Publish Date: Thu, 20 Jul 2017 (09:56 IST)
Updated Date: Thu, 20 Jul 2017 (10:49 IST)
ಕೊಲೊಂಬೋ: 2011 ರಲ್ಲಿ ಮುಂಬೈನಲ್ಲಿ ನಡೆದ ಭಾರತ-ಶ್ರೀಲಂಕಾ ಏಕದಿನ ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯ ಫಿಕ್ಸ್ ಆಗಿತ್ತು ಎಂಬ ಶ್ರೀಲಂಕಾದ ಮಾಜಿ ನಾಯಕ ಅರ್ಜುನ್ ರಣತುಂಗಾ ಹೇಳಿಕೆಯನ್ನು ಅಲ್ಲಿನ ಕ್ರೀಡಾ ಸಚಿವರು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗೆ ಮುಂದಾಗಿದ್ದಾರೆ.
ಶ್ರೀಲಂಕಾ ಸರ್ಕಾರದಲ್ಲಿ ಹಾಲಿ ಸಚಿವರೂ ಆಗಿರುವ ರಣತುಂಗಾ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸುವುದಾಗಿ ಅಲ್ಲಿನ ಕ್ರೀಡಾ ಸಚಿವ ದಯಸಿರಿ ಜಯಸೇಖರ ಹೇಳಿದ್ದಾರೆ. ‘ಯಾರಾದರೂ ಈ ಬಗ್ಗೆ ಲಿಖಿತ ದೂರು ನೀಡಿದರೆ ತನಿಖೆಗೆ ಸಿದ್ಧ’ ಎಂದಿದ್ದಾರೆ.
ಅಂದು ಪಂದ್ಯದ ವೀಕ್ಷಕ ವಿವರಣೆಕಾರರಾಗಿದ್ದ ರಣತುಂಗಾ ಲಂಕಾ ತಂಡ ಆಡಿದ ರೀತಿ ಪ್ರಶ್ನಾರ್ಹವಾಗಿತ್ತು ಎಂದಿದ್ದರು. ರಣತುಂಗಾರ ಈ ಆರೋಪಕ್ಕೆ ಭಾರತ ಮತ್ತು ಲಂಕಾ ಕ್ರಿಕೆಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೂ, ತನಿಖೆ ನಡೆದು, ರಣತುಂಗಾ ಅಂದುಕೊಂಡಂತೆ ಫಿಕ್ಸಿಂಗ್ ಏನಾದರೂ ನಡೆದಿದ್ದರೆ, ಭಾರತ ಗೆದ್ದಿದ್ದ ಆ ವಿಶ್ವಕಪ್ ಕೂಟಕ್ಕೆ ಭಾರೀ ಮುಖಭಂಗವಾಗಲಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ