Publish Date: Mon, 06 Feb 2017 (12:52 IST)
Updated Date: Mon, 06 Feb 2017 (13:11 IST)
ಚಿತ್ತಗಾಂಗ್: ಬಾಂಗ್ಲಾದೇಶ ಕ್ರಿಕೆಟ್ ನಲ್ಲಿ ಆಗಾಗ ಕೆಲವು ಎಡವಟ್ಟುಗಳು ನಡೆಯುತ್ತಲೇ ಇರುತ್ತವೆ. ಇದೀಗ ಮತ್ತೊಂದು ಅಂತಹದ್ದೇ ಘಟನೆ ನಡೆದಿದೆ. ಔಟಾದ ಕೋಪದಲ್ಲಿ ಬ್ಯಾಟ್ಸ್ ಮನ್ ಒಬ್ಬ ಫೀಲ್ಡರ್ ನನ್ನೇ ಸ್ಟಂಪ್ ಬಿಸಾಕಿ ಕೊಲೆಗೈದಿದ್ದಾನೆ.
ಇದು ನಡೆದಿದ್ದು ಚಿತ್ತಗಾಂಗ್ ನಲ್ಲಿ ನಡೆದ ಸ್ಥಳೀಯ ಪಂದ್ಯವೊಂದರಲ್ಲಿ. 14 ವರ್ಷದ ಫೈಸಿಲ್ ಹುಸೇನ್ ಮೃತಪಟ್ಟ ದುರ್ದೈವಿ. ಈತ ಕ್ರೀಸ್ ಪಕ್ಕವೇ ಫೀಲ್ಡಿಂಗ್ ಮಾಡುತ್ತಿದ್ದ. ಆರೋಪಿ ಬ್ಯಾಟ್ಸ್ ಮನ್ ಬೌಲ್ಡ್ ಆಗಿದ್ದ. ಈ ವೇಳೆ ಎಲ್ಲಾ ಎದುರಾಳಿ ಆಟಗಾರರು ಸಂಭ್ರಮಾಚರಿಸುತ್ತಿದ್ದರು.
ಈ ಸಂದರ್ಭದಲ್ಲಿ ಔಟಾಗಿದ್ದಕ್ಕೆ ಕೋಪಗೊಂಡಿದ್ದ ಬ್ಯಾಟ್ಸ್ ಮನ್ ಕೈಗೆ ಸಿಕ್ಕಿದ ಸ್ಟಂಪ್ ಕಿತ್ತೆಸೆದಿದ್ದಾನೆ. ಇದು ಪಕ್ಕದಲ್ಲೇ ಇದ್ದ ಫೈಸಿಲ್ ಕುತ್ತಿಗೆ ತಾಕಿ ಕುತ್ತಿಗೆ ಸೀಳಿದೆ. ತೀವ್ರ ರಕ್ತ ಸ್ರಾವಕ್ಕೊಳಗಾಗಿದ್ದ ಆತ ಆಸ್ಪತ್ರೆಗೆ ಸಾಗಿಸುವ ಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾನೆ. ಇದೀಗ ಆರೋಪಿ ಪೊಲೀಸರ ಅತಿಥಿಯಾಗಿದ್ದಾನೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ