Select Your Language

Notifications

webdunia
webdunia
webdunia
webdunia

ದ.ಆಫ್ರಿಕಾ ಟೆಸ್ಟ್ ನಾಯಕ ಹಶೀಮ್ ಆಮ್ಲಾ: ಡಿ ವಿಲಿಯರ್ಸ್ ನಿರಾಶೆ

de villiers
ದಕ್ಷಿಣ ಆಫ್ರಿಕಾದ ವರ್ಷದ ವರ್ಷದ ಕ್ರಿಕೆಟಿಗ ಎಂದು ಹೆಸರು ಪಡೆದ ಎಬಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾದ ಮುಂದಿನ ಟೆಸ್ಟ್ ನಾಯಕತ್ವಕ್ಕೆ ತಮ್ಮನ್ನು ಕಡೆಗಣಿಸಿದ್ದಕ್ಕೆ ಹತಾಶೆ ವ್ಯಕ್ತಪಡಿಸಿದ್ದಾರೆ.

ಏಕದಿನ ಪಂದ್ಯಗಳಲ್ಲಿ ಮತ್ತು ಟ್ವೆಂಟಿ20 ಸ್ವರೂಪದಲ್ಲಿ ತಂಡದ ನಾಯಕತ್ವವಹಿಸಿರುವ ಅವರು ಟೆಸ್ಟ್ ತಂಡದಲ್ಲಿ  ನಾಯಕತ್ವ ಸಿಗದಿದ್ದರೂ ಕೂಡ ನೂತನ ನಾಯಕರಾಗಿ  ಆಯ್ಕೆಯಾದ ಹಶೀಮ್ ಆಮ್ಲಾಗೆ ಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.

ಪ್ರತಿಯೊಬ್ಬರಿಗೂ ಕನಸುಗಳು, ಮಹತ್ವಾಕಾಂಕ್ಷೆಗಳು ಇರುತ್ತವೆ. ಆದರೆ ನಾನು ಪರಿಸ್ಥಿತಿಯನ್ನು ಒಪ್ಪಿಕೊಂಡು ಹಷೀಮ್ ಮತ್ತು ನನ್ನ ನಡುವೆ ಅದು ಅಡ್ಡ ಬರದಂತೆ ನೋಡಿಕೊಳ್ಳುವುದಾಗಿ ಹೇಳಿದರು. ತಂಡದ ಉಪನಾಯಕನಾಗಿ ನಾನು ಹಷೀಮ್ ಜತೆ ನಿಕಟವಾಗಿ ಕೆಲಸ ಮಾಡುತ್ತೇನೆ ಎಂದು ಡಿ ವಿಲಿಯರ್ಸ್ ಹೇಳಿದರು.

ಸದಾ ನಾವು ಬಯಸಿದ ಮಾರ್ಗದಲ್ಲೇ ಹೋಗುತ್ತದೆಂದು ನಿರೀಕ್ಷಿಸಲು ಸಾಧ್ಯವಿಲ್ಲ. ಕೊನೆಯಲ್ಲಿ ನಾವು ದಕ್ಷಿಣ ಆಫ್ರಿಕಾದ ಕ್ರಿಕೆಟ್ ತಂಡದ ಹಿತಾಸಕ್ತಿಗೆ ಅನುಗುಣವಾಗಿ ಕೆಲಸಮಾಡುತ್ತೇವೆ ಎಂದು ಹೇಳಿದರು. 

Share this Story:

Follow Webdunia kannada