ಅಜರ್‌ಅಲಿ ಅವರ ಶತಕದ ನೆರವಿನಿಂದ ಇಂಗ್ಲೆಂಡ್ ತಂಡದ ವಿರುದ್ಧ ಪಾಕಿಸ್ತಾನ 3 ವಿಕೆಟ್ ಕಳೆದುಕೊಂಡು 257 ರನ್ ಗಳಿಸಿದೆ. ಇಂಗ್ಲೆಂಡ್‌ನ 297 ರನ್ ಸ್ಕೋರಿನ ಗಡಿ ಮುಟ್ಟಲು 40 ರನ್ ಮಾತ್ರ ಬಾಕಿವುಳಿದಿದೆ. ಅಜರ್ ಅವರ 6 ಗಂಟೆಗಳ ಕಾಲದ 139 ಅವರ 10ನೇ ಟೆಸ್ಟ್ ಶತಕವಾಗಿದ್ದು, 2ನೇ ದಿನದ ಅಂತಿಮ ಎಸೆತದಲ್ಲೇ ಕ್ರಿಸ್ ವೋಕ್ಸ್ ಬೌಲಿಂಗ್‌ನಲ್ಲಿ ಮೊದಲ ಸ್ಲಿಪ್‌ನಲ್ಲಿ ಅಲಸ್ಟೈರ್ ಕುಕ್ ಅವರಿಗೆ ಕ್ಯಾಚಿತ್ತು ಔಟಾದರು.
ಮೊಹಮ್ಮದ್ ಹಫೀಜ್ ಶೂನ್ಯಕ್ಕೆ ಔಟಾಗಿ ಪಾಕಿಸ್ತಾನ ಒಂದೂ ರನ್ ಸ್ಕೋರ್ ಮಾಡದೇ ಒಂದು ವಿಕೆಟ್ ಕಳೆದುಕೊಂಡ ಸಂದರ್ಭದಲ್ಲಿ ಅಜರ್ ಆಡಲು ಬಂದರು. ಇಂಗ್ಲೆಂಡ್ ತಂಡದಿಂದ ಎರಡು ಬಾರಿ ಜೀವದಾನ ಪಡೆದ ಅಜರ್ ಸಮಿ ಅಸ್ಲಾಂ ಜತೆಗೆ ಎರಡನೇ ವಿಕೆಟ್‌ಗೆ 181 ರನ್ ಕಲೆಹಾಕಿದರು. ಸಮಿ ಅಸ್ಲಾಂ 82 ರನ್ ಮಾಡಿದ್ದರು.
ಅಸ್ಲಾಂ 20 ವರ್ಷದ ಎಡಗೈ ಓಪನರ್ ಆಗಿದ್ದು ಚೊಚ್ಚಲ ಟೆಸ್ಟ್ ಶತಕ ಗಳಿಸುವ ಸನಿಹದಲ್ಲಿದ್ದಾಗ ರನ್‌ಔಟ್‌ಗೆ ಬಲಿಯಾದರು. ಯೂನಿಸ್ ಖಾನ್ ಅವರು ಅಜೇಯ 21 ರನ್ ಗಳಿಸಿದ್ದು, ಮೂರನೇ ವಿಕೆಟ್‌ಗೆ 76 ರನ್ ಸೇರಿಸಲು ಅಜರ್‌ಗೆ ನೆರವಾಯಿತು.
ಜೇಮ್ಸ್ ಆಂಡರ್‌ಸನ್‌ಗೆ ಪಿಚ್‌ನಲ್ಲಿ ಓಡಿದ್ದಕ್ಕಾಗಿ ಆಸ್ಟ್ರೇಲಿಯಾ ಅಂಪೈರ್ ಎರಡು ಬಾರಿ ಎಚ್ಚರಿಸಿದ್ದರಿಂದ ಇಂಗ್ಲೆಂಡ್‌ಗೆ ಮೈದಾನದಲ್ಲಿ ಕಠಿಣ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು.
ಇನ್ನೊಂದು ಎಚ್ಚರಿಕೆ ಹೊರಬಿದ್ದರೆ ಆಂಡರ್‌ಸನ್ ಅವರನ್ನು ಇನ್ನಿಂಗ್ಸ್‌ನಲ್ಲಿ ಬೌಲಿಂಗ್‌ನಿಂದ ನಿಷೇಧಿಸಲಾಗುತ್ತದೆ.
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 297 ರನ್
ಪಾಕಿಸ್ತಾನ ಮೊದಲ ಇನ್ನಿಂಗ್ಸ್ 257ಕ್ಕೆ 3 ವಿಕೆಟ್
ಸಮಿ ಅಸ್ಲಾಂ 82 ರನ್, ಅಜರ್ ಅಲಿ 139 ರನ್, ಯೂನಿಸ್ ಖಾನ್ 21 ನಾಟೌಟ್
ವಿಕೆಟ್ ಪತನ
0-1(ಮೊಹಮ್ಮದ್ ಹಫೀಜ್, 0-4), 181-2(ಸಮಿ ಅಸ್ಲಾಂ, 62.2), 257ಕ್ಕೆ 3( ಅಜರ್ ಅಲಿ, 89.6)
ಬೌಲಿಂಗ್ ವಿವರ
ಆಂಡರ್ಸನ್ 1 ವಿಕೆಟ್, ಕ್ರಿಸ್ ವೋಕ್ಸ್ 1 ವಿಕೆಟ್
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.