Select Your Language

Notifications

webdunia
webdunia
webdunia
webdunia

2ನೇ ಟೆಸ್ಟ್: ಜೋಯ್ ರೂಟ್, ಅಲಸ್ಟೈರ್ ಕುಕ್ ಶತಕ, ಇಂಗ್ಲೆಂಡ್ 4ಕ್ಕೆ 314 ರನ್

2ನೇ ಟೆಸ್ಟ್: ಜೋಯ್ ರೂಟ್, ಅಲಸ್ಟೈರ್ ಕುಕ್ ಶತಕ, ಇಂಗ್ಲೆಂಡ್ 4ಕ್ಕೆ 314 ರನ್
ಲಂಡನ್ , ಶನಿವಾರ, 23 ಜುಲೈ 2016 (10:53 IST)
ಜೋಯ್ ರೂಟ್ ಅವರ ಅಜೇಯ 141 ರನ್ ನೆರವಿನಿಂದ ಇಂಗ್ಲೆಂಡ್ ಪಾಕಿಸ್ತಾನ ವಿರುದ್ಧ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ ಮೊದಲದಿನದಾಟದಲ್ಲಿ 4 ವಿಕೆಟ್‌ಗೆ ಸದೃಢ 314 ರನ್ ಮೊತ್ತವನ್ನು ಕಲೆಹಾಕಿದೆ. ಪಾಕ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಬೇಗ ಔಟಾಗಿದ್ದ ರೂಟ್ ಎರಡನೇ ಟೆಸ್ಟ್‌ನಲ್ಲಿ ಕ್ರೀಸ್‌ನಲ್ಲಿ 6 ಗಂಟೆಗಳ ಕಾಲ ಔಟಾಗದೇ ಉಳಿದರು.
 
 ಇದಕ್ಕೆ ಮುಂಚೆ ಇಂಗ್ಲೆಂಡ್ ನಾಯಕ ಅಲಸ್ಟೈರ್ ಕುಕ್ 105 ರನ್ ದಾಖಲಿಸಿ ರೂಟ್ ಜತೆ ಎರಡೇ ವಿಕೆಟ್‌ಗೆ 185 ರನ್ ಕಲೆಹಾಕಿದರು. ಪಾಕಿಸ್ತಾನದ ಎಡಗೈ ತ್ರಿವಳಿ ವೇಗಿಗಳಾದ ಅಮೀರ್, ರಾಹತ್ ಅಲಿ ಮತ್ತು ರಿಯಾಜ್ ಅಪಾಯಕಾರಿಯಾಗಿ ಕಂಡರು. ಅಮೀರ್ 63ಕ್ಕೆ 2 ವಿಕೆಟ್ ಮತ್ತು ರಾಹತ್ 69ಕ್ಕೆ 2 ವಿಕೆಟ್ ಕಬಳಿಸಿದರು. ಸ್ಟಾರ್ ಲೆಗ್ ಸ್ಪಿನ್ನರ್ ಯಾಸಿರ್ ಶಾಹ್ ಲಾರ್ಡ್ಸ್‌ನಲ್ಲಿ 10 ವಿಕೆಟ್ ಕಬಳಿಸಿದ್ದರೂ ಈ ಪಂದ್ಯದಲ್ಲಿ 31 ಓವರುಗಳಲ್ಲಿ 111 ರನ್ ನೀಡಿ ಒಂದೂ ವಿಕೆಟ್ ಗಳಿಸಿಲ್ಲ.
 
ಎಡಗೈ ಆಟಗಾರ ಕುಕ್ ಅವರ 29ನೇ ಟೆಸ್ಟ್ ಶತಕದಿಂದ ಎಸೆಕ್ಸ್ ಬ್ಯಾಟ್ಸ್‌ಮನ್ ಆಸ್ಟ್ರೇಲಿಯಾದ ಡಾನ್ ಬ್ರಾಡ್‌ಮನ್ ಟ್ಯಾಲಿಯನ್ನು ಸಮಗೊಳಿಸಿದ್ದಾರೆ. ಆದಾಗ್ಯೂ ಬ್ರಾಡ್‌ಮನ್ ಕೇವಲ 52 ಟೆಸ್ಟ್‌ಗಳನ್ನು ಆಡಿದ್ದರೆ ಇದು ಕುಕ್ ಅವರ 131ನೇ ಟೆಸ್ಟ್ ಪಂದ್ಯವಾಗಿದೆ.

ಸ್ಕೋರು ವಿವರ
ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 4 ವಿಕೆಟ್‌ಗೆ 314
ಅಲಸ್ಟೈರ್ ಕುಕ್ 105 ರನ್, ಅಲೆಕ್ಸ್ ಹೇಲ್ಸ್ 10 ರನ್, ಜೋಯಿ ರೂಟ್ ಬ್ಯಾಟಿಂಗ್ 141 ರನ್, ಜೇಮ್ಸ್ ವಿನ್ಸ್ 18 ರನ್, ಗ್ಯಾರಿ ಬ್ಯಾಲೆನ್ಸ್ 23 ರನ್ ಕ್ರಿಸ್ ವೋಕ್ಸ್ ಬ್ಯಾಟಿಂಗ್ 2. 
ವಿಕೆಟ್ ಪತನ
25-1 (ಅಲೆಕ್ಸ್ ಹೇಲ್ಸ್, 6.6), 210-2 (ಅಲಸ್ಟೈರ್ ಕುಕ್ 55.4), 238-3 (ಜೇಮ್ಸ್ ವಿನ್ಸ್, 63.6), 311-4 (ಗ್ಯಾರಿ ಬಾಲನ್ಸ್  85.1)
 ಬೌಲಿಂಗ್ ವಿವರ
ಮೊಹಮ್ಮದ್ ಅಮೀರ್  2 ವಿಕೆಟ್, ರಾಹತ್ ಅಲಿ 2 ವಿಕೆಟ್

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ವೆಸ್ಟ್ ಇಂಡೀಸ್ ಮೇಲೆ ಭಾರತದ ಪ್ರಾಬಲ್ಯ, ವಿರಾಟ್ ದ್ವಿಶತಕ, ಅಶ್ವಿನ್ ಶತಕ