Webdunia - Bharat's app for daily news and videos

Install App

ಶ್ರೀಲಂಕಾ ವಿರುದ್ಧ ಎರಡನೇ ಪಂದ್ಯದಲ್ಲೂ ಭಾರತಕ್ಕೆ ಭರ್ಜರಿ ಜಯ, ಸರಣಿ ಕೈವಶ

Sampriya
ಸೋಮವಾರ, 29 ಜುಲೈ 2024 (08:02 IST)
Photo Courtesy X
ಪಲೆಕೆಲೆ: ಬೌಲರ್‌ಗಳ ಪರಿಣಾಮಕಾರಿ ದಾಳಿಯ ಬಳಿಕ ಯಶಸ್ವಿ ಜೈಸ್ವಾಲ್‌ ಮತ್ತು ಸೂರ್ಯಕುಮಾರ್ ಯಾದವ್ ಅವರ ಅಬ್ಬರದ  ಬ್ಯಾಟಿಂಗ್‌ ಬಲದಿಂದ ಭಾರತ ತಂಡವು ಭಾನುವಾರ ಎರಡನೇ ಟಿ20 ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಡಕ್ವರ್ಥ್‌ ಲೂಯಿಸ್‌ ನಿಯಮದಡಿ ಏಳು ವಿಕೆಟ್‌ಗಳಿಂದ ಸೋಲಿಸಿತು.

ಮೂರು ಪಂದ್ಯಗಳ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಂತೆ ಭಾರತ ತಂಡವು 2-0ಯಿಂದ ಕೈವಶ ಮಾಡಿಕೊಂಡಿತು. ಮೊದಲ ಪಂದ್ಯದಲ್ಲೂ ಭಾರತ ಜಯ ಗಳಿಸಿತ್ತು. ಕೊನೆಯ ಪಂದ್ಯವು ನಾಳೆ ನಡೆಯಲಿದೆ.

ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ತಂಡವು ಕುಶಾಲ ಪೆರೆರಾ (53; 34ಎ) ಅವರ ಅರ್ಧಶತಕದ ಬಲದಿಂದ 20 ಓವರ್‌ಗ ಳಲ್ಲಿ 9 ವಿಕೆಟ್‌ಗಳಿಗೆ 161 ರನ್‌ ಗಳಿಸಿತು.  ಭಾರತ ಬ್ಯಾಟಿಂಗ್‌ ಆರಂಭಿಸುತ್ತಿದ್ದಂತೆ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಹೀಗಾಗಿ, ಗುರಿಯನ್ನು ಪರಿಷ್ಕರಿಸಲಾಯಿತು.

ಭಾರತದ ಗೆಲುವಿಗೆ 8 ಓವರ್‌ಗಳಲ್ಲಿ 78 ರನ್‌ ಗಳಿಸಬೇಕಿತ್ತು. ಆದರೆ, ಭಾರತವು 6.3 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 81 ರನ್‌ ಗಳಿಸಿ ಗೆಲುವಿನ ಗಡಿ ದಾಟಿತು. ಜೈಸ್ವಾಲ್‌ (30 ರನ್‌), ಸೂರ್ಯಕುಮಾರ್ (26 ರನ್‌) ಮತ್ತು ಹಾರ್ದಿಕ್‌ ಪಾಂಡ್ಯ (ಔಟಾಗದೇ 22) ಸ್ಪೋಟಕ ಬ್ಯಾಟಿಂಗ್‌ ನಡೆಸಿ, ಗೆಲುವಿನ ರೂವಾರಿಗಳಾದರು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಪಿಟಿ ಉಷಾ ಮಗನ ಮದುವೆ ಊಟಕ್ಕೆ ಫಿದಾ ಆದ ಮೇರಿ ಕೋಮ್‌

ಶುಭಮನ್ ಗಿಲ್ ಆಯ್ಕೆ ಮಾಡ್ತೀರಾ, ತಿರುಗಿಬಿದ್ದ ಸಂಜು ಸ್ಯಾಮ್ಸನ್

ಸೌರವ್ ಗಂಗೂಲಿ ಹೊಸ ಇನಿಂಗ್ಸ್‌ ಆರಂಭ: ದಾದಾ ಇನ್ನು ಕ್ರಿಕೆಟ್ ಲೀಗ್‌ನಲ್ಲಿ ಮುಖ್ಯ ಕೋಚ್

ಭಾರತದ ವಾಲ್ 2.0 ಖ್ಯಾತಿಯ ಚೇತೇಶ್ವರ ಪೂಜಾರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ

ನಿವೃತ್ತಿ ವದಂತಿಯ ಬೆನ್ನಲ್ಲೇ ಲಾರ್ಡ್ಸ್‌ನಲ್ಲಿ ಏಕದಿನ ಸರಣಿಗಾಗಿ ಬ್ಯಾಟ್‌ ಹಿಡಿದ ಕಿಂಗ್‌ ಕೊಹ್ಲಿ

ಮುಂದಿನ ಸುದ್ದಿ
Show comments