Webdunia - Bharat's app for daily news and videos

Install App

ಕಾಫಿ, ವಿದ್ಯಾರ್ಥಿಗಳು ಮತ್ತು ಮಾನಸಿಕ ಸಾಮರ್ಥ್ಯ

Webdunia
ಸೋಮವಾರ, 7 ಏಪ್ರಿಲ್ 2008 (17:03 IST)
ಕಾಫಿ ಉತ್ತೇಜನಕಾರಿಯೇ ಎಂದರೆ ಖಂಡಿತವಾಗಿ ಹೌದು. ಯಾವ ಸಂದರ್ಭದಲ್ಲಿ ಅಧ್ಯಯನ ಬೇಸರ ಬರಿಸುತ್ತದೆ ಹಾಗೂ ಆಸಕ್ತಿವುಂಟುಮಾಡುವುದಿಲ್ಲ ಆ ಸಂದರ್ಭದಲ್ಲಿ ಕಾಫಿಯಲ್ಲಿರುವ ಕೆಫೀನ್ ಎಂಬ ಪದಾರ್ಥ ಉತ್ತೇಜನಕಾರಿಯಾಗಿ ವರ್ತಿಸಿ, ಅಧ್ಯಯನಕ್ಕೆ ಸಹಾಯವಾಗುವಂತೆ ನಿಮಗೆ ಶಕ್ತಿಯನ್ನು ನೀಡುತ್ತದೆ. ಇದಲ್ಲದೇ ಕಾಫಿಯು ಅಧ್ಯಯನಕ್ಕೆ ಸಂಬಂಧಿಸಿದಂತೆ ನಮ್ಮಲ್ಲಿ ವೇಗವಾಗಿ ಪರಿಣಾಮವುಂಟುಮಾಡುತ್ತದೆ. ಕಾಫಿಯಲ್ಲಿರುವ ಕೆಫಿನ್ ಅಂಶವು ಪುಸ್ತಕದ ಅಂಶಗಳನ್ನು ಮತ್ತು ಅಧ್ಯಾಯಗಳನ್ನು ಗ್ರಹಿಸುವಲ್ಲಿ ಸಹಕರಿಸುತ್ತದೆ.

ಕಾಫಿಯು ಮನುಷ್ಯನ ಜ್ಞಾಪಕ ಶಕ್ತಿಯನ್ನು ಸಹ ವರ್ಧಿಸುತ್ತದೆ. ಜ್ಞಾಪಕ ಶಕ್ತಿಯನ್ನು ಅಲ್ಪಾವಧಿ ಜ್ಞಾಪಕಶಕ್ತಿ, ಕಾರ್ಯನಿರತ ಜ್ಞಾಪಕಶಕ್ತಿ (ಸಕ್ರಿಯ ಮಾಹಿತಿಯನ್ನು ಉಪಯೋಗಿಸುವ ವಿಭಾಗ) ಮತ್ತು ದೀರ್ಘಾವದಿ ಜ್ಞಾಪಕಶಕ್ತಿಯನ್ನಾಗಿ ವಿಂಗಡಿಸಲಾಗಿದೆ. ಸಾಮಾನ್ಯವಾದ ಮಾಹಿತಿಯನ್ನು ಬಳಸುವಾಗ ಮುಖ್ಯವಾಗಿ ಕಾಫಿಯು ಅಲ್ಪಾವಧಿ ಮತ್ತು ಕಾರ್ಯನಿರತ ಜ್ಞಾಪಕಶಕ್ತಿಯ ಜೊತೆಗೆ ಸಹಾಯ ಮಾಡುತ್ತದೆ.

ಕಾಫಿಯು ಕಲಿಯುವಿಕೆಯನ್ನು ಹೆಚ್ಚಿಸುವಲ್ಲೂ ಸಹಕರಿಸುತ್ತದೆ. ಮಾಹಿತಿಗಳನ್ನು ಅರಿಯುವ ಮತ್ತು ಅದನ್ನು ಸಂಗ್ರಹಿಸುವುದೇ ಕಲಿಯುವಿಕೆ. ಕಾಫಿಯು ಗಮನವನ್ನು,ಚುರುಕುತನವನ್ನು ಹೆಚ್ಚಿಸುವಲ್ಲಿ ಮತ್ತು ಸದಾ ಎಚ್ಚರವಾಗಿರುವಂತೆ ಸಹಾಯ ಮಾಡುತ್ತದೆ. ಈ ಮೂಲಕ ಕಲಿಯುವಿಕೆಯನ್ನು ಸುಲಭಮಾಡುತ್ತದೆ.

ಯಾವ ಸಮಯದಲ್ಲಿ ಕಾಫಿಯನ್ನು ಕುಡಿಯುವುದು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎನ್ನುವದನ್ನು ಕೂಡ ತಿಳಿಯಬೇಕು. ಸಾಮಾನ್ಯವಾಗಿ ಯಾವಾಗ ಹೆಚ್ಚು ನಿದ್ರೆ ಆವರಿಸುತ್ತದೆ ಆ ಸಂದರ್ಭದಲ್ಲಿ ಅದು ಪರಿಣಾಮಿಕಾರಿಯಾಗಬಹುದು.ನೀವು ನಿಜವಾದ ಬೆಳಗ್ಗಿನ ಗುಂಪಿಗೆ ಸೇರಿದ್ದರೆ, ಕಾಫಿ ಕುಡಿಯುವುದು ಸಂಜೆಯ ಹೊತ್ತಿನಲ್ಲಿ ಲಾಭದಾಯಕ ಪರಿಣಾಮವನ್ನುಂಟು ಮಾಡುತ್ತದೆ. ಸಂಜೆಯ ಗುಂಪಿಗೆ ಸೇರಿದ್ದರೆ, ಬೆಳಿಗ್ಗೆ ಕಾಫಿ ಕುಡಿಯುವುದರಿಂದ ಅದು ಉತ್ತಮ ಪರಿಣಾಮವನ್ನು ನೀಡುತ್ತದೆ.

ಊಟ ಮಾಡಿದ ನಂತರದ ಸಮಯದಲ್ಲಿ ನಿದ್ರೆ ಬರುವುದಕ್ಕೆ ಕಾಫಿ ಪರಿಣಾಮಕಾರಿಯೂ ಆಗಬಹುದು. ಇದು ಸಾಮಾನ್ಯ ಪ್ರಕ್ರಿಯೆಯಾಗಿದ್ದು ನೇರವಾಗಿ ಇದು ಊಟಕ್ಕೆ ಸಂಬಂಧಿಸಿದೆಂದು ಹೇಳಲಾಗದು.ದಿನದ ಇಪ್ಪತ್ನಾಲ್ಕು ಘಂಟೆಗಳ ಚಕ್ರದಲ್ಲಿ ಇದು ಒಂದು ಸಾಮಾನ್ಯ ಪ್ರಕ್ರಿಯೆ. ಈ ಸಂದರ್ಭದಲ್ಲಿ ಜೀವ ರಾಸಾಯನಿಕ ಕ್ರಿಯೆಯು ಅದರ ಕೆಳಮಟ್ಟದಲ್ಲಿರುತ್ತದೆ. ಕಾಫಿಯು ಈ ಮಟ್ಟವನ್ನು ಏರಿಸುವುದರಲ್ಲಿ ಸಹಕರಿಸುತ್ತದೆ. ಹಾಗೆಯೇ ಬೆಳಗ್ಗಿನ ಮೂರು ಘಂಟೆಯ ಸಮಯದಲ್ಲೂ ಸಹ. ದಿನದ ಈ ಸಮಯವು ಅಧ್ಯಯನಕ್ಕೆ ಸೂಕ್ತವಲ್ಲದಿದ್ದರೂ, ಒಂದು ಅಥವಾ ಎರಡು ಲೋಟ ಕಾಫಿಯನ್ನು ತಾವು ಸೇವಿಸುವುದರಿಂದ ಅದು ಅಧ್ಯಯನ ಮಾಡಲು ಉತ್ತೇಜನ ನೀಡಬಹುದು.

ಹಾಗೆಯೇ ಕಾಫಿಯನ್ನು ಕುಡಿದ ನಂತರ ಶಾಲಾ ಕಾಲೇಜಿನ ತರಗತಿಗಳಲ್ಲಿ ಭಾಗವಹಿಸಿದರೆ ಪಾಠಗಳನ್ನು ನೀವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬಹುದು. ಮತ್ತೊಂದು ಅರ್ಥದಲ್ಲಿ ಕಾಫಿಯು ನಿಮ್ಮ ಮನಸ್ಸನ್ನು ಮುಕ್ತವಾಗಿರಿಸುತ್ತದೆ. ಅದೇ ರೀತಿ ಕಾಫಿಯು ಅರಿಯುವಿಕೆಯನ್ನು, ಗಮನವನ್ನು ಮತ್ತು ಅಲ್ಪಾವಧಿ ಜ್ಞಾಪಕಶಕ್ತಿಯನ್ನು ಹೆಚ್ಚಿಸುವಲ್ಲಿ ಉಪಯೋಗಕಾರಿಯಾಗಿದೆ.

ಇದರರ್ಥ ಹೆಚ್ಚು ಕಾಫಿ ಕುಡಿದಷ್ಟೂ ಒಳ್ಳೆಯದು ಎಂದಲ್ಲ. ನಿಮ್ಮ ಸ್ವಂತ ಅನುಭವವನ್ನು ಆಧರಿಸಿ ನೀವು ಎಷ್ಟು ಕಾಫಿ ಕುಡಿದರೆ ನಿಮಗೆ ಪ್ರಯೋಜನಕಾರಿ ಎಂಬುದು ನಿಮಗೆ ತಿಳಿದಿರುತ್ತದೆ. ಹೆಚ್ಚು ಕಾಫಿಯನ್ನು ಕುಡಿಯುವುದರಿಂದ ಅದು ಹೆಚ್ಚಿನ ಉತ್ತೇಜನಕ್ಕೆ ಕಾರಣವಾಗಿ ನಿಮ್ಮ ಗಮನ ಮತ್ತು ಅರಿಯುವ ಕ್ರಿಯೆಯನ್ನು ಕುಂದಿಸುವ ಸಂಭವವೂ ಇರುತ್ತದೆ.

ಕಾಫಿ ಕುಡಿಯುವುದು ಒಬ್ಬರ ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗದು. ಆದರೆ ಅದು ಕಲಿಕೆಯ ಸಾಮರ್ಥ್ಯವನ್ನು ಸಮರ್ಥವಾಗಿ ನಿರ್ವಹಿಸಲು ಮತ್ತು ಮನಸ್ಸನ್ನು ಬೇರೆಡೆಗೆ ಸೆಳೆಯದಂತೆ ಸಹಕರಿಸುತ್ತದೆ. ಅಂದರೆ ನಿಮ್ಮ ಕಲಿಕೆಯ ಶಕ್ತಿಯ ಮೂಲವನ್ನು ಅದು ಸಮರ್ಥವಾಗಿಸುತ್ತದೆ.

ವ್ಯಕ್ತಿಯನ್ನವಲಂಬಿಸಿ ಕಾಫಿಯ ಪರಿಣಾಮಕತೆಯೂ ಅಧಿಕವಾಗಿರುತ್ತದೆ ಎನ್ನುವ ಮತ್ತೊಂದು ವಿಷಯ ಆಸಕ್ತಿದಾಯಕವಾದದ್ದು. ಯಾರು ದುಡುಕು ಸ್ವಭಾವದವರೂ, ಪ್ರೀತಿಯನ್ನು ಎದುರಿಸುವಂಥವರೂ ಆಗಿರುತ್ತಾರೋ ಅವರು ತಮ್ಮ ವಿರುದ್ಧ ಸ್ವಭಾವಿಗಳಿಗಿಂತ ಕಾಫಿ ಕುಡಿಯುವದರಿಂದ ಲಾಭ ಪಡೆಯುತ್ತಾರೆ ಎಂದು ತಿಳಿದು ಬಂದಿದೆ.

ಹಾಗೆಯೇ ಅಧ್ಯಯನದ ಕುರಿತ ಕೆಲಸಕ್ಕೆ ಸಂಬಂಧಿಸಿದಂತೆ ಹೆಚ್ಚು ಶ್ರಮ ಪಡಲು ಕಾಫಿ ಸಹಕರಿಸುತ್ತದೆ.

ಓದುವ ಸಮಯದಲ್ಲಿ ಅಪ್ರಧಾನವಾದ ವಿಷಯ ಮತ್ತು ಪ್ರಧಾನವಾದ ವಿಷಯದಲ್ಲಿ ವ್ಯತ್ಯಾಸವನ್ನು ಗುರುತಿಸುವಲ್ಲಿ ಸಮಸ್ಯೆಯನ್ನು ಹೊಂದಿದಲ್ಲಿ ಅಲ್ಲೂ ಕೂಡ ಕಾಫಿ ಸಹಾಯ ಮಾಡುತ್ತದೆ. ಕಾಫಿಯು ಸಂಬಂಧಿಸಿದ ವಿಷಯಕ್ಕೆ ಗಮನ ಹರಿಸುವಂತೆ ಹಾಗು ಅಸಂಗತ ವಿಷಯಗಳನ್ನು ಕಡೆಗಣಿಸುವಲ್ಲಿ ಸಹಾಯ ಮಾಡುತ್ತದೆ. ಹಾಗೆಯೇ ಯಾವುದು ಪ್ರಮುಖ ಹಾಗು ಪ್ರಮುಖಲ್ಲದ ವಿಷಯಗಳನ್ನು ಗ್ರಹಿಸುವಲ್ಲಿಯೂ ಅದು ಸಹಕರಿಸುತ್ತದೆ.

ಪರೀಕ್ಷೆಯ ಮೊದಲು ಹಾಗು ಆನಂತರದ ದುರ್ಬಲತೆಯನ್ನು ಕಾಫಿಯು ಬಗೆಹರಿಸುತ್ತದೆ ಎಂದು ಹೇಳಲಾಗುವುದಿಲ್ಲ. ಯಾಕೆಂದರೆ ಆ ಪರಿಸ್ಥಿತಿ ಕ್ಷೋಭೆಗೊಂಡ ಮನಸ್ಸಿನ ಉದ್ರೇಕತೆಯನ್ನು ಪ್ರತಿಬಿಂಬಿಸುತ್ತದೆ. ಆಗ ಕಾಫಿಯನ್ನು ಕುಡಿಯುವುದು ನಿಮ್ಮನ್ನು ನಿರ್ದಿಷ್ಟ ಸ್ಥಿತಿಗಿಂತ ಹೆಚ್ಚಿನ ಮಟ್ಟಕ್ಕೆ ಒಯ್ಯುವದರಿಂದ ನಿಮ್ಮ ಸಾಮರ್ಥ್ಯದಷ್ಟು ಕೆಲಸ ಮಾಡಲು ನಿಮ್ಮನ್ನು ಬಿಡದಿರುವ ಸಾಧ್ಯತೆಗಳಿರಬಹುದು. ಆ ಸಂದರ್ಭದಲ್ಲಿ ಕಾಫಿ ಬಳಕೆಯನ್ನು ಕಡಿಮೆ ಮಾಡುವುದು ಒಳ್ಳೆಯದು. ಕಾಫಿಯು ಪರಿಣಾಮವು ಸಾಕಷ್ಟು ವಿಷಯಗಳನ್ನು ಅವಲಂಬಿಸಿದೆ. ನಿದ್ದೆಯಿಂದೆದ್ದ ನಂತರ ಕಾಫಿಯನ್ನು ಸೇವಿಸುವದು ನಿಮ್ಮನ್ನು ಶಕ್ತಿವಂತರನ್ನಾಗಿಸುತ್ತದೆ. ಹಾಗೆಯೇ ನೀವು ಈಗಾಗಲೇ ಕ್ರಿಯಾತ್ಮಕರಾಗಿದ್ದು ಕಾಫಿಯನ್ನು ಸೇವಿಸುವದರಿಂದ, ಅದು ನಿಮ್ಮನ್ನು ಹೆಚ್ಚು ಉದ್ದೀಪನಗೊಳಿಸುವುದರಿಂದ ದೇಹ ಅದಕ್ಕೆ ಪ್ರತಿಕ್ರಯಿಸಿ ಜೀವ ರಾಸಾಯನಿಕ ಕ್ರಿಯೆಯನ್ನು ಕುಂಠಿತಗೊಳಿಸಬಹುದು. ಈ ವಿಷಯಗಳು ಕಾಫಿ ಯಾಕೆ ನಿಮ್ಮನ್ನು ಸಾಂತ್ವನಗೊಳಿಸುತ್ತದೆ ಎಂಬುದನ್ನು ವಿವರಿಸುತ್ತದೆ.

ಕಾಫಿಯನ್ನು ಮನಸ್ಸಿನ ಪ್ರಶಸ್ತವಾಗಿಡುವುದಕ್ಕೆ ಬಳಕೆ ಮಾಡುವುದರಿಂದ ಪರೀಕ್ಷೆಯ ಸಮಯದಲ್ಲಿ ಯಶಸ್ಸನ್ನು ಗಳಿಸಲು ಸೂಕ್ತವಾದ ಮನಸ್ಥಿತಿಯನ್ನು ಮೂಡಿಸುವುದರಲ್ಲಿ ಸಹಾಯ ಮಾಡುತ್ತದೆ. ನೀವು ಕಾಫಿಯನ್ನ ದಿನನಿತ್ಯ ಬಳಕೆ ಮಾಡುತ್ತಿರದಿದ್ದರೆ ನಿಮಗೆ ಕಾಫಿಯು ಸೂಕ್ತವಾದ ಆಯ್ಕೆಯಾಗಲಾರದು.ಆ ಸಂದರ್ಭದಲ್ಲಿ ನೀವು ದಿನನಿತ್ಯ ಬಳಕೆ ಮಾಡುವ ಪಾನೀಯವನ್ನೇ ಬಳಸಿ.

ಕೆಫಿನ್‌ನ ಪರಿಣಾಮಕ್ಕೆ ಕಾಫಿಯನ್ನು ಬಳಸುತ್ತಿಲ್ಲ. ನಾನು ಅದರ ಸುಖೋಷ್ಣತೆ, ಸ್ವಾದ ಮತ್ತು ರುಚಿಯ ಕಾರಣದಿಂದ ಅದನ್ನು ಇಷ್ಟ ಪಡುತ್ತೇನೆ ಎಂದು ಸಾಮಾನ್ಯವಾಗಿ ಜನರು ಹೇಳುವುದನ್ನು ಕೇಳಬಹುದು.

ಸಂಶೋಧನೆಯೊಂದರಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಸಾಮಾನ್ಯ ಕಾಫಿಯನ್ನು ನೀಡುವ ಬದಲು ಕೆಫೀನ್ ರಹಿತ ಕಾಫಿಯನ್ನು ನೀಡಲಾಯಿತು. ಆದರೂ ಸಹ ಅವರು ಸಾಮಾನ್ಯ ರೀತಿಯಲ್ಲಿ ಕೆಲಸವನ್ನು ನಿರ್ವಹಿಸಿದರು. ಇದರ ಅರ್ಥ ಕಾಫಿಯನ್ನು ಪಡೆಯುವ ಪ್ರತೀಕ್ಷೆ ಮತ್ತು ಕಾಫಿಯ ತೆರನಾದ ಪಾನೀಯದ ಸುವಾಸನೆ ಮತ್ತು ಆಹ್ಲಾದತೆಯು ಸಾಮಾನ್ಯ ಕಾಫಿಯಷ್ಟೇ ಪರಿಣಾಮವನ್ನುಂಟುಮಾಡುತ್ತದೆ. ಕಾಫಿಯನ್ನು ಕುಡಿಯುವುದು ಎಂದರೆ ಕೆಫೀನ್ ಗಿಂತ ಏನೋ ಹೆಚ್ಚಿನದನ್ನು ಸೇವಿಸಿದಷ್ಟು.

ಓರ್ವ ಸಾಮಾನ್ಯ ಕಾಫಿ ಸೇವಿಸುವನಾಗಿದ್ದು, ಒಂದು ವೇಳೆ ಕಾಫಿಯನ್ನು ಸೇವಿಸದೇ ಹೋದರೆ ಪರೀಕ್ಷೆಯ ವೇಳೆಯಲ್ಲಿ ಆಸಕ್ತಿಯನ್ನು ಕುಗ್ಗಿಸಿ ಫಲಿತಾಂಶದ ವೇಳೆ ಪರಿಣಾಮ ಬೀರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಆದ್ದರಿಂದ ಸಾಮಾನ್ಯ ಸೇವನೆಗೆ ಬದ್ದರಾಗಿರುವುದು ಒಳ್ಳೆಯದು.

ಕೆಲವು ವ್ಯಕ್ತಿಗಳು ಕಾಫಿ ಸೇವೆಯು ಕೆಟ್ಟದ್ದು ಎಂದು ಹೇಳುತ್ತಾರೆ. ಆದ್ದರಿಂದ ನಾವು ಕಾಫಿ ಸೇವನೆಯನ್ನು ಕಡಿಮೆಗೊಳಿಸಬೇಕೆ ಎಂದು ಸಾಕಷ್ಟು ಜನ ಕೇಳುವುದುಂಟು. ಕಾಫಿಯು ಜಗತ್ತಿನಲ್ಲಿ ಅತ್ಯಂತ ವ್ಯಾಪಕವಾಗಿ ಅಧ್ಯಯನ ಮಾಡಿದ ಪದಾರ್ಥಗಳಲ್ಲಿ ಒಂದು. ಈ ಕುರಿತಂತೆಯ ಸಾವಿರಾರು ಅಧ್ಯಯನಗಳು ಕಾಫಿಯನ್ನು ಮಿತವಾಗಿ ಬಳಸುವುದು ಸುರಕ್ಷಿತವೂ ಹಾಗು ಆರೋಗ್ಯಕ್ಕೆ ಲಾಭದಾಯಕವೆಂದು ಸಾಬೀತುಪಡಿಸಿವೆ. ಭಾರತೀಯ ಹವಾಮಾನದಲ್ಲಿ ದಿನಕ್ಕೆ ಎರಡು ಅಥವಾ ಮೂರು ಲೋಟ ಕಾಫಿಯನ್ನು ಸೇವಿಸುವುದು ಮಿತವಾದದ್ದು ಎಂದು ಸ್ವೀಕರಿಸಲಾಗಿದೆ.


ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಕಲ್ಲಂಗಡಿ ಹಣ್ಣನ್ನು ಫ್ರಿಡ್ಜ್ ನಲ್ಲಿಟ್ಟು ಸೇವಿಸುತ್ತಿದ್ದೀರೆ ಇದನ್ನು ಓದಿ

ಪೇಟೆಯಿಂದ ತಂದ ಮಾವಿನ ಹಣ್ಣು ಸೇವಿಸುವ ಮೊದಲು ಈ ಟಿಪ್ಸ್ ಫಾಲೋ ಮಾಡಿ

ಕ್ಯಾನ್ಸರ್ ರೋಗಕ್ಕೆ ಈ ಒಂದು ಹಣ್ಣು ರಾಮಬಾಣ

ಕಾರ್ನ್ ಸಿಲ್ಕ್ ಚಹಾ ಮಾಡಿ ಕುಡಿದರೆ ನಿಮ್ಮ ಈ ಅಂಗ ಸುರಕ್ಷಿತವಾಗಿರುತ್ತದೆ

ಮಾವಿನ ಹಣ್ಣು ತಿಂದರೆ ಶುಗರ್ ಹೆಚ್ಚಾಗುತ್ತಾ