Publish Date: Wed, 24 Jun 2020 (10:48 IST)
Updated Date: Wed, 24 Jun 2020 (10:51 IST)
ಕೋಲ್ಕತ್ತಾ: ಕೊರೊನಾಗೆ ಮತ್ತೊಬ್ಬ ಶಾಸಕರು ಬಲಿಯಾಗಿದ್ದಾರೆ, ತಮಿಳು ನಾಡಿನ ಬಳಿಕ ಪ.ಬಂಗಾಳದ ಶಾಸಕರೊಬ್ಬರು ಕೊರೊನಾದಿಂದ ಸಾವನಪ್ಪಿದ್ದಾರೆ.
ಪ.ಬಂಗಾಳದ ಟಿಎಂಸಿ ತಮೋನಾಶ್ ಘೋಷ್ (60) ಕೊರೊನಾದಿಂದ ಸಾವನಪ್ಪಿದ್ದಾರೆ. ಇವರು ಮೂರು ಬಾರಿ ಗೆದ್ದು ಶಾಸಕರಾಗಿದ್ದಾರೆ. ಇವರಿಗೆ ಕೊರೊನಾ ದೃಢಪಟ್ಟ ಹಿನ್ನಲೆಯಲ್ಲಿ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ ಎಂಬುದಾಗಿ ತಿಳಿದುಬಂದಿದೆ.