Select Your Language

Notifications

webdunia
webdunia
webdunia
webdunia

ರಾಮನಗರದಲ್ಲಿ ಕೊರೋನಾ ಹರಡಿದರೆ ನಿಖಿಲ್ ಮದುವೆಯೇ ಕಾರಣ!

ರಾಮನಗರದಲ್ಲಿ ಕೊರೋನಾ ಹರಡಿದರೆ ನಿಖಿಲ್ ಮದುವೆಯೇ ಕಾರಣ!
ಬೆಂಗಳೂರು , ಶನಿವಾರ, 18 ಏಪ್ರಿಲ್ 2020 (09:19 IST)
ಬೆಂಗಳೂರು: ಲಾಕ್ ಡೌನ್ ವೇಳೆಯೂ ಮಾಜಿ ಸಿಎಂ ಕುಮಾರಸ್ವಾಮಿ ತಮ್ಮ ಫಾರ್ಮ್ ಹೌಸ್ ನಲ್ಲಿ ಪುತ್ರ ನಿಖಿಲ್ ಮದುವೆ ಸಮಾರಂಭವನ್ನು ಅದ್ಧೂರಿಯಾಗಿ ನಡೆಸಿದ್ದಕ್ಕೆ ಸ್ಥಳೀಯ ಬಿಜೆಪಿ ನಾಯಕ ರುದ್ರೇಶ್ ಕಿಡಿ ಕಾರಿದ್ದಾರೆ.


ಸದ್ಯಕ್ಕೆ ರಾಮನಗರ ಸೇಫ್ ಝೋನ್ ನಲ್ಲಿದೆ. ಹಾಗಿದ್ದರೂ ಇಲ್ಲಿ ಇನ್ನು ಮುಂದೆ ಕೊರೋನಾ ಹರಡಿದರೆ ಅದಕ್ಕೆ ಗೌಡರ ಕುಟುಂಬವೇ ಕಾರಣವಾಗುತ್ತೆ ಎಂದು ರುದ್ರೇಶ್ ಆರೋಪಿಸಿದ್ದಾರೆ.

ಬಡವರು ತಮ್ಮ ಅಗತ್ಯ ಕೆಲಸಗಳಿಗೆ ತೆರಳಲೂ ಅವಕಾಶ ಸಿಗುತ್ತಿಲ್ಲ. ಹಾಗಿರುವಾಗ ಕುಮಾರಸ್ವಾಮಿ ಪುತ್ರನ ಮದುವೆಗೆ 100 ರಿಂದ 150 ಕಾರುಗಳು ಬಂದಿತ್ತು ಎಂದು ರುದ್ರೇಶ್ ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಜೆಡಿಎಸ್, ಬಿಜೆಪಿ ನಾಯಕರು ಈ ವಿಚಾರಕ್ಕೆ ರಾಜಕೀಯದ ಬಣ್ಣ ಬಳಿಯುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆತ್ಮರತಿ ಮಾಡುವಾಗ ಹೆಚ್ಚು ಉದ್ರೇಕಗೊಳ್ಳಬೇಕಾದರೆ ಏನು ಮಾಡಬೇಕು?