ಪಂ. ಅಶೋಕ್ ಪವಾರ್
ಮಲ್ಲಿಕಾ ಶೆರಾವತ್ ಹುಟ್ಟಿದ್ದು 1981ರ ಅಕ್ಟೋಬರ್ 24. ತುಲಾ ಲಗ್ನ. ಧನು ರಾಶಿ. ಹುಟ್ಟೂರು ಹರಿಯಾಣ. ತುಲಾ ಲಗ್ನದ ಹುಡುಗಿಯರು ಯಾವಾಗಲು ತೆಳು ಮೈಕಟ್ಟು ಹೊಂದಿರುತ್ತಾರೆ. ಲಗ್ನದಲ್ಲಿ ಶುಕ್ರ, ಶನಿ, ಗುರು ಹಾಗೂ ಸೂರ್ಯರಿದ್ದಾರೆ. ಶುಕ್ರ ಸೌಂದರ್ಯದ ಪ್ರತೀಕವಾದರೆ, ಆ ಸೌಂದರ್ಯವನ್ನು ಶನಿ ಇನ್ನೂ ಪ್ರಕಾಶಿತರನ್ನಾಗಿ ಮಾಡುತ್ತದೆ. ಅಲ್ಲದೆ ಅವರ ಜಾತಕದಲ್ಲಿ ರಾಕ್ಷಸರ ಗುರು ಶುಕ್ರನೂ, ದೇವತೆಗಳ ಗುರು ಬೃಹಸ್ಪತಿಯೂ ವಿರಾಜಮಾನರಾಗಿದ್ದಾರೆ. ಸೂರ್ಯ ನೀಚನಾದರೂ, ಆ ನೀಚತ್ವಕ್ಕೆ ಭಂಗ ಬಂದಿದೆ. ಇಬ್ಬರು ಪಂಚಮಹಾಪುರುಷರ ರಾಜಯೋಗ ಹಾಗೂ ಶನಿಯ ಯಶಸ್ಸು ಯೋಗವೂ ಮಲ್ಲಿಕಾಗಿದೆ.
ಮಲ್ಲಿಕಾ ವೆಲ್‌ಕಂ ಚಿತ್ರದಲ್ಲಿ ತನ್ನ ಸೆಕ್ಸೀ ಇಮೇಜ್ ತೊರೆದರೂ, ಆಕೆಯನ್ನು ಸೆಕ್ಸೀ ಇಮೇಜೇ ಹೆಚ್ಚು ಪ್ರಸಿದ್ಧವಾದವು. ಉತ್ತಮ ಅವಕಾಶಗಳು ಸಿಕ್ಕರೆ ಮಲ್ಲಿಕಾಗೆ ತನ್ನ ಬೇರೆಯೇ ಆದ ಅದ್ಭುತ ಪ್ರತಿಭೆಯನ್ನು ಮೆರೆಯಲು ಇನ್ನೂ ಸಾಧ್ಯತೆಗಳಿವೆ. ಕುಂಡಲಿಯಲ್ಲಿ ರಾಜಯೋಗ ಹೆಚ್ಚು ಪ್ರಮುಖವೆನಿಸುತ್ತದೆ. ಆದರೆ ಉನ್ನತಿಯ ಜತೆ ಜತೆಗೆ ಕಾಳಸರ್ಪ ಯೋಗದ ಅಡ್ಡಗಾಲುಗಳೂ ಅರ್ಥಾತ್ ಬಾಧಕಗಳೂ ಗೋಚರಿಸುತ್ತವೆ. ಆದರೆ ಶನಿ ಮಂಗಳನ ಮೇಲೆ ತೃತೀಯ ದೃಷ್ಟಿಯಲ್ಲಿ ಪರಾಕ್ರಮಿಯೇ ಆಗಿದ್ದಾನೆ.
ಸಪ್ತಮ ಭಾವ ದಾಂಪತ್ಯವನ್ನು ಸೂಚಿಸುವುದರಿಂದ ಮಲ್ಲಿಕಾ ಕುಂಡಲಿಯ ಪ್ರಕಾರ ಆಕೆಗೆ ದಾಂಪತ್ಯದಲ್ಲಿ ನಷ್ಟವಾಗುವ ಸಂಭವವೇ ಹೆಚ್ಚು. ಕಾಳಸರ್ಪ ಯೋಗ ಇಲ್ಲೂ ಅಡ್ಡಗಾಲು ಹಾಕುತ್ತದೆ. ಗುರು ತೃತೀಯ ಅಥವಾ ಅಷ್ಟಮನಾಗಿ ತುಲಾ ರಾಶಿಯಲ್ಲಿ ಬಾಧಕರಾಗುತ್ತಾರೆ. ಆದರೆ ಶನಿಯ ಗೋಚರೀಯ ಭ್ರಮಣ ಸಿಂಹದಲ್ಲಿರುವುದರಿಂದ ಪ್ರಕಾಂಡ ತೊಂದರೆ ಕಾಣದಿದ್ದರೂ, ಪರಿಶ್ರಮಕ್ಕೆ ಮಾತ್ರ ಫಲ ದಕ್ಕೀತು.
ಶನಿಯ ದೃಷ್ಟಿಯನ್ನು ಶುಭ ಎಂದು ಭ್ರಮಿಸುವುದಿಲ್ಲವಾದರೂ, ಉಚ್ಛ ಹಾಗೂ ಮಿತ್ರ ದೃಷ್ಟಿಯಲ್ಲಿ ಅಳೆಯಲಾಗುತ್ತದೆ. ಹಾಗಾಗಿ ಮಿತ್ರ ದೃಷ್ಟಿಯಲ್ಲಿದ್ದರೆ ಪರಿಣಾಮ ಶುಭ ಫಲವೇ ಆಗಿರುತ್ತದೆ. ಮಲ್ಲಿಕಾಗೆ ಶನಿ ಸಿಂಹನಲ್ಲಿ ಭ್ರಮಣ ಮಾಡುತ್ತಿರುವುದರಿಂದ ಸದ್ಯ ಏನೂ ತೊಂದರೆಯಿಲ್ಲ. ಇದೇ 2009ರ ಆಗಸ್ಟ್ ತಿಂಗಳ ನಂತರ ಶನಿ ಕನ್ಯಾ ರಾಶಿಗೆ ಪಾದಾರ್ಪಣೆ ಮಾಡುವುದರಿಂದ ನಂತರ ಮಲ್ಲಿಕಾ ಸ್ವಲ್ಪ ಸಾವಧಾನದಿಂದ ಹೆಜ್ಜೆ ಹಾಕುವುದು ಒಳಿತು.