ಚಹಲ್ ಮಾರಕ ಸ್ಪಿನ್ ದಾಳಿ ಹಾಗೂ ಅಂಬಾಟಿ ರಾಯುಡು ಅವರ 44 ಎಸೆತಗಳಲ್ಲಿ 41 ರನ್ ಮತ್ತು ಕರುಣ್ ನಾಯರ್ ಅವರ 39 ರನ್ ನೆರವಿನಿಂದ ಜಿಂಬಾಬ್ವೆಯ ಅಲ್ಪಮೊತ್ತದ 126 ರನ್ ಸ್ಕೋರಿನ ಗಡಿ ದಾಟಿದ ಭಾರತ 2 ವಿಕೆಟ್‌ಗಳಿಗೆ 129 ರನ್ ಜಯದ ಮೂಲಕ ಏಕ ದಿನ ಸರಣಿಯನ್ನು ಗೆದ್ದುಕೊಂಡಿದೆ.
ಹರಾರೆಯಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ಮತ್ತೆ ತನ್ನ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ಎಲ್ಲಾ 10 ವಿಕೆಟ್ ಕಳೆದುಕೊಂಡು 126 ರನ್‌ಗಳಿಗೆ ಆಲೌಟ್ ಆಗಿತ್ತು. ಯಜುವೇಂದ್ರ ಚಹಲ್, ಬರಿಂದರ್ ಸ್ರಾನ್ ಮತ್ತು ಕುಲಕರ್ಣಿ ಅವರ ಅಮೋಘ ಬೌಲಿಂಗ್ ದಾಳಿಗೆ ಸಿಲುಕಿದ ಜಿಂಬಾಬ್ವೆ ಸಿಬಾಂಡ್ 53 ರನ್ ಗಳಿಸಿ ಔಟಾದ ಬಳಿಕ ಉಳಿದ ಆಟಗಾರರು ಪೆವಿಲಿಯನ್ ಮಾರ್ಚ್ ಫಾಸ್ಟ್ ಮಾಡಿ 126ಕ್ಕೆ ಆಲೌಟ್ ಆಯಿತು.
ಬಳಿಕ ಬ್ಯಾಟಿಂಗ್ ಆಡಿದ ಭಾರತದ ಪರ ಮೊದಲ ಏಕದಿನದಲ್ಲಿ ಶತಕ ಬಾರಿಸಿದ ಲೋಕೇಶ್ ರಾಹುಲ್ ಕೇವಲ 33 ರನ್ ಗಳಿಸಿ ಚಿಬಾಬಾಗೆ ಬೌಲ್ಡ್ ಆದರು. ಅಂಬಾಟಿ ರಾಯ್ಡು ಬಿರುಸಿನ ಆಟವಾಡಿ ಏಳು ಬೌಂಡರಿ ಬಾರಿಸಿ ಅಜೇಯ 41 ರನ್ ಗಳಿಸಿ ಭಾರತಕ್ಕೆ ಜಯ ತಂದಿತ್ತರು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ