Select Your Language

Notifications

webdunia
webdunia
webdunia
webdunia

ಮಾಡಿದ ತಪ್ಪಿಗೆ ತೇಪೆ ಹಚ್ಚಲು ಯತ್ನಿಸಿದ ಬಿಸಿಸಿಐ ಪದಚ್ಯುತ ಕಾರ್ಯದರ್ಶಿ ಅಜಯ್ ಶಿರ್ಕೆ

ಮಾಡಿದ ತಪ್ಪಿಗೆ ತೇಪೆ ಹಚ್ಚಲು ಯತ್ನಿಸಿದ ಬಿಸಿಸಿಐ ಪದಚ್ಯುತ ಕಾರ್ಯದರ್ಶಿ ಅಜಯ್ ಶಿರ್ಕೆ
Mumbai , ಶುಕ್ರವಾರ, 13 ಜನವರಿ 2017 (15:19 IST)
ಮುಂಬೈ: ಬಿಸಿಸಿಐನಿಂದ ಪದಚ್ಯುತಗೊಂಡ ಅಜಯ್ ಶಿರ್ಕೆ ಇಂಗ್ಲೆಂಡ್ ವಿರುದ್ಧ ನಡೆಯಬೇಕಿರುವ ಏಕದಿನ ಸರಣಿಗೆ ಅಡ್ಡಗಾಲು ಪ್ರಯತ್ನಿಸಿ ವಿಫಲರಾದರು. ಬಿಸಿಸಿಐನಿಂದ ತಕ್ಕ ಶಾಸ್ತಿ ಪಡೆದುಕೊಂಡ ಶಿರ್ಕೆ ಈಗ ತಮ್ಮನ್ನು ತಾವೇ ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

ಶಿರ್ಕೆ ಇಂಗ್ಲೆಂಡ್ ಕ್ರಿಕೆಟ್ ಅಧ್ಯಕ್ಷ ಜೈಲ್ಸ್ ಕ್ಲಾರ್ಕ್ ಗೆ ಕರೆ ಮಾಡಿ ಬಿಸಿಸಿಐನಲ್ಲಿ ಗೊಂದಲಗಳಿರುವುದರಿಂದ ಪೂರ್ವ ನಿಗದಿಯಂತೆ ಉಭಯ ದೇಶಗಳ ನಡುವಿನ ಏಕದಿನ ಸರಣಿ ನಡೆಯುವುದು ಕಷ್ಟ ಎಂದಿದ್ದರು ಎಂದು ವರದಿಯಾಗಿತ್ತು. ಇದಕ್ಕೆ ತಕ್ಕ ಶಾಸ್ತಿ ಎಂಬಂತೆ ಲೋಧಾ ಸಮಿತಿ ಶಿರ್ಕೆಯವರನ್ನು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಸಭೆಯಲ್ಲೂ ಭಾಗವಹಿಸದಂತೆ ಆದೇಶ ನೀಡಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಶಿರ್ಕೆ ಹೌದು, ನಾನು ಜೈಲ್ಸ್ ಅವರಿಗೆ ಕರೆ ಮಾಡಿದ್ದೆ. ಯಾಕೆಂದರೆ ಆತ ನನ್ನ ಸ್ನೇಹಿತ. ನಾವು ಆಗಾಗ ಮಾತನಾಡುತ್ತಿರುತ್ತೇವೆ. ನೀವೂ ನಿಮ್ಮ ಸ್ನೇಹಿತರೊಂದಿಗೆ ಮಾತನಾಡುವುದಿಲ್ಲವೇ? ಅದರಲ್ಲಿ ಮುಚ್ಚಿಡುವಂತದ್ದೇನಿಲ್ಲ” ಎಂದು ಪತ್ರಕರ್ತರ ಬಳಿ ಹೇಳಿಕೊಂಡಿದ್ದಾರೆ.

ಜೈಲ್ಸ್ ಬಿಸಿಸಿಐನಲ್ಲಿನ ಗೊಂದಲದ ಬಗ್ಗೆ ನನಗೆ ಕೇಳಿದ್ದಕ್ಕೆ ನಾನು ನನಗನಿಸಿದ್ದನ್ನು ಹೇಳಿದ್ದೇನೆ. ಇದರಲ್ಲಿ ನನ್ನ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಏನೇ ಆದರೂ, ಜೈಲ್ಸ್ ಬಿಸಿಸಿಐನನ್ನು ಸಂಪರ್ಕಿಸಿ ಗೊಂದಲ ನಿವಾರಿಸಿಕೊಂಡರೆ, ಶಿರ್ಕೆ ಮಾತ್ರ ಮಾಡಿದ ತಪ್ಪಿಗೆ ಪ್ರತಿಫಲ ಪಡೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಮ್ಮ ಜಮಾನಾದಲ್ಲಿ ಒಂದೇ ತಂಡಕ್ಕೆ ಇಬ್ಬರು ನಾಯಕರು ಬೇಕಿಲ್ಲ ಎಂದ ಧೋನಿ