ಭಾರತ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್‌ಮೆನ್ ಅಜಿಂಕ್ಯ ರೆಹಾನೆ ಐಸಿಸಿ ಶ್ರೇಯಾಂಕದಲ್ಲಿ ಮೂರು ಸ್ಥಾನಗಳ ಬಡ್ತಿ ಪಡೆದು ಟಾಪ್-10ರಲ್ಲಿ ಸ್ಥಾನ ಪಡೆದಿದ್ದರೆ ಬೌಲರ್ ರವಿಚಂದ್ರನ್ ಅಶ್ವಿನ್ ತಮ್ಮ ಸ್ಥಾನವನ್ನು ಯಥಾರೀತಿ ಕಾದುಕೊಂಡಿದ್ದಾರೆ.
ಐಸಿಸಿ ಶ್ರೇಯಾಂಕದಲ್ಲಿ 11 ನೇ ಸ್ಥಾನ ಪಡೆದಿದ್ದ ರೆಹಾನೆ ಇದೀಗ 8ನೇ ಸ್ಥಾನಕ್ಕೆ ಬಡ್ತಿ ಪಡೆದು ಐಸಿಸಿ ಟಾಪ್-10 ಬ್ಯಾಟ್ಸ್‌ಮೆನ್‌ಗಳಲ್ಲಿ ಏಕೈಕ ಭಾರತೀಯ ಕ್ರಿಕೆಟಿಗ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ.
ಭಾರತ ಟೆಸ್ಟ್ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ ಮೂರು ಸ್ಥಾನಗಳ ಕುಸಿತ ಕಂಡು 13ನೇ ಸ್ಥಾನದಿಂದ 16ನೇ ಸ್ಥಾನಕ್ಕೆ ತಲುಪಿದ್ದಾರೆ.
ಐಸಿಸಿ ಬೌಲರ್ ಶ್ರೇಯಾಂಕದಲ್ಲಿ ಅಶ್ವಿನ್ ಮತ್ತು ಜಡೇಜಾ ಕ್ರಮವಾಗಿ 2 ಮತ್ತು 6ನೇ ಸ್ಥಾನವನ್ನು ಪಡೆದಿದ್ದರೆ ಜಿಮ್ಮಿ ಆಂಡರ್ಸನ್ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ.
ಟಾಪ್-10 ಬ್ಯಾಟ್ಸ್‌ಮೆನ್‌ಗಳು ಪಟ್ಟಿ
1 ಸ್ಟೀವ್ ಸ್ಮಿತ್ (ಆಸೀಸ್)
2 ಜೊಯಿ ರೂಟ್ (ಇಂಗ್ಲೆಂಡ್)
3 ಕಾನೆ ವಿಲಿಯಮ್ಸನ್ (ನ್ಯೂಜಿಲೆಂಡ್)
4 ಹಾಶೀಂ ಆಮ್ಲಾ (ದಕ್ಷಿಣ ಆಫ್ರಿಕಾ)
5 ಯೂನುಸ್ ಖಾನ್ (ಪಾಕ್)
6 ಆಡಂ ವೋಗಾಸ್ (ಆಸೀಸ್)
7 ಎಬಿ. ಡೆ ವಿಲ್ಲರ್ಸ್ (ದಕ್ಷಿಣ ಆಫ್ರಿಕಾ)
8 ಅಜಿಂಕ್ಯ ರೆಹಾನೆ (ಭಾರತ)
9 ರೋಸ್ ಟೇಲರ್ (ನ್ಯೂಜಿಲೆಂಡ್)
10 ಅಲೆಸ್ಟೇರ್ ಕುಕ್ (ಇಂಗ್ಲೆಂಡ್)
ಟಾಪ್-10 ಬೌಲರ್‌ಗಳ ಪಟ್ಟಿ
1. ಜಿಮ್ಮಿ ಆಂಡರ್ಸನ್(ಇಂಗ್ಲೆಂಡ್)
2 ಆರ್.ಅಶ್ವಿನ್( ಭಾರತ)
3 ದಲೆ ಸ್ಟೇನ್ (ದಕ್ಷಿಣ ಆಫ್ರಿಕಾ)
4 ಸ್ಟುವರ್ಟ್ ಬ್ರಾಡ್(ಇಂಗ್ಲೆಂಡ್)
5 ಯಾಸಿರ್ ಶಾ (ಪಾಕ್)
6 ರವೀಂದ್ರ ಜಡೇಜಾ(ಭಾರತ)
7 ಮಿಚೈಲ್ ಸ್ಟಾರ್ಕ್ (ಆಸ್ಟ್ರೇಲಿಯಾ)
8 ರಂಗನಾ ಹೆರಾತ್(ಶ್ರೀಲಂಕಾ)
9 ಟ್ರೆಂಟ್ ಬೌಲ್ಟ್(ನ್ಯೂಜಿಲೆಂಡ್)
10 ಜೊಶ್ ಹಾಜ್ಲ್‌ವುಡ್(ಆಸೀಸ್)
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ