಲ್ಲರಿಂದ ಟೀಕೆಗೊಳಗಾಗಿದೆ.
ಮೊನ್ನೆಯಷ್ಟೇ ದುರ್ಬಲ ಅಫ್ಘಾನಿಸ್ತಾನ ವಿರುದ್ಧವೂ ಪಾಕ್ ತಂಡ ಮುಗ್ಗರಿಸಿತ್ತು. ಇದರಿಂದಾಗಿ ಪಾಕ್ ತಂಡದ ಬದ್ಧತೆ ಬಗ್ಗೆ, ಫಿಟ್ನೆಸ್, ನಾಯಕತ್ವದ ಬಗ್ಗೆ ಪ್ರಶ್ನೆ ಮೂಡಲಾರಂಭಿಸಿದೆ.
ಮೂಲಗಳ ಪ್ರಕಾರ ಈ ಏಕದಿನ ವಿಶ್ವಕಪ್ ಬಳಿಕ ಪಾಕ್ ತಂಡದಲ್ಲಿ ಭಾರೀ ಬದಲಾವಣೆಯಾಗುವ ಸಾಧ‍್ಯತೆಯಿದೆ. ಅದರಲ್ಲೂ ನಾಯಕ ಬಾಬರ್ ಅಜಮ್ ಗೆ ಗೇಟ್ ಪಾಸ್ ನೀಡುವ ಸಾಧ‍್ಯತೆ ದಟ್ಟವಾಗಿದೆ. ಪಾಕ್ ಕ್ರಿಕೆಟಿಗರ ಫಿಟ್ನೆಸ್ ಬಗ್ಗೆ ಮಾಜಿ ನಾಯಕ ವಾಸಿಂ ಅಕ್ರಂ ಪ್ರಶ್ನೆ ಮಾಡಿದ್ದರು. ಮಾಜಿ ಕ್ರಿಕೆಟಿಗ ಬಸಿತ್ ಅಂತೂ ಕೊಹ್ಲಿಯಂತೇ ಬಾಬರ್ ಕೂಡಾ ನಾಯಕತ್ವ ತ್ಯಜಿಸಲಿ ಎಂದು ಸಲಹೆ ನೀಡಿದ್ದರು.