Select Your Language

Notifications

webdunia
webdunia
webdunia
Saturday, 5 April 2025
webdunia

ಸೊಕ್ಕಿನ ಕಂಗನಾಗೆ ಈ ವರ್ಷ ಶುಭಫಲ

ಕಂಗನಾ ರಾಣಾವತ್
IFM
ಕಂಗನಾ ರಾಣಾವತ್ ಹುಟ್ಟಿದ್ದು 23ರ ಮಾರ್ಚ್ 1987ರಲ್ಲಿ. ಹಿಮಾಚಲ ಪ್ರದೇಶದಲ್ಲಿ ಹುಟ್ಟಿದರೂ ಚಿತ್ರದಲ್ಲಿ ನಟಿಸುವ ಅವಕಾಶಕ್ಕಾಗಿ ಹಲವು ತರಬೇತಿಗಳನ್ನು ಪಡೆದು ಅದೃಷ್ಟ ಪರೀಕ್ಷೆಗಾಗಿ ಮುಂಬೈಗೆ ಬಂದಳು. ಅದೃಷ್ಟವಶಾತ್ ಕೆಫೆಯೊಂದರಲ್ಲಿ ಕಾಫಿ ಹೀರುತ್ತಿದ್ದಾಗ ಕಂಗನಾ ಅನುರಾಗ್ ಬಸು ಕಣ್ಣಿಗೆ ಬಿದ್ದಳು. ತನ್ನ ಚಿತ್ರ ಗ್ಯಾಂಗ್‌ಸ್ಟರ್‌ನಲ್ಲಿ ನಟಿಸಲು ಕರೆದರು. ಮೊದಲ ಚಿತ್ರ ಗ್ಯಾಂಗ್‌ಸ್ಟರ್ ಕಮರ್ಶಿಯಲ್ ಹಿಟ್ ಆಯಿತು. ಕ್ರಿಯಾತ್ಮಕವಾಗಿಯೂ ವಿಮರ್ಶಕರಿಂದ ಭೇಷ್ ಅನಿಸಿಕೊಂಡಿತು. ಮೊದಲ ಚಿತ್ರಕ್ಕೇ ಉತ್ತಮ ನಟನೆಗಾಗಿ ಫಿಲಂಫೇರ್ ಪ್ರಶಸ್ತಿಯನ್ನೂ ಗಿಟ್ಟಿಸಿಕೊಂಡಳು. ನಂತರ ಫ್ಯಾಷನ್, ರಾಝ್ 2ಗಳನ್ನೂ ಪ್ರಸಿದ್ಧಿಯ ಸಂತಸದಲ್ಲಿ ತೇಲಿದಳು. ಈಗ ಹೃತಿಕ್ ಜತೆಗೆ ಕೈಟ್ಸ್‌ನಲ್ಲಿ ಅಭಿನಯಿಸುತ್ತಿದ್ದಾಳೆ.

ಕಂಗನಾದು ಮೇಷ ರಾಶಿ. ಜನ್ಮಸಂಖ್ಯೆ 5. ಆಕೆಯ ಅದೃಷ್ಟದ ದಿನಗಳು ಬುಧವಾರ, ಶುಕ್ರವಾರ ಹಾಗೂ ಶನಿವಾರ. ಈಕೆ ತನ್ನ ಜಗಳಗಂಟಿ ವರ್ತನೆ ಹಾಗೂ ಸ್ವಲ್ಪ ಸೊಕ್ಕಿನ ನಟಿಯೆಂದೇ ಬಾಲಿವುಡ್ಡಿನಲ್ಲಿ ಖ್ಯಾತಿ ಪಡೆದಿದ್ದಾಳೆ. ಇತ್ತೀಚೆಗೆ ತನ್ನ ವಾಹನ ಚಾಲಕನ ಕಪಾಳಕ್ಕೆ ಬಾರಿಸಿರುವುದಲ್ಲದೆ ಆತನನ್ನು ಹಿಂಸಿಸಿದ್ದಾಳೆ ಎಂಬ ಆರೋಪವೂ ಈಕೆಯ ಮೇಲಿದೆ. ಜತೆಗೆ ಯಾವಾಗಲೂ ಒಂದಲ್ಲ ಒಂದು ಕಿತಾಪತಿ ಮಾಡುವ ಮೂಲಕ ಮಾಧ್ಯಮಗಳ ಕಾಲಂಗಳಲ್ಲಿ ಜಾಗ ಗಿಟ್ಟಿಸಿಕೊಳ್ಳುತ್ತಲೇ ಇರುವ ನಟಿ ಕಂಗನಾ. ಇದಕ್ಕೆಲ್ಲ ಕಾರಣ ಆಕೆಯ ಜಾತಕದಲ್ಲಿ ಅಧಿಪತ್ಯ ಹೊಂದಿರುವ ಮಂಗಳ. ಆಕೆ ಸ್ವಲ್ಪ ಮುಂಗೋಪಿಯಾಗಿರುವುದೂ ಇದೇ ಕಾರಣಕ್ಕೆ. ಆದರೂ ಆಕೆ ತುಂಬ ಧೈರ್ಯಸ್ಥೆ, ಉತ್ತಮ ನಾಯಕತ್ವಗುಣಗಳನ್ನು ಹೊಂದಿರುವ ಹಾಗೂ ಹೆದರಿಕೆಯೇ ಇಲ್ಲದ ಗುಣಗಳು ಆಕೆಯ ಉತ್ತಮ ಗುಣಗಳು.

ಕಂಗನಾ ತನ್ನ ಯಶಸ್ಸಿಗೆ ಯಾವಾಗಲೂ ಗುರಿಯನ್ನು ಇಟ್ಟುಕೊಳ್ಳುವ ಜಾಯಮಾನದವಳು. ಶಿಸ್ತು ಹಾಗೂ ಅಷ್ಟೇ ತಾಳ್ಮೆಯನ್ನೂ ಹೊಂದಿರುವ ಈಕೆಯ ಮೇಲೆ ಗುರು ಗ್ರಹದ ಕೃಪಾಕಟಾಕ್ಷ ಇರುವುದರಿಂದ ಈಕೆಗೆ ಯಶಸ್ಸು, ಶುಭ ಫಲಗಳು ದೊರೆಯುತ್ತವೆ. ಯಾವುದೇ ಭಯವಿಲ್ಲದೆ ತನ್ನ ತೊಂದರೆಗಳನ್ನು ನಿವಾಳಿಸಿ ಎಸೆಯುವ ತಾಕತ್ತು ಈಕೆಯಲ್ಲಿದೆ. ಈ ವರ್ಷ ಆಕೆಗೆ ಹಲವು ಶುಭಫಲಗಳು ದೊರೆಯಲಿವೆ.

Share this Story:

Follow Webdunia kannada