Publish Date: Wed, 24 Oct 2007 (18:28 IST)Updated Date: Wed, 24 Oct 2007 (18:28 IST)
PTI
ಪಾಕಿಸ್ತಾನ ಕ್ರಿಕೆಟ್ ರಂಗದ ಅದ್ಬುತ ಬ್ಯಾಟಿಂಗ್ ಪ್ರತಿಭೆ ಇಂದು ನಿವೃತ್ತಿಯ ಅಂಚಿಗೆ ಅಧಿಕೃತವಾಗಿ ಸರಿದು ಹೊಗುತ್ತಲಿದೆ. ವಾಸ್ತವಿಕವಾಗಿ ಮಾರ್ಚ್ ತಿಂಗಳಿನಲ್ಲಿ ಇಂಜಮಾಮ್ ಕ್ರಿಕೆಟ್ ಬದುಕು ಅನದಿಕೃತವಾಗಿ ಅಂತ್ಯಗೊಳಿಸುವ ಹುನ್ನಾರಕ್ಕೆ ಕೈ ಹಾಕಿದ್ದವು. ಮತ್ತು ಭಾಗಶಃ ಅಂತಹ ಒಂದು ಕುತಂತ್ರದಲ್ಲಿ ಯಶಸ್ವಿಯಾಗಿದ್ದು, ಪಾಕ್ ಕ್ರಿಕೆಟ್ನ ದುರಂತ. ಪ್ರತಿಯೊಂದು ಅಂತ್ಯ ಇದೆ ಆದರೆ ಅಂತ್ಯವಾಗಬೇಕಾದ ಸಮಯದಲ್ಲಿ ಅಂತ್ಯವಾದರೇ ಅಂತ್ಯಕ್ಕೂ ಒಂದು ಅರ್ಥ ಇದೆ.
ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಪ್ರಾರಂಭಕ್ಕೆ ಮುನ್ನ ಇಂಜಿ ಒಂದು ಮಾತು ಹೇಳಿದ್ದರು. ನನ್ನಂತಹವರ ಉಪಸ್ಥಿತಿ ಶೋಯಬ್ ಮಲ್ಲಿಕ್ ಅವರಂತಹವರಿಗೆ ಕಿರಿಕಿರಿ ಮಾಡಬಹುದು. ಆದ್ದರಿಂದ ಕ್ರಿಕೆಟ್ಗೆ ಅಂತ್ಯ ಹೇಳುವುದು ಇದೆ ಸರಿಯಾದ ಸಮಯ ಎಂದು ಹೇಳಿದ್ದರು. ಇದಕ್ಕೂ ಮುನ್ನು ಶೋಯಬ್ ವ್ಯಕ್ತಿತ್ವ ಹ್ಯಾಗೆ ಅನ್ನುವುದನ್ನು ಒಂದೇ ಮಾತಿನಲ್ಲಿ ಅರ್ಥ ಮಾಡಿಕೊಳ್ಳಬಹುದು. ಅದು ಟ್ವೆಂಟಿ 20 ಫೈನಲ್ ಪಂದ್ಯ, ಅದೂ ಭಾರತದ ವಿರುದ್ಧ ಅಂದರೆ ಆ ಪಂದ್ಯದ ರೋಮಾಂಚಕತೆ ಎನು ಎನ್ನುವುದನ್ನು ಅನುಭವಿಸಿದವರಿಗೆ ಗೋತ್ತು. ಪಾಕಿಸ್ತಾನ ಮತ್ತು ಭಾರತದ ಗೆಲುವಿನ ನಡುವೆ ಒಂದು ಸಿಕ್ಸರ್ ಒಂದು ವಿಕೆಟ್ ಒಂದು ಎಸೆತ ಹೀಗೆ ಒಂದಂಕಿಯ ಮೇಲೆ ಎಲ್ಲವೂ ನಿಂತಿತ್ತು. ಪಾಕ್ ಸೋತಿತು. ಸೋತ ಮೇಲೆ ಮಲ್ಲಿಕ್ ಹೇಳಿದ್ದೆನು ಗೋತ್ತೆ ? ಪಾಕ್ ತಂಡವನ್ನು ಬೆಂಬಲಿಸಿದ ಜಗತ್ತಿನ ಎಲ್ಲ ಮುಸ್ಲಿಂರಿಗೆ ನಾನು ಆಭಾರಿ ಎಂದು ಹೇಳಿದ. ಬಾಲಿಶ ಹೇಳಿಕೆ. ಇಲ್ಲೆನು ಧರ್ಮಗಳ ಕ್ರಿಕೆಟ್ ಕಾಳಗ ನಡೆದಿತ್ತಾ ?
ವಿಷಯಾಂತರವಾಗುವ ಮುನ್ನ ಇಂಜಮಾಮ್ ಎಂಬ ದೈತ್ಯ ಕ್ರಿಕೆಟ್ ಪ್ರತಿಭೆ ಸಾಗಿ ಬಂದ ಹಾದಿಯ ಕುರಿತು ವಿಚಾರ ಮಾಡಬೇಕಾಗಿದೆ. ಇಂಜಮಾಮ್ ಇಲ್ಲವೇ ಮಾದ್ಯಮಗಳಲ್ಲಿ ಹೆಚ್ಚಾಗಿ ಇಂಜಿ ಎಂದೇ ಗುರುತಿಸಿಕೊಂಡಿರುವ ಈ ಪ್ರತಿಭೆ. ಸಾಮರ್ಥ್ಯ ಮತ್ತು ಸೂಕ್ಷ್ಮತೆಗಳ ಪ್ರತೀಕ. ದಡೂತಿ ದೇಹ ಇದ್ದರೂ ಸುಲಭವಾಗಿ ರನ್ ಕದಿಯುವ ಮತ್ತು ತನ್ನ ರನ್ ಗಳಿಕೆಯಲ್ಲಿ ಬೌಂಡರಿ ಮತ್ತು ಎರಡು ರನ್ಗಳ ಮೇಲೆ ಅವಲಂಬಿತವಾಗಿದ್ದು ಇಂಜಿಯ ಬ್ಯಾಟಿಂಗ್ನಲ್ಲಿ ಎದ್ದು ಕಾಣುವ ಅಂಶ. ಪ್ರತಿಭೆಗೆ ಕುಂದು ತರುವಂತೆ ಇದ್ದುದು ವಿಕೆಟ್ ಮದ್ಯೆ ಅವರ ಓಟ. ನಿದಾನವಾಗಿದ್ದು. ಜೋಡಿ ಬ್ಯಾಟ್ಸ್ಮನ್ ಪಾಲಿಗೂ ಅನೇಕ ಬಾರಿ ಕುತ್ತು ತಂದಿದ್ದು ದಿಟ. ಇಂಜಮಾಮ್ ಇದುವರೆಗೆ ಅತಿ ಹೆಚ್ಚು ಬಾರಿ ರನೌಟ್ ಆಗಿದ್ದು ಒಂದು ದಾಖಲೆ.
ಇಂಜಿಯ ಬ್ಯಾಟಿಂಗ್ ಸಾಮರ್ಥ್ಯ ನಿಂತುಕೊಂಡಿದ್ದೇ ಪುಲ್, ಮತ್ತು ಎತ್ತಿ ಬಾರಿಸುವ ಶೈಲಿಯ ಡ್ರೈವ್ಗಳು ಅದರಲ್ಲೂ ಇಂಜಿ ಎಂತಹದೇ ವೇಗದ ಬೌಲಿಂಗ್ ಇದ್ದರೂ ಸುಲಭವಾಗಿ ಅರಗಿಸುವ ಕಲೆ ಗೊತ್ತಿತ್ತು. ಆ ರೀತಿ ಎದುರಾಳಿಯ ತಲೆ ತಿರುಗುವಂತೆ ಮಾಡಲು ಬೆಟ್ಟದ ಲೆಕ್ಕದಲ್ಲಿ ಸಹನೆ ಇರಬೇಕು. ಅದು ಇದ್ದುದು ಇಂಜಿಗೆ ಮಾತ್ರ. ಇಮ್ರಾನ್ ಖಾನ್ನಂತಹವರೇ ಇಂಜಮಾಮ್ ಓರ್ವ ಜಗತ್ತು ಕಂಡ ಅಪ್ರತಿಮ ಬ್ಯಾಟ್ಸ್ಮನ್ ಎಂದು ಹೇಳಿದ್ದಾರೆ ನಿಸ್ಸಂಶಯವಾಗಿ ಆ ಮಾತು ಹದಿನಾರಾಣೆ ಖರೆ. ಜಾವೇದ್ ಮಿಯಾಂದಾದ್ ಅವರ ಸ್ಥಾನಕ್ಕೆ ಸೂಕ್ತ ಬ್ಯಾಟ್ಸ್ಮನ್ ಎಂದು ಇವರನ್ನು ಕರೆಯುತ್ತಾರೆ. ಮಿಯಾಂದಾದ್ ತರಹ ನಖರಾ ಮಾಡದಿದ್ದರೂ ಏಕಾಂಗಿಯಾಗಿ ನಿಂತು ಅವರಂತೆ ಪಂದ್ಯ ಗೆದ್ದುಕೊಟ್ಟ ಉದಾಹರಣೆ ಇದೆ.
ನ್ಯೂಜಿಲೆಂಡ್ ವಿರುದ್ಧ 2001-02 ರಲ್ಲಿ ಏಕಾಂಗಿಯಾಗಿ 329 ರನ್ ಮಾಡಿದ್ದು ಇಂಜಮಾಮ್ ಬ್ಯಾ ಟಿಂಗ್ ಪ್ರತಿಭೆಗೆ ಹಿಡಿದ ಕನ್ನಡಿ. ಆದರೆ ಎಲ್ಲರಿಗೂ ಕಾಡುವ ಫಾರ್ಮ್ ಸಮಸ್ಯೆ ಇವರಿಗೂ ಕಾಡಿದ್ದು ಅದು 2003ರ ವಿಶ್ವಕಪ್ನಲ್ಲಿ. ಆಮೇಲೆ ದುರ್ಬಲ ಬಾಂಗ್ಲಾ ವಿರುದ್ಧ ಆಕರ್ಷಕವಾಗಿ ಆಡಿದ್ದು, ಭಾರತದ ವಿರುದ್ದ ನಾಯಕನಾಗಿ ಆಯ್ಕೆಯಾಗಿ ಸರಣಿ ಸೋತಿದ್ದು ಇಂದು ಇತಿಹಾಸ ಅದೇ ವರ್ಷ ನ್ಯೂಜಿಲೆಂಡ್ ತಂಡವನ್ನು, ನ್ಯೂಜಿಲೆಂಡಿನಲ್ಲಿ ಸೋಲಿಸಿದ್ದು ಕೂಡ ಇಂದು ಭೂತದಲ್ಲಿ ಸೇರಿಕೊಳ್ಳಲಿದೆ.
ಪಾಕಿಸ್ತಾನ್ ಕ್ರಿಕೆಟ್ ಇವರೆಗೂ ಅತ್ಯುತ್ತಮ ವೇಗದ ಬೌಲರುಗಳನ್ನು ಜಗತ್ತಿಗೆ ನೀಡಿದೆ, ವಾಸೀಂ ಅಕ್ರಮ್, ವಕಾರ್ ಯುನಿಸ್ ಅವರ ನಡುವೆ ನೆರಳಿನಂತೆ ಎಲೆ ಮರೆಯ ಕಾಯಿಯಂತೆ ಉಳಿದ ಆಕಿಬ್ ಜಾವೇದ್. ಜಾವೇದ್ಗೂ ಮುನ್ನ ಇಮ್ರಾನ್ ಇದ್ದರೂ ಆಲ್ರೌಂಡರ್ ಲೆಕ್ಕದಲ್ಲಿ ಅವರನ್ನು ಪರಿಗಣಿಸಲಾಗುತ್ತಿತ್ತು. ಇಂತಹ ಬೌಲಿಂಗ್ ಪ್ರಬುದ್ದತೆಯಲ್ಲಿ ಬ್ಯಾಟಿಂಗ್ ಪ್ರತಿಭೆಯೊಂದು ಈ ಪರಿ ಮಿಂಚಿದ್ದು ಬಹಳ ಕಡಿಮೆ. ಪಾಕಿಸ್ತಾನ್ ಕ್ರಿಕೆಟ್ನಲ್ಲಿ ಇಂದಿನ ಯುಸುಫ್, ಯುನಿಸ್ ಖಾನ್ ಬಿಟ್ಟರೆ ಇಂಜಿಯಂತಹ ಬ್ಯಾಟ್ಸ್ಮನ್ಗಳು ಇಲ್ಲವೇ ಇಲ್ಲ. ಮದ್ಯಮ ಕ್ರಮಾಂಕದಲ್ಲಿ ಅವರು ಆಡುತ್ತಿದ್ದರಿಂದ ಶತಕಗಳಿಗಿಂತ ಅರ್ಧಶತಕಗಳೇ ಹೆಚ್ಚು, ಏಕದಿನ ಕ್ರಿಕೆಟ್ನಲ್ಲಿ ಇಂಜಿಯದು ಅತಿ ಹೆಚ್ಚು ಅರ್ಧಶತಕ ಗಳಿಸಿದ ದಾಖಲೆ ಮೊನ್ನೆ ಮೊನ್ನೆಯವರೆಗೆ ಇತ್ತು. ಸಚಿನ್ ತೆಂಡುಲ್ಕರ್ ಆಸ್ಟ್ರೇಲಿಯ ವಿರುದ್ಧ ಹೈದರಾಬಾದಿನಲ್ಲಿ ಅರ್ಧಶತಕ ಬಾರಿಸುವ ಮೂಲಕ 84ನೇ ಶತಕಾರ್ಧ ದಾಖಲಿಸಿ,ಇಂಜಿಯ ದಾಖಲೆಯನ್ನು ಸರಿಗಟ್ಟಿದರು. ವಿವಾದಗಳು ಯಾಕೊ ಇಂಜಿ ಪಾಲಿಗೆ 2007 ಸರಿ ಇರಲಿಲ್ಲ ಅಂತ ಕಾಣ್ತದೆ ಪ್ರಾರಂಭದಲ್ಲಿ ಓವಲ್ ಟೆಸ್ಟ್ ವಿವಾದ ಅಂಪೈರ್ ಡರೆಲ್ ಹೇರ್ ಅವರ ಹಠಮಾರಿತನಕ್ಕೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಪಂದ್ಯವೊಂದು ಮೊದಲ ಬಾರಿಗೆ ಜಪ್ತಿಮಾಡಿಕೊಳ್ಳಲಾಯಿತು. ಅಲ್ಲಿಂದ ಸಾಗಿದ ವಿವಾದದ ಸರಣಿ ಕೆರಿಬಿಯನ್ ನೆಲದ ಮೇಲೆ ನಡೆದ ವಿಶ್ವಕಪ್ ಟೂರ್ನಿಯಲ್ಲಿ ವೂಲ್ಮರ್ ಸಾವು, ಗುತ್ತಿಗೆಯ ನಿರಾಕರಣೆ, ಏಕದಿನ ಪಂದ್ಯಗಳಿಂದ ಆಗಲೇ ತೆಗದುಕೊಂಡ ಸನ್ಯಾಸ. ಯಾಕೊ ಇಂಜಿಯ ಕ್ರಿಕೆಟ್ ಅಂತ್ಯ ಸರಿಯಾದಂತೆ ಕಾಣಲಿಲ್ಲ.
ದಕ್ಷಿಣ ಆಫ್ರಿಕ ತಂಡ ಕೊನೆಗೂ ತನ್ನ ಸಹೃದಯತೆಯನ್ನು ಇಂತಹ ಅದ್ಬುತ ಪ್ರತಿಭೆಗೆ ಮೈದಾನದಲ್ಲಿ ತೋರಿತು. ಇಂತಹದೊಂದು ಆತ್ಮೀಯ ವಿದಾಯ ಸಿಗುವುದು ಬಲು ಅಪರೂಪ. ಬ್ರಿಯಾನ್ ಲಾರಾಗೂ ಕೂಡ ಇಂತಹ ವಿಧಾಯ ಸಿಗಲಿಲ್ಲ.