Select Your Language

Notifications

webdunia
webdunia
webdunia
webdunia

ನಾಲ್ಕೇ ರನ್ನಿಗೆ ಆಸ್ಟ್ರೇಲಿಯಾ ಆಲೌಟ್!

ನಾಲ್ಕೇ ರನ್ನಿಗೆ ಆಸ್ಟ್ರೇಲಿಯಾ ಆಲೌಟ್!
Pune , ಶುಕ್ರವಾರ, 24 ಫೆಬ್ರವರಿ 2017 (09:42 IST)
ಪುಣೆ: ಭಾರತದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ತಂಡ ನಾಲ್ಕೇ ರನ್ನಿಗೆ ಆಲೌಟ್ ಆಯಿತು. ಗಾಬರಿಯಾಗಬೇಕಿಲ್ಲ. ನಿನ್ನೆಯ ಮೊತ್ತಕ್ಕೆ ಇಂದು ಕೇವಲ ನಾಲ್ಕು ರನ್ ಸೇರಿಸಿ 260 ಕ್ಕೆ ಆಲೌಟ್ ಆಯಿತು.

 
ನಿನ್ನೆ 256 ಕ್ಕೆ 9 ವಿಕೆಟ್ ಕಳೆದುಕೊಂಡು ಆಸೀಸ್ ದಿನದಾಟ ಮುಗಿಸಿತ್ತು. ಮಿಚೆಲ್ ಸ್ಟಾರ್ಕ್ 57 ರನ್ ಮತ್ತು ಜೋಶ್ ಹೇಝಲ್ ವುಡ್ 1 ರನ್ ಗಳಿಸಿ ಕ್ರೀಸ್ ನಲ್ಲಿದ್ದರು. ಇಂದು ರವಿಚಂದ್ರನ್ ಅಶ್ವಿನ್ ಎಸೆದ ಮೊದಲ ಓವರ್ ನಲ್ಲೇ ಸ್ಟಾರ್ಕ್ ಒಂದು ಬೌಂಡರಿ ಬಾರಿ ನಂತರದ ಬಾಲ್ ನಲ್ಲೇ ಕೆ ಎಲ್ ರಾಹುಲ್ ಗೆ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು.

ಇದರೊಂದಿಗೆ ಕೊನೆಯ ವಿಕೆಟ್ ಗೆ ಈ ಜೋಡಿ ಅರ್ಧಶತಕದ ಜತೆಯಾಟವಾಡಿದರು. ಅಶ್ವಿನ್ ಈ ಇನಿಂಗ್ಸ್ ನಲ್ಲಿ ಮೂರು ವಿಕೆಟ್ ಕಿತ್ತರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಂದ್ಯದ ನಡುವೆ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಪೆವಿಲಿಯನ್ ಗೆ ಹೋಗಿದ್ದಕ್ಕೆ ಕಾರಣ ಏನು ಗೊತ್ತಾ?