ವೆಸ್ಟ್ ಇಂಡೀಸ್ ಆಲ್‌ರೌಂಡರ್ ಆಂಡ್ರೆ ರಸೆಲ್ ತಮ್ಮ ಸುದೀರ್ಘಕಾಲದ ಗೆಳತಿ ಜಾಸಿಮ್ ಲೋರಾಳನ್ನು ವಿವಾಹವಾಗುವ ಮೂಲಕ ಜೀವನದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. 28 ವರ್ಷದ ರಸೆಲ್ ತಮ್ಮ ಅಭಿಮಾನಿಗಳಿಗಾಗಿ ಇನ್ಸ್ಟಾಗ್ರಾಂನಲ್ಲಿ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
ರಸೆಲ್ ಮತ್ತು ಡಾಮಿನಿಕನ್ ರಿಪಬ್ಲಿಕ್‌ನ ರೂಪದರ್ಶಿ ಲೋರಾ 2014ರ ನವೆಂಬರ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ರಸೆಲ್ ವೆಡ್ಡಿಂಗ್ ಚಿತ್ರದ ಜತೆ ಅದರ ಅಡಿಬರಹದಲ್ಲಿ ದೇವರನ್ನು ಮೊದಲಿಗೆ ಇಡಿ, ಅವರು ನಿಮಗೆ ದಾರಿ ತೋರಿಸುತ್ತಾರೆ ಎಂದು ಬರೆದಿದ್ದಾರೆ.
ಸ್ಟಾರ್ ಆಲ್‌ರೌಂಡರ್ ತಮ್ಮ ಏಕಾಂಗಿ ಚಿತ್ರವನ್ನು ಕೂಡ ಪೋಸ್ಟ್ ಮಾಡಿದ್ದು ಅದರಲ್ಲಿ ದುಂಡಗಿನ ಬಿಳಿಯ ಕನ್ನಡಕ ಮತ್ತು ಕಪ್ಪು ಸೂಟ್‌ನಲ್ಲಿ ಮಿಂಚಿದ್ದಾರೆ. ರಸೆಲ್ ಆಡುವ ಐಪಿಎಲ್ ತಂಡದ ಕೆಕೆಆರ್ ಅವರ ಸ್ಮರಣೀಯ ದಿನದಂದು ಅಭಿನಂದನೆ ಸಲ್ಲಿಸಿದೆ.
ಈ ಮಧ್ಯೆ ವೆಸ್ಟ್ ಇಂಡಿಯನ್ ಸ್ಟಾರ್ ರಸೆಲ್‌ಗೆ ಮೈದಾನದಲ್ಲಿ ಪರಿಸ್ಥಿತಿ ಆಶಾದಾಯಕವಾಗಿಲ್ಲ. ಏಕೆಂದರೆ ನಿಷೇಧಿತ ಮದ್ದು ವಿವಾದ ಅವರನ್ನು ಕಾಡುತ್ತಿದೆ. ರಸೆಲ್ 12 ತಿಂಗಳ ಅವಧಿಯಲ್ಲಿ ಮೂರು ಡೋಪ್ ಟೆಸ್ಟ್‌ಗಳನ್ನು ಮಿಸ್ ಮಾಡಿಕೊಂಡಿದ್ದು, ಅದು ಉದ್ದೀಪನ ಮದ್ದು ಸೇವಿಸಿದ ಅಪರಾಧಕ್ಕೆ ಸಮವಾಗಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.