Publish Date: Fri, 17 Jul 2015 (18:23 IST)
Updated Date: Fri, 17 Jul 2015 (18:29 IST)
ಧೋನಿಯವರ ಹೆಲಿಕಾಪ್ಟರ್ ಶಾಟ್ ಮತ್ತು ಬ್ಲೂ ಟೀಂ ಇಂಡಿಯಾ ಜರ್ಸಿ ಅವರ ಸರಿಸಾಟಿಯಿಲ್ಲದ ಯಶಸ್ಸಿಗೆ ಸಂಕೇತವಾಗಿದೆ. ಧೋನಿ ಮತ್ತು ಚೆನ್ನೈ ನಡುವೆ ವಿಶೇಷವಾದ ಸಂಪರ್ಕವಿದೆ. ಏಕೆಂದರೆ ಧೋನಿಯಂತೆ ಯಶಸ್ಸು, ಮನ್ನಣೆಗೆ ಪಾತ್ರವಾದ ಆಟಗಾರ ಯಾರೂ ಇಲ್ಲ.
ಅವರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಒಟ್ಟಿಗೆ ಬೆಸೆದುಕೊಂಡು ಸುಮಾರು 8 ವರ್ಷಗಳಾಗಿದ್ದು, ಅದರಿಂದ ಧೋನಿ ಬೇರ್ಪಡುವ ಪ್ರಶ್ನೆಯೇ ಇಲ್ಲ ಎನ್ನುವಂತಾಗಿದೆ. ಧೋನಿ ಕೊಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಡೇರ್ ಡೆವಿಲ್ಸ್ ಅಥವಾ ಮುಂಬೈ ಇಂಡಿಯನ್ಸ್ ಪ್ರತಿನಿಧಿಸುವುದನ್ನು ಊಹಿಸುವುದೂ ಸಾಧ್ಯವಿಲ್ಲ.
ಕಳೆದ 8 ವರ್ಷಗಳಿಂದ ದೇಶದ ಉದ್ದಗಲಕ್ಕೂ ಎಲ್ಲಾ ಜಾಹೀರಾತುಗಳಲ್ಲಿ ನೀಲಿ ಅಥವಾ ಹಳದಿ ಬಣ್ಣದ ಉಡುಗೆಯಲ್ಲಿ ದೋನಿಯನ್ನು ಚಿತ್ರಿಸಲಾಗಿದೆ. ಸೂಪರ್ ಕಿಂಗ್ಸ್ ಧೋನಿಯಿಂದ ಅನುಕೂಲ ಪಡೆದಿರುವುದರಲ್ಲಿ ಎರಡು ಮಾತಿಲ್ಲ. ಚೆನ್ನೈ ಸೂಪರ್ ಕಿಂಗ್ಸ್ ಅಮಾನತು ಮಾಡಿರುವುದು ಒಂದು ದೊಡ್ಡ ಪ್ರಶ್ನೆಯನ್ನು ಎತ್ತಿದ್ದರೆ, ಧೋನಿಯ ಕತೆಯೇನು ಎನ್ನುವುದೇ ಪ್ರಶ್ನೆಯಾಗಿದೆ.
ಸೂಪರ್ ಕಿಂಗ್ಸ್ ಪುನಃ ಹಿಂತಿರುಗದಿದ್ದರೆ ಅವರ ಐಪಿಎಲ್ ವೃತ್ತಿಜೀವನದ ಕಥೆಯೇನು? ಒಂದು ವೇಳೆ ಧೋನಿ ಹರಾಜಿಗೆ ಬಂದರೆ, ಫ್ರಾಂಚೈಸಿಗಳು ಅವರ ಐಪಿಎಲ್ ಬಜೆಟ್ ಪುನರ್‌ವ್ಯವಸ್ಥೆ ಮಾಡಬೇಕಾಗುತ್ತದೆ. ಆದರೆ ಧೋನಿ ಇಂಡಿಯಾ ಸಿಮೆಂಟ್ಸ್ ಬಿಡುವುದು ಅನುಮಾನಾಸ್ಪದ ಎಂದು ಪ್ರಮುಖ ಕ್ರೀಡಾ ಚಾನೆಲ್ ಎಕ್ಸಿಕ್ಯೂಟಿವ್ ಹೇಳಿದ್ದಾರೆ. ಇಂಡಿಯಾ ಸಿಮೆಂಟ್ಸ್ ಸೂಪರ್ ಕಿಂಗ್ಸ್ ಮಾತೃ ಕಂಪನಿಯಾಗಿದ್ದು, ಧೋನಿ ಕಂಪನಿಯ ವೈಸ್ ಪ್ರೆಸಿಡೆಂಟ್ ಆಗಿ ನೇಮಕವಾಗಿದ್ದಾರೆ.