Select Your Language

Notifications

webdunia
webdunia
webdunia
webdunia

ಅಭ್ಯಾಸ ಪಂದ್ಯದಲ್ಲೇ ತಡವರಿಸಿದ ಆಸ್ಟ್ರೇಲಿಯಾ

ಅಭ್ಯಾಸ ಪಂದ್ಯದಲ್ಲೇ ತಡವರಿಸಿದ ಆಸ್ಟ್ರೇಲಿಯಾ
Mumbai , ಶುಕ್ರವಾರ, 17 ಫೆಬ್ರವರಿ 2017 (12:20 IST)
ಮುಂಬೈ: ಭಾರತದ ವಿರುದ್ಧ ನಡೆಯಲಿರುವ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯ  ಪೂರ್ವಭಾವಿಯಾಗಿ ಮುಂಬೈನ ಬ್ರೆಬೋರ್ನ್ ಮೈದಾನದಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಆರಂಭಿಕ ಆಘಾತ ಅನುಭವಿಸಿದೆ.

 
ಯುವ ಬೌಲರ್ ನವದೀಪ್ ಸಾಯ್ನಿ ಬೌಲಿಂಗ್ ಗೆ ಮುಗ್ಗರಿಸಿದ ಆಸೀಸ್ ಊಟದ ವಿರಾಮದ ವೇಳೆಗೆ 2 ವಿಕೆಟ್ ಕಳೆದುಕೊಂಡು 81 ರನ್ ಗಳಿಸಿದೆ. ಭಾರತ ಎ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಟಾಸ್ ಗೆದ್ದು ಆಸ್ಟ್ರೇಲಿಯಾವನ್ನು ಮೊದಲು ಬ್ಯಾಟಿಂಗ್ ಗೆ ಇಳಿಸಿದರು.

ಪ್ರಚಂಡ ಫಾರ್ಮ್ ನಲ್ಲಿರುವ ಆರಂಭಿಕ ಡೇವಿಡ್ ವಾರ್ನರ್ ಕೇವಲ 25 ರನ್ ಗಳಿಸಿ ಔಟಾದರು. ಸದ್ಯಕ್ಕೆ ಕ್ರೀಸ್ ನಲ್ಲಿ ನಾಯಕ ಸ್ಟೀವ್ ಸ್ಮಿತ್ 31 ರನ್ ಮತ್ತು ಶಾನ್ ಮಾರ್ಶ್ 6 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಮೂರು ದಿನಗಳ ಅಭ್ಯಾಸ ಪಂದ್ಯ ಇದಾಗಿದ್ದು, ಫೆಬ್ರವರಿ 23 ರಿಂದ ಪ್ರಥಮ ಟೆಸ್ಟ್ ಆರಂಭವಾಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಬ್ಬಾ… ವಿರಾಟ್ ಕೊಹ್ಲಿ ಬ್ರಾಂಡ್ ವ್ಯಾಲ್ಯೂ ಎಷ್ಟು ಗೊತ್ತಾ?