Webdunia - Bharat's app for daily news and videos

Install App

ಯಾಸಿರ್ ಶಾಹ್ ಮಾರಕ ಸ್ಪಿನ್ ದಾಳಿ: ಇಂಗ್ಲೆಂಡ್ ಏಳು ವಿಕೆಟ್‌ಗೆ 253 ರನ್

Webdunia
ಶನಿವಾರ, 16 ಜುಲೈ 2016 (12:18 IST)
ಯಾಸಿರ್ ಶಾಹ್  ಲಾರ್ಡ್ಸ್ ಟೆಸ್ಟ್ ಇನ್ನಿಂಗ್ಸ್‌ನಲ್ಲಿ 20 ವರ್ಷಗಳಲ್ಲಿ ಎದುರಾಳಿ ತಂಡದ ಐದು ವಿಕೆಟ್ ಕಬಳಿಸಿದ ಮೊದಲ ಲೆಗ್‌ಸ್ಪಿನ್ನರ್ ಆಗಿದ್ದಾರೆ. ಇದರಿಂದ ಪಾಕಿಸ್ತಾನ ಶುಕ್ರವಾರದ ಎರಡನೇ ದಿನ ಮುಗಿದಾಗ ಉತ್ತಮ ಸ್ಥಿತಿಯಲ್ಲಿದೆ. ಪಾಕಿಸ್ತಾನದ ಮೊದಲ ಇನ್ನಿಂಗ್ಸ್ ಸ್ಕೋರಾದ 339ಕ್ಕೆ ಪ್ರತಿಯಾಗಿ ದಿನದಾಟ ಮುಗಿದಾಗ  ಇಂಗ್ಲೆಂಡ್ 253ಕ್ಕೆ ಏಳು ವಿಕೆಟ್ ಉರುಳಿದ್ದು, ಇನ್ನೂ 86 ರನ್ ಕೊರತೆ ಎದುರಿಸುತ್ತಿದೆ.
 
 ಯಾಸಿರ್ ಶಾಹ್ ಉದ್ದೀಪನ ಮದ್ದುಸೇವನೆ ಆರೋಪದ ಮೇಲೆ ಮೂರು ತಿಂಗಳ ನಿಷೇಧ ಅನುಭವಿಸಿ ಮೊದಲ ಟೆಸ್ಟ್ ಆಡುತ್ತಿದ್ದು, ಇಂಗ್ಲೆಂಡ್ ಮಧ್ಯಮಕ್ರಮಾಂಕವನ್ನು ಉರುಳಿಸಿ 25 ಓವರುಗಳಲ್ಲಿ 64 ರನ್ ನೀಡಿ 5 ವಿಕೆಟ್ ಗಳಿಸಿದ್ದಾರೆ.
 
 ಇದಕ್ಕೆ ಮುಂಚೆ ಇಂಗ್ಲೆಂಡ್ ನಾಯಕ ಅಲಸ್ಟೈರ್ ಕುಕ್ 81 ರನ್ ಸ್ಕೋರ್ ಮಾಡಿದ್ದು,  ಈ ಪ್ರಕ್ರಿಯೆಯಲ್ಲಿ ಭಾರತದ ಲಿಟರ್ ಮಾಸ್ಟರ್ ಸುನಿಲ್ ಗವಾಸ್ಕರ್ ಅವರನ್ನು ಹಿಂದಿಕ್ಕಿ ಅತ್ಯಧಿಕ ರನ್ ಸ್ಕೋರ್ ಮಾಡಿದ ಓಪನಿಂಗ್ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
 ಮೊಹಮ್ಮದ್ ಅಮೀರ್ 5 ವರ್ಷಗಳ ನಿಷೇಧದ ಬಳಿಕ ಲಾರ್ಡ್ಸ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಹಿಂತಿರುಗಿದ್ದಾರೆ. ಅಮೀರ್ ಅವರ ಎಸೆತಕ್ಕೆ ಕುಕ್ ಬ್ಯಾಟಿನ ತುದಿಗೆ ತಾಗಿ ಮೊದಲ ಸ್ಲಿಪ್‌ನಲ್ಲಿದ್ದ ಹಫೀಜ್ ಕ್ಯಾಚ್ ಡ್ರಾಪ್ ಮಾಡಿದ್ದರಿಂದ ಒಂದು ಕುಕ್ ಜೀವದಾನ ಪಡೆದರು.  ಅಮೀರ್ ಇನ್ನೊಂದು ಎಸೆತಕ್ಕೆ ಕುಕ್ ಬ್ಯಾಟ್ ಅಂಚಿಗೆ ಚೆಂಡು ತಾಗಿ ವಿಕೆಟ್ ಕೀಪರ್ ಸರ್ಫ್ರಾಜ್ ಸರಳ ಕ್ಯಾಚ್ ಹಿಡಿಯುವಲ್ಲಿ ವಿಫಲರಾದರು.
 
ಅಮೀರ್ ಹತಾಶೆಯಿಂದ ಕಿರುಚಿದಾಗ, ನಾಯಕ ಮಿಶಬ್ ಉಲ್ ಹಕ್ ಬೆನ್ನು ತಟ್ಟಿ ಸಮಾಧಾನ ಮಾಡಿದರು.
ಸ್ಕೋರು ವಿವರ: 
ಪಾಕಿಸ್ತಾನ ಮೊದಲ ಇನ್ನಿಂಗ್ಸ್-339ಕ್ಕೆ 10 ವಿಕೆಟ್
ಹಫೀಜ್ 40 ರನ್, ಯೂನಿಸ್ ಖಾನ್ 33 ರನ್, ಮಿಶಬ್-ಉಲ್-ಹಕ್ 114 ರನ್, ಅಶದ್ ಶಫೀಕ್ 73 ರನ್, ಸರ್ಫ್ರಾಜ್ ಅಹ್ಮದ್ 25 ರನ್ 
 ಬೌಲಿಂಗ್ ವಿವರ:  ಸ್ಟುವರ್ಟ್ ಬ್ರಾಡ್ 3 ವಿಕೆಟ್,  ಕ್ರಿಸ್ ವೋಕ್ಸ್ 6 ವಿಕೆಟ್,  ಜೇಕ್ ಬಾಲ್ 1 ವಿಕೆಟ್.
 ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 253ಕ್ಕೆ ಏಳು ವಿಕೆಟ್ 
ಅಲಸ್ಟೈರ್ ಕುಕ್ 81 ರನ್,  ಜೋಯಿ ರೂಟ್ 48, ಜಾನಿ ಬೇರ್‌‍ಸ್ಟೋ 29, ಕ್ರಿಸ್ ಓಕ್ಸ್ ಅಜೇಯ 31 ರನ್. 
ಬೌಲಿಂಗ್ ವಿವರ: 
 ಮೊಹಮ್ಮದ್ ಅಮೀರ್  1 ವಿಕೆಟ್,  ರಾಹತ್ ಅಲಿ 1 ವಿಕೆಟ್ ಮತ್ತು ಯಾಸಿರ್ ಶಾಹ್ 5 ವಿಕೆಟ್.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 
ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Bengaluru Rain: ಇಂದಿನ KKR vs RCB ಪಂದ್ಯಾಟದ ಟಿಕೆಟ್ ಖರೀದಿಸಿದವರಿಗೆ ಬಿಗ್ ಶಾಕ್‌

ನೀರಜ್‌ ಚೋಪ್ರಾ ಹೊಸ ಮೈಲಿಗಲ್ಲು: ಪ್ರಧಾನಿ ಮೋದಿ ಸೇರಿದಂತೆ ಗಣ್ಯರಿಂದ ಅಭಿನಂದನೆಗಳ ಮಹಾಪೂರ

Rohit Sharma: ಆ ಸ್ಟ್ಯಾಂಡ್ ಗೇ ಸಿಕ್ಸರ್ ಹೊಡಿ ಎಂದ ರವಿಶಾಸ್ತ್ರಿ: ರೋಹಿತ್ ಶರ್ಮಾ ಉತ್ತರ ವಿಡಿಯೋ ನೋಡಿ

Rohit Sharma video: ಎಲ್ಲರ ಎದುರೇ ಸಹೋದರನಿಗೆ ಬೈದ ರೋಹಿತ್ ಶರ್ಮಾ

Rohit Sharma Video: ಗುದ್ಬಿಡ್ತೀನಿ ನೋಡು: ಅಭಿಮಾನಿ ಜೊತೆ ರೋಹಿತ್ ಶರ್ಮಾ ಕೀಟಲೆ

ಮುಂದಿನ ಸುದ್ದಿ
Show comments