Select Your Language

Notifications

webdunia
webdunia
webdunia
webdunia

ಕೊರೋನಾ ಭಯ ಓಡಿಸಲು ಜಾಗೃತಿ ಮೂಡಿಸಲು ಸಿದ್ಧ ಎಂದ ನಟ ಡ್ಯಾನಿಶ್ ಸೇಠ್

ಕೊರೋನಾ ಭಯ ಓಡಿಸಲು ಜಾಗೃತಿ ಮೂಡಿಸಲು ಸಿದ್ಧ ಎಂದ ನಟ ಡ್ಯಾನಿಶ್ ಸೇಠ್
ಬೆಂಗಳೂರು , ಭಾನುವಾರ, 17 ಮೇ 2020 (09:06 IST)
ಬೆಂಗಳೂರು: ಕೊರೋನಾ ಬಾರದಂತೆ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ. ಆದರೆ ಕೊರೋನಾದಿಂದ ಗುಣಮುಖರಾದವರಿಗೆ, ಕೊರೋನಾ ವಾರಿಯರ್ಸ್ ಗೆ ಈಗ ಇದೇ ಕುತ್ತು ತಂದಿದೆ.


ಕೊರೋನಾದಿಂದ ಗುಣಮುಖರಾದರೂ ಯಾರೂ ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿಲ್ಲ. ಕೊರೋನಾ ವಾರಿಯರ್ಸ್ ಬಳಿ ಜನರು ಬರಲು ಹೆದರುತ್ತಿದ್ದಾರೆ ಎಂಬಿತ್ಯಾದಿ ದೂರುಗಳ ಹಿನ್ನಲೆಯಲ್ಲಿ  ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ ರಾವ್ ಬೀದಿ ನಾಟಕ, ಹಾಡು, ಗುಂಪು ಚಟುವಟಿಕೆ ಮೂಲಕ ಜಾಗೃತಿ ಮೂಡಿಸಲು ಕರೆ ನೀಡಿದ್ದಾರೆ. ಅಷ್ಟೇ ಅಲ್ಲ, ಆಸಕ್ತರು ಇದರಲ್ಲಿ ಭಾಗವಹಿಸಬಹುದೆಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ನಟ ಡ್ಯಾನಿಶ್ ಸೇಠ್ ಸರ್ ಖಂಡಿತಾ ಮಾಡೋಣ. ನಾನು ಇದರಲ್ಲಿ ಯಾವ ರೀತಿ ಪಾಲ್ಗೊಳ್ಳಬಹುದು ಎಂದು ತಿಳಿಸಿದರೆ ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದಿದ್ದಾರೆ. ಈ ರೀತಿ ಪೊಲೀಸ್ ಆಯುಕ್ತರ ಕರೆಗೆ ಬಹಳಷ್ಟು ಮಂದಿ ಪ್ರತಿಕ್ರಿಯಿಸಿದ್ದು, ತಮ್ಮದೇ ಐಡಿಯಾ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಾಲೆ ಆರಂಭಿಸುವ ಸರ್ಕಾರದ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಪೋಷಕರ ಆಕ್ರೋಶ