Daily Horoscope
✕

ಭುವನೇಶ್ವರ್ ಕುಮಾರ್ ರನ್ನು ಆರ್ ಸಿಬಿ ಖರೀದಿಸಿದಾಗ ನಕ್ಕಿದ್ದ ಆಶಿಶ್ ನೆಹ್ರಾ: ಹಳೇ ವಿಡಿಯೋ ವೈರಲ್

ಕೃಷ್ಣವೇಣಿ ಕೆ
ಮಂಗಳವಾರ, 2 ಜೂನ್ 2026 (11:11 IST)
Photo Credit: X
ಮುಂಬೈ: ಭುವನೇಶ್ವರ್ ಕುಮಾರ್ ಅವರನ್ನು ಆರ್ ಸಿಬಿ ತಂಡ ಎರಡು ವರ್ಷದ ಹಿಂದೆ ಹರಾಜಿನಲ್ಲಿ ಖರೀದಿಸಿದಾಗ ಗುಜರಾತ್ ಟೈಟನ್ಸ್ ಕೋಚ್ ಆಶಿಶ್ ನೆಹ್ರಾ ನಕ್ಕಿದ್ದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಎರಡು ವರ್ಷದ ಹಿಂದೆ ಮೆಗಾ ಹರಾಜಿನಲ್ಲಿ ಭುವನೇಶ್ವರ್ ಕುಮಾರ್ ಅವರನ್ನು ಆರ್ ಸಿಬಿ 10.75 ಕೋಟಿ ರೂ.ಗೆ ಖರೀದಿ ಮಾಡಿತ್ತು. ಅವರ ಮೂಲ ಬೆಲೆ ಅಂದು 2 ಕೋಟಿ ರೂ.ಗಳಾಗಿತ್ತು. ಹೈದರಾಬಾದ್ ತಂಡದಲ್ಲಿದ್ದ ಭುವಿಯನ್ನು ಆರ್ ಸಿಬಿ ಖರೀದಿ ಮಾಡಿದಾಗ ಯಾಕೆ ಮಾಡಿದ್ರೋ ಎಂದು ಎಲ್ಲರೂ ಅಂದುಕೊಂಡಿದ್ದರು.

ವಿಶೇಷವೆಂದರೆ ಅಂದು ಹರಾಜು ಟೇಬಲ್ ನಲ್ಲಿ ಗುಜರಾತ್ ಮಾಲಿಕರೊಂದಿಗೆ ಕೂತಿದ್ದ ಆಶಿಶ್ ನೆಹ್ರಾ ‘ಅಯ್ಯೋ.. ಹೋಗಿ ಹೋಗಿ ಇವನಿಗೆ ಇಷ್ಟೊಂದು ಬೆಲೆ ಕೊಟ್ಟು ಖರೀದಿ ಮಾಡಿದ್ರಾ’ ಎನ್ನುವಂತೆ ಹಣೆ ಚಚ್ಚಿಕೊಂಡ ವಿಡಿಯೋವೊಂದು ಈಗ ವೈರಲ್ ಆಗಿದೆ.

ಅಂದು ಭುವಿಯನ್ನು ನೋಡಿ ಗುಜರಾತ್ ತಂಡದ ಕೋಚ್, ಮಾಲಿಕರು ಲೇವಡಿ ಮಾಡಿದ್ದರು. ಇಂದು ಅದೇ ಭುವಿ ಗುಜರಾತ್ ತಂಡವನ್ನು ಫೈನಲ್ ನಲ್ಲಿ ಆರ್ ಸಿಬಿ ಸೋಲಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ. ಇದಲ್ಲವೇ ಕರ್ಮ ಎಂದರೆ ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.

pic.twitter.com/rHdniZwTc2

— Indian Cricket (@IPL2025Auction) May 31, 2026

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

ಭಾರತ vs ನ್ಯೂಜಿಲೆಂಡ್ 2ನೇ ಟೆಸ್ಟ್: ಸಮಯ, ನೇರಪ್ರಸಾರ ಮತ್ತು ಪಿಚ್ ವರದಿ ಇಲ್ಲಿದೆ

ದಾಖಲೆಯ ದ್ವಿಶತಕ ಗಳಿಸುವ ಮುನ್ನ ವೈಭವ್ ಸೂರ್ಯವಂಶಿ ಕರೆ ಮಾಡಿದ ಆ ನಾಲ್ಕು ಮಂದಿ ಯಾರು ಗೊತ್ತಾ Video

ವೈಭವ್ ಸೂರ್ಯವಂಶಿ ವಿಶ್ವದಾಖಲೆ: 52 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ಬ್ಯಾಟಿಂಗ್ ಸೆನ್ಸೇಷನ್ Video

ಇತಿಹಾಸ ಸೃಷ್ಟಿಸಿದ ವೈಭವ್ ಸೂರ್ಯವಂಶಿ: 28 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವದಾಖಲೆ Video

IND vs NZ test: 720 ರನ್ ಡಿಕ್ಲೇರ್ ಮಾಡಿದರೂ ಗೆಲುವು ಕೈತಪ್ಪಿದ ಭಾರತ: ಐದನೇ ದಿನದ ರೋಚಕ ಹೋರಾಟದಲ್ಲಿ ಮೊದಲ ಟೆಸ್ಟ್ ಡ್ರಾ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments