Publish Date: Sun, 14 Jun 2020 (21:26 IST)
Updated Date: Mon, 15 Jun 2020 (13:37 IST)
ಕೊರೊನಾ ವೈರಸ್ ತಡೆಗೆ ಕ್ವಾರಾಂಟೈನ್ ಮಾಡಲಾಗುತ್ತಿದೆ. ಕ್ವಾರಂಟೈನ್ ಕೇಂದ್ರಗಳೆಂದರೆ, ಜನರು ಜೈಲೆಂಬ ರೀತಿಯಲ್ಲಿ ಹೆದರುತ್ತಿದ್ದಾರೆ ಎಂದು ಬಿಜೆಪಿ ಸಂಸದರೊಬ್ಬರು ಹೇಳಿದ್ದಾರೆ.
ಸಾಂಸ್ಥಿಕ ಕ್ವಾರಾಂಟೈನ್‍ಲ್ಲಿಡಲಿದ್ದಾರೆ ಎಂಬ ಭಯದಲ್ಲಿ ಫೀವರ್ ಕ್ಲಿನಿಕ್‍ಗಳಿಗೆ ಜ್ವರ, ಕೆಮ್ಮು, ನೆಗಡಿ ಬಂದರೂ ಜನರು ಮುಖಮಾಡುತ್ತಿಲ್ಲ.
ಕ್ವಾರಾಂಟೈನ್ ಕೇಂದ್ರಗಳೆಂದರೆ, ಜನರು ಜೈಲೆಂಬ ರೀತಿಯಲ್ಲಿ ಹೆದರುತ್ತಿದ್ದಾರೆ. ಜನರಲ್ಲಿರುವ ಈ ಬಗ್ಗೆ ಇರುವ ತಪ್ಪುಕಲ್ಪನೆಯನ್ನು ಹೋಗಲಾಡಿಸಬೇಕು ಎಂದು ಕಲಬುರಗಿ ಸಂಸದ ಡಾ.ಉಮೇಶ್ ಜಾಧವ ಹೇಳಿದ್ದಾರೆ.
ಫೀವರ್ ಕ್ಲಿನಿಕ್‍ಗಳಿಗೆ ಬಂದು ಜನರು ತಪಾಸಣೆ ಮಾಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.