Select Your Language

Notifications

webdunia
webdunia
webdunia
webdunia

ಅಶ್ವಿನ್, ಸಹಾ ಜತೆಯಾಟದಿಂದ ಚೇತರಿಸಿಕೊಂಡ ಭಾರತ 234ಕ್ಕೆ 5 ವಿಕೆಟ್

ಅಶ್ವಿನ್, ಸಹಾ ಜತೆಯಾಟದಿಂದ ಚೇತರಿಸಿಕೊಂಡ ಭಾರತ 234ಕ್ಕೆ 5 ವಿಕೆಟ್
ಗ್ರಾಸ್ -ಐಲೆಟ್: , ಬುಧವಾರ, 10 ಆಗಸ್ಟ್ 2016 (11:32 IST)
ರವಿಚಂದ್ರನ್ ಅಶ್ವಿನ್ ಮತ್ತು ವೃದ್ಧಿಮಾನ್ ಸಹಾ ಅವರ ಉತ್ತಮ ಜತೆಯಾಟದಿಂದ ಭಾರತ-ವೆಸ್ಟ್ ಇಂಡೀಸ್ ಮೂರನೇ ಟೆಸ್ಟ್ ಆರಂಭದ ದಿನದ ಕೊನೆಯಲ್ಲಿ ಭಾರತ 234ಕ್ಕೆ ಐದು ವಿಕೆಟ್ ಗಳಿಸಿದೆ. ಸೇಂಟ್ ಲೂಸಿಯಾದ ಡಾರೆನ್ ಸಾಮಿ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಶ್ವಿನ್ ಮತ್ತು ಸಹಾ 6ನೇ ವಿಕೆಟ್‌ಗೆ 108 ರನ್ ಕಲೆ ಹಾಕಿದರು.

ವೆಸ್ಟ್ ಇಂಡೀಸ್ ಎರಡನೇ ಟೆಸ್ಟ್ ಹೀರೊ ರೋಸ್ಟನ್ ಚೇಸ್ ಮತ್ತು ವೇಗಿ ಅಲ್ಜಾರಿ ಜೋಸೆಫ್ ತಲಾ ಎರಡು ವಿಕೆಟ್ ಕಬಳಿಸಿ ಭಾರತ ಒಂದು ಹಂತದಲ್ಲಿ 126ಕ್ಕೆ 5 ವಿಕೆಟ್ ಕಳೆದುಕೊಂಡಿತ್ತು. ಅಶ್ವಿನ್ 75ರನ್ ಮತ್ತು ಸಹಾ 46 ರನ್‌ಗಳೊಂದಿಗೆ ಎರಡನೇ ದಿನದಾಟ ಆರಂಭಿಸಲಿದ್ದಾರೆ.  ಅಶ್ವಿನ್ ಮತ್ತು ಸಹಾ ಜತೆಯಾಟ ಫೈನಲ್ ಸೆಷನ್‌ವರೆಗೆ ವಿಸ್ತರಿಸಿದಾಗ ವೆಸ್ಟ್ ಇಂಡೀಸ್ ಬೌಲರುಗಳು ಹತಾಶರಾದರು. ಅವರು ತೆಗೆದುಕೊಂಡ ಎರಡನೇ ಹೊಸ ಚೆಂಡಿನಿಂದ 9 ಓವರುಗಳಲ್ಲಿ 46 ರನ್‌ಗಳನ್ನು ಭಾರತ ಗಳಿಸಿತು.
ವೆಸ್ಟ್ ಇಂಡೀಸ್ ಅಂಡರ್ 19 ವಿಶ್ವಕಪ್ ಜಯದಲ್ಲಿ  ಸ್ಟಾರ್ ಪ್ರದರ್ಶನ ನೀಡಿದ ಜೋಸೆಫ್ ವಿವೇಚನಾಯುಕ್ತ ಸೇರ್ಪಡೆ ಎನಿಸಿದರು.ಅವರು ಮತ್ತು ಗೇಬ್ರಿಯಲ್ ಅನುಕೂಲಕರ ಬೌಲಿಂಗ್ ಪರಿಸ್ಥಿತಿಯನ್ನು ಪಂದ್ಯದ ಮೊದಲ ಗಂಟೆಯಲ್ಲಿ ಬಳಸಿಕೊಂಡರು.
 
ಜೋಸೆಫ್ ವಿರಾಟ್ ಕೊಹ್ಲಿಯವರ ಅಮೂಲ್ಯ ವಿಕೆಟ್ ಉರುಳಿಸಿದರು. ರಾಹುಲ್ ಪ್ರತಿದಾಳಿ ಮಾಡಿ ಚೇಸ್ ಆಫ್‌ಸ್ಪಿನ್ ಬೌಲಿಂಗ್‌ಗೆ ಔಟಾಗಿದ್ದರಿಂದ ರಹಾನೆ ಜತೆಗಿನ 58 ರನ್ ಜತೆಯಾಟ ಮುರಿಯಿತು.
 ಸ್ಕೋರು ವಿವರ
ಭಾರತ ಮೊದಲ ಇನ್ನಿಂಗ್ಸ್ 234ಕ್ಕೆ 5 ವಿಕೆಟ್
 ಲೋಕೇಶ್ ರಾಹುಲ್ 50 , ವಿರಾಟ್ ಕೊಹ್ಲಿ 3 ರನ್, ಅಜಿಂಕ್ಯಾ ರಹಾನೆ 35 ರನ್, ರವಿಚಂದ್ರನ್ ಅಶ್ವಿನ್ 75 ರನ್ ಬ್ಯಾಟಿಂಗ್ ಮತ್ತು ವೃದ್ಧಿಮಾನ್ ಸಹಾ 46 ಬ್ಯಾಟಿಂಗ್
9-1 (ಶಿಖರ್ ಧವನ್, 2.3), 19-2 (ವಿರಾಟ್ ಕೊಹ್ಲಿ, 5.3), 77-3 (ಲೋಕೇಶ್ ರಾಹುಲ್, 19.3), 87-4 (ರೋಹಿತ್ ಶರ್ಮಾ, 25.6), 126-5 (ಅಜಿಂಕ್ಯ ರಹಾನೆ, 49.3)
ಬೌಲಿಂಗ್ ವಿವರ
ಶಾನನ್ ಗೇಬ್ರಿಯಲ್ 1 ವಿಕೆಟ್, ಅಲ್ಜಾರಿ ಜೋಸೆಫ್ 2, ರೋಸ್ಟನ್ ಚೇಸ್ 2 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

15 ಕ್ರಮಗಳನ್ನು ಅ.15ರೊಳಗೆ ಜಾರಿಗೆ ತರಲು ಬಿಸಿಸಿಐಗೆ ಲೋಧಾ ಸಮಿತಿ ಸೂಚನೆ