ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 141ಕ್ಕೆ 7 ವಿಕೆಟ್ ಕಳೆದುಕೊಂಡು ಸೋಲಿನ ದವಡೆಯಲ್ಲಿದೆ. ರಂಗನಾ ಹೆರಾತ್ ಮಾರಕ ಸ್ಪಿನ್ ಬೌಲಿಂಗ್ ದಾಳಿ ಮೂಲಕ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್ ಮತ್ತು ಅಡಾಂ ವೋಗ್ಸ್ ಮತ್ತು ಮಿಚೆಲ್ ಮಾರ್ಷ್ ವಿಕೆಟ್‌ಗಳನ್ನು ಕಬಳಿಸಿ ಶ್ರೀಲಂಕಾಗೆ ಮೇಲುಗೈ ಒದಗಿಸಿಕೊಟ್ಟರು.
ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 203 ರನ್‌ಗೆ ಆಲೌಟ್ ಆಗಿದ್ದು, ಶ್ರೀಲಂಕಾ 117ರನ್‌ಗೆ ಆಲೌಟ್ ಆಗಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಕುಸಾಲ್ ಮೆಂಡಿಸ್ ಅವರ ಮನೋಜ್ಞ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ 353 ರನ್ ಸ್ಕೋರ್ ಮಾಡಿದೆ.
ಇದರಿಂದ ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್‌ನಲ್ಲಿ ಗೆಲುವಿಗೆ 268 ರನ್ ಸ್ಕೋರ್ ಮಾಡಬೇಕಿದ್ದು, ರಂಗನಾಥ್ ಹೆರಾತ್ ಮಾರಕ ಬೌಲಿಂಗ್ ದಾಳಿಗೆ ಬಲಿಯಾಗಿ 7 ವಿಕೆಟ್ ಕಳೆದುಕೊಂಡು 141 ರನ್ ಗಳಿಸಿದೆ. ಆಸ್ಟ್ರೇಲಿಯಾ ಗೆಲುವಿಗೆ 127 ರನ್ ಬೇಕಾಗಿದ್ದು ಸೋಲಿನ ಸುಳಿಯಲ್ಲಿ ಸಿಕ್ಕಿಬಿದ್ದಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.