Select Your Language

Notifications

webdunia
webdunia
webdunia
webdunia

ಸಚಿನ್‌ರಿಂದ ಇನ್ನೂ ವಿಶ್ವದಾಖಲೆ!

ಸಚಿನ್‌ರಿಂದ ಇನ್ನೂ ವಿಶ್ವದಾಖಲೆ!
PTI
ಕ್ರಿಕೆಟ್ ಪ್ರಿಯರ ಡಾರ್ಲಿಂಗ್ ಆಗಿರುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಜನ್ಮದಿನ 1973ರ ಎಪ್ರಿಲ್ 24. ಅವರು ಮುಂಬೈಯಲ್ಲಿ ಸಾಯಂಕಾಲದ ಹೊತ್ತಲ್ಲಿ 4.25ಕ್ಕೆ ಜನಿಸಿದ್ದಾರೆ. ಸಚಿನ್ ಅವರ ಕುಂಡಲಿಯನ್ನು ಗಮನಿಸಿದರೆ, ಕನ್ಯಾದಲ್ಲಿ ಆರೋಹಣ. ಚಂದ್ರ ಮತ್ತು ರಾಹು ಧನುರಾಶಿಯಲ್ಲಿದ್ದಾರೆ.

ಎರಡೂವರೆ ವರ್ಷಗಳ ಅಷ್ಠಮ ಶನಿಯ ಬಳಿಕ ಶನಿಯು ಜನ್ಮಜಾತ ಚಂದ್ರನಿಂದ 9ನೆ ಮನೆಗೆ ಚಲಿಸಿದ್ದಾನೆ. ವೃಶ್ಚಿಕ ರಾಶಿಯಿಂದ ಗುರುವಿನ ಸ್ಥಳಾಂತರ ಇಚ್ಛಾ ಫಲಿತಾಂಶಗಳನ್ನು ನೀಡುವಲ್ಲಿ ಸಹಕಾರಿಯಾಗಿಲ್ಲ. ಆದರೆ, 2008ರ ಮೇ ತಿಂಗಳ ತನಕ ರಾಹು ಕೇತು ಕಾಲವಾಗಿರುವ ಕಾರಣ ಈ ಸಮಯ ಅವರಿಗೆ ಅನುಕೂಲಕರವಾಗಿ ಕಾಣುತ್ತದೆ. ಹಾಗೂ ಹಲವು ಶುಭಫಲಗಳನ್ನೂ ತಂದಿದೆ. ಮುಂದೆಯೂ ತರಲಿದೆ. ರಾಹುಕೇತು ಕಾಲದಲ್ಲಿ ಅವರು ಹೆಚ್ಚಿನ ಆದಾಯ, ಪ್ರಶಸ್ತಿ, ಪುರಸ್ಕಾರ, ಯಶಸ್ಸು, ಹೆಸರು ಗಳಿಸಲಿದ್ದಾರೆ. ಅವರ ಆರೋಗ್ಯವೂ ಉತ್ತಮವಾಗಿರುತ್ತದೆ.

ಯಶಸ್ಸಿನ ಶಿಖರ ತಲುಪಿರುವ ತೆಂಡೂಲ್ಕರ್ ಇನ್ನಷ್ಟು ಯಶಸ್ಸಿನ ರುಚಿ ನೋಡಲಿದ್ದು, ವಿಶ್ವದಾಖಲೆಗಳನ್ನು ಸಾಧಿಸಲಿದ್ದಾರೆ. ಅವರು ತನ್ನ ಅಭಿಮಾನಿಗಳು ಮತ್ತು ಕ್ರಿಕೆಟ್ ಪ್ರಿಯರಿಗೆ ಹೆಚ್ಚಿನ ಸಂತುಷ್ಠಿ ನೀಡುತ್ತಾರೆ ಎಂದು ಗ್ರಹಗತಿಗಳ ಸ್ಥಾನಮಾನ ಹೇಳುತ್ತದೆ.

Share this Story:

Follow Webdunia kannada