Select Your Language

Notifications

webdunia
webdunia
webdunia
webdunia

ಭಾರತಕ್ಕೆ ಬಂದಿಳಿದ ಆಸ್ಟ್ರೇಲಿಯಾ ಕ್ರಿಕೆಟಿಗರ ಲಗೇಜ್ ನೋಡಿ ಬೆಚ್ಚಿ ಬಿದ್ದ ಅಧಿಕಾರಿಗಳು!

ಭಾರತಕ್ಕೆ ಬಂದಿಳಿದ ಆಸ್ಟ್ರೇಲಿಯಾ ಕ್ರಿಕೆಟಿಗರ ಲಗೇಜ್ ನೋಡಿ ಬೆಚ್ಚಿ ಬಿದ್ದ ಅಧಿಕಾರಿಗಳು!
Mumbai , ಬುಧವಾರ, 15 ಫೆಬ್ರವರಿ 2017 (10:08 IST)
ಮುಂಬೈ: ಭಾರತದಲ್ಲಿ ನಡೆಯಲಿರುವ ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಗೆ ಆಸ್ಟ್ರೇಲಿಯಾ ತಂಡ ಮುಂಬೈ ವಿಮಾನದಲ್ಲಿ ಬಂದಿಳಿಯಿತು. ಆದರೆ ಮೂಗಿಗಿಂತ ದೊಡ್ಡ ಮೂಗುತಿ ಎನ್ನುವ ಹಾಗೆ ಕ್ರಿಕೆಟಿಗರ ಲಗೇಜ್ ನೋಡಿ ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ.

 
ಕಾರಣ, ನಾಲ್ಕು ಪಂದ್ಯ ಆಡಲು ಭಾರತ ಪ್ರವಾಸ ಕೈಗೊಂಡಿರುವುದಾದರೂ, ಆಸೀಸ್ ಹುಡುಗರ ಲಗೇಜ್ ಗಾತ್ರ ಅಷ್ಟು ದೊಡ್ಡ ಪ್ರಮಾಣದಲ್ಲಿದೆ. ನಾಯಕ ಸ್ಟೀವ್ ಸ್ಮಿತ್ ಸಹಿತ ಆಟಗಾರರು ಹೊರಲಾರದ ಬ್ಯಾಗ್ ಗಳನ್ನು ತಳ್ಳಿಕೊಂಡು ಬರುತ್ತಿರುವುದು ನೋಡಿ ಬಿಸಿಸಿಐ ಅಧಿಕಾರಿಗಳು ಸಹಾಯ ಮಾಡಲು ಮುಂದಾದರು.

ಆದರೆ ಪರವಾಗಿಲ್ಲ, ನಮ್ಮ ಲಗೇಜ್ ನಾವೇ ಹೊರುತ್ತೇವೆಂದು ಆಸೀಸ್ ಕ್ರಿಕೆಟಿಗರು ಮಣ ಭಾರದ ಲಗೇಜ್ ಗಳನ್ನು ಎತ್ತಿ ಎತ್ತಿ ತಳ್ಳುಗಾಡಿಗೆ ಹಾಕಿ ತಮ್ಮ ಬಸ್ಸು ಏರಿದರು. ಬಹುಶಃ ಕಠಿಣ ಸರಣಿಗೆ ಸಿದ್ಧವಾಗಲು ಇಂತಹದ್ದೊಂದು ಕಠಿಣ ಕಸರತ್ತು ನಡೆಸುತ್ತಿದ್ದಾರೋ ಏನೋ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

‘ಟೀಂ ಇಂಡಿಯಾ ಕ್ರಿಕೆಟಿಗರನ್ನು ಎಷ್ಟು ಬೇಕಾದರೂ ಸ್ಲೆಡ್ಜಿಂಗ್ ಮಾಡಿ’