Publish Date: Mon, 22 Jun 2015 (18:28 IST)
Updated Date: Mon, 22 Jun 2015 (18:37 IST)
ಧೋನಿ ಹಿಂದೆ ಭಾರತ ಕ್ರಿಕೆಟ್ ತಂಡಕ್ಕೆ ಅನೇಕ ಪಂದ್ಯಗಳನ್ನು ಗೆದ್ದುಕೊಟ್ಟಿರಬಹುದು. ಆದರೆ ಎಂಎಸ್ ಧೋನಿಯ ಪ್ರಸಕ್ತ ಫಾರಂ ಕಳಪೆಯಾಗಿದ್ದು, ಇತ್ತೀಚೆಗೆ ಪುನಶ್ಚೇತನಗೊಂಡ ಬಾಂಗ್ಲಾ ತಂಡದ ವಿರುದ್ಧ ಸರಣಿ ನಷ್ಟವು ಅವರ ಗಾಯಕ್ಕೆ ಉಪ್ಪು ಸವರಿದಂತಾಗಿದೆ. ಬಾಂಗ್ಲಾ ವಿರುದ್ಧ ಮೂರನೇ ಏಕದಿನ ಗಮನಾರ್ಹವಾಗಿಲ್ಲವಾದ್ದರಿಂದ ನಾಯಕ ಧೋನಿ ಏಕ ದಿನ ನಾಯಕತ್ವದಿಂದ ಕೆಳಗಿಳಿಯಲು ಇಲ್ಲಿ ಐದು ಕಾರಣಗಳನ್ನು ನೀಡಲಾಗಿದೆ.
ಕೊಹ್ಲಿ- ಸೂಕ್ತ ಉತ್ತರಾಧಿಕಾರಿ- ವಿರಾಟ್ ಕೊಹ್ಲಿ ಅನೇಕ ವರ್ಷಗಳ ಕಾಲ ತಂಡವನ್ನು ಮುನ್ನಡೆಸಲು ಸೂಕ್ತ ವ್ಯಕ್ತಿ. ಬಾಂಗ್ಲಾ ವಿರುದ್ಧ ಟೆಸ್ಟ್‌ನಲ್ಲಿ ಕೊಹ್ಲಿ ಟೀಂ ಇಂಡಿಯಾ ನಿರ್ದೇಶಕರ ಜೊತೆ ಕೆಲವು ಸಕಾರಾತ್ಮಕ ಬದಲಾವಣೆಗಳನ್ನು ಮಾಡಿ ತಂಡದಲ್ಲಿರಲು ಅರ್ಹವಾದ ಆಟಗಾರರನ್ನು ಆಯ್ಕೆ ಮಾಡಿದ್ದರು. ಭಾರತದ ಎಲ್ಲಾ ಮಾದರಿಯ ಆಟಗಳಲ್ಲಿ ಸ್ಥಿರ ಆಟಗಾರ ಎನಿಸಿದ್ದು, ಧೋನಿಯಿಂದ ಕಾರ್ಯಭಾರ ವಹಿಸಿಕೊಳ್ಳಲು ಸಿದ್ಧರಾಗಿದ್ದಾರೆ.
ಕಳಪೆ ಫಾರಂ: ಅನೇಕ ಐಪಿಎಲ್ ಆವೃತ್ತಿಗಳಲ್ಲಿ ಧೋನಿಯ ಚೆನ್ನೈ ಸೂಪರ್ ಕಿಂಗ್ಸ್ ಸೋಲಿಸಲು ಅಸಾಧ್ಯವಾದ ತಂಡವಾಗಿತ್ತು. ಆದರೆ ಈ ವರ್ಷದ ಆವೃತ್ತಿಯಲ್ಲಿ ಧೋನಿ ಮುಂಚಿನ ವ್ಯಕ್ತಿತ್ವದ ನೆರಳಿನಂತೆ ಕಂಡುಬಂದರು ಮತ್ತು ಅವರ ಕಳಪೆ ಫಾರಂನಿಂದಾಗಿ ಸಿಎಸ್‌ಕೆ ತನ್ನ ಪೂರ್ಣ ಸಾಮರ್ಥ್ಯ ತೋರಿಲ್ಲ. ಪ್ರಸಕ್ತ ಟೀಂ ಇಂಡಿಯಾದಲ್ಲಿ ಕೂಡ ಧೋನಿ ಫಾರಂ ಕಳೆದುಕೊಂಡಿದ್ದು, ಬಾಂಗ್ಲಾ ವಿರುದ್ಧ ಸರಣಿ ನಷ್ಟವು ಅದನ್ನು ಜಾಹೀರು ಮಾಡುತ್ತದೆ.
ನಿಗೂಢ ನಿರ್ಧಾರಗಳು: ಪ್ರಸಕ್ತ ಭಾರತ ತಂಡದಲ್ಲಿ ಒಬ್ಬ ಆಟಗಾರನ ಉಪಸ್ಥಿತಿ ಪ್ರಶ್ನಾರ್ಹವಾಗಿದ್ದರೆ ಅದು ರವೀಂದ್ರ ಜಡೇಜಾ. ಬ್ಯಾಟ್ ಅಥವಾ ಬಾಲ್‌ನಲ್ಲಿ ಯಾವುದೇ ಪರಿಣಾಮ ಬೀರದ ಜಡೇಜಾರನ್ನು ಧೋನಿ ಗೊತ್ತಿಲ್ಲದ ಕಾರಣಗಳಿಗಾಗಿ ಮುಂದುವರಿಸಿದ್ದಾರೆ. ಎರಡನೇ ಏಕದಿನದಲ್ಲಿ ರಹಾನೆಯನ್ನು ಕೈಬಿಡುವ ಮೂಲಕ ಧೋನಿ ಅಚ್ಚರಿ ಮೂಡಿಸಿದರು. ಪಂದ್ಯದ ಬಳಿಕದ ಪತ್ರಿಕಾಗೋಷ್ಠಿಯಲ್ಲಿ ರಹಾನೆ ನಿಧಾನ ಪಿಚ್‌ಗಳಲ್ಲಿ ಸ್ಥಿರವಾಗಿ ಆಡುವುದಿಲ್ಲ ಎಂದು ಹೇಳಿದ್ದರು. ಆದರೆ ರಹಾನೆ ಐಪಿಎಲ್ ವಿವಿಧ ಆವೃತ್ತಿಗಳಲ್ಲಿ ಅತ್ಯಧಿಕ ರನ್ ಸ್ಕೋರ್ ಮಾಡಿರುವುದರಿಂದ ಧೋನಿ ತರ್ಕ ಅರ್ಥಮಾಡಿಕೊಳ್ಳುವುದು ಕಷ್ಟ.
ಎಲ್ಲಾ ಆವೃತ್ತಿಗಳಿಗೆ ಒಬ್ಬರೇ ನಾಯಕ: ಕೊಹ್ಲಿಗೆ ಏಕದಿನ ನಾಯಕತ್ವವನ್ನೂ ನೀಡಿದರೆ, ಇನ್ನಷ್ಟು ವಿಶ್ವಾಸದಿಂದ ಪ್ರಬಲವಾದ ಭವಿಷ್ಯದ ಪ್ರಬಲ ಭಾರತ ತಂಡ ನಿರ್ಮಾಣಕ್ಕೆ ನೆರವಾಗುತ್ತದೆ.
ವಯಸ್ಸಿನ ಅಂಶ: ಧೋನಿ ಪ್ರಸಕ್ತ ತಂಡದ ಅತೀ ಹಿರಿಯ ಆಟಗಾರ. 33ನೇ ವರ್ಷದಲ್ಲಿ ಅವರ ಆಟದಲ್ಲಿನ ಚುರುಕು ಕಡಿಮೆಯಾಗಿದೆ. ಅವರ ಬ್ಯಾಟಿನಿಂದ ಈಗ ಹೆಲಿಕಾಪ್ಟರ್ ಶಾಟ್‌ಗಳೂ ಬರುತ್ತಿಲ್ಲ. ಸೀಮಿತ ಓವರುಗಳಲ್ಲಿ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ಪಾತ್ರ ವಹಿಸಿದರೆ, ಧೋನಿಯ ಒತ್ತಡ ಕಡಿಮೆಯಾಗಿ ಪುನಃ ಬ್ಯಾಟಿಂಗ್ ಫಾರಂಗೆ ಮರಳಬಹುದು. ಇದಲ್ಲದೇ ಭಾರತ ತಂಡಕ್ಕೆ ಯುವ ಮತ್ತು ಆಕ್ರಮಣಕಾರಿ ಮತ್ತು ಹೊಸ ಕಲ್ಪನೆಗಳಿಂದ ಕೂಡ ನಾಯಕತ್ವದ ಅವಶ್ಯಕತೆಯಿದೆ.