Select Your Language

Notifications

webdunia
webdunia
webdunia
webdunia

ಪಾಕಿಸ್ತಾನಕ್ಕೆ ವೈಟ್ ವಾಶ್ ಮಾಡಿದ ಆಸ್ಟ್ರೇಲಿಯಾ

ಪಾಕಿಸ್ತಾನಕ್ಕೆ ವೈಟ್ ವಾಶ್ ಮಾಡಿದ ಆಸ್ಟ್ರೇಲಿಯಾ
Sydney , ಶನಿವಾರ, 7 ಜನವರಿ 2017 (11:39 IST)
ಸಿಡ್ನಿ: ಪಾಕಿಸ್ತಾನ ವಿರುದ್ಧ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ 220 ರನ್ ಗಳಿಂದ ಗೆದ್ದು ಕೊಂಡಿದೆ. ಇದರೊಂದಿಗೆ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಪಾಕ್ ತಂಡ ವೈಟ್ ವಾಶ್ ಅವಮಾನ ಎದುರಿಸಿದೆ.

ಅಂತಿಮ ದಿನ ಚಹಾ  ವಿರಾಮಕ್ಕೆ ಮೊದಲು ಪ್ರವಾಸಿ ಪಾಕ್ ತಂಡ 244 ಕ್ಕೆ ಆಲೌಟ್ ಆಯಿತು. ಇದರೊಂದಿಗೆ  ಸರಣಿಯನ್ನು ಆಸ್ಟ್ರೇಲಿಯಾ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಗೆಲ್ಲಲು 465 ರನ್ ಗಳ ಗುರಿ ಬೆನ್ನಟ್ಟಿದ ಪಾಕ್ ಬ್ಯಾಟ್ಸ್ ಮನ್ ಗಳು ಆಸೀಸ್ ದಾಳಿಗೆ ಸಂಪೂರ್ಣ ವಿಫಲರಾದರು.

ಮುಂದಿನ ತಿಂಗಳು ಆಸ್ಟ್ರೇಲಿಯಾ ಭಾರತ ಪ್ರವಾಸ ಮಾಡಲಿದೆ. ಈ ಹಿನ್ನಲೆಯಲ್ಲಿ ಆಸೀಸ್ ಗೆ ಇದು ಆತ್ಮವಿಶ್ವಾಸ ಹೆಚ್ಚಿಸುವ ಗೆಲುವಾಗಲಿದೆ. ಆದರೆ ಭಾರತದ ಪಿಚ್ ಆಸ್ಟ್ರೇಲಿಯಾ ಪಿಚ್ ಗಿಂತ ಭಿನ್ನವಾಗಿದೆ. ಆದರೂ ಇಂಗ್ಲೆಂಡ್ ನಷ್ಟು ಸುಲಭ ತುತ್ತು ನಾನಲ್ಲ ಎಂಬುದನ್ನು ಟೀಂ ಇಂಡಿಯಾಕ್ಕೆ ಈ ಮೂಲಕ ರವಾನಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್ ಪಂತ್ ಗೆ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಧೋನಿಯಿಂದ ಕಲಿಯುವಾಸೆ!