ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಡಿಸೆಂಬರ್ 17 1950ರಂದು ಜನಿಸಿದರು. ಸೂರ್ಯ ಕುಂಡಲಿಯ ಅನುಸಾರ ಇವರದು ಸಿಂಹ ಲಗ್ನ, ವೃಶ್ಚಿಕ ರಾಶಿ. ಲಗ್ನದ್ಲಲಿ ಶುಕ್ರ ಹಾಗೂ ಶನಿ ಇಬ್ಬರೂ ವಿರಾಜಮಾನರಾಗಿದ್ದಾರೆ. ಅವರಿಗಬ್ಬರೂ ಗುರುವಿನ ಪೂರ್ಣ ದೃಷ್ಟಿಯಲ್ಲಿದ್ದಾರೆ. ಸಿಂಹ ಲಗ್ನ ವ್ಯಕ್ತಿಯಾದ್ದರಿಂದ ಧೀರತ್ವ, ಗಂಭೀರತೆ, ಸಹೃದಯತೆ, ಬದಲಾವಣೆಯ ಮನಸ್ಸು ಹಾಗೂ ಸಾಹಸ ಅವರ ವ್ಯಕ್ತಿತ್ವವಾಗಿದೆ.
ಗುರುವಿನ ಪ್ರಭಾವ ಹೆಚ್ಚಿರುವುದರಿಂದ ಪ್ರಾಮಾಣಿಕತೆ, ಸತ್ಯ, ಆದರ್ಶವಾದಿಯಾಗಿರುವ ಲಕ್ಷಣಗಳು ಹೆಚ್ಚು. ಇದರಿಂದ ಇವರು ಸಾಹಸ ಪ್ರವೃತ್ತಿಯವರೂ ಆಗಿರುತ್ತಾರೆ. ಆದರೆ, ತನ್ನ ಜನ್ಮಭೂಮಿಯನ್ನು ತೊರೆದು ಹೋಗುವುದ್ಕಕಿಂತ ಜನ್ಮಭೂಮಿಯಲ್ಲೇ ಇದ್ದುಕೊಂಡು ಕೆಲಸ ಮಾಡುತ್ತಿದ್ದರೆ ಯಶಸ್ಸಿದೆ.
ಚುನಾವಣಾ ದೃಷ್ಟಿಯಿಂದ ನೋಡುವುದಾದರೆ ಮೋದಿಯವರಿಗೆ 2010ರವರೆಗೆ ಶುಕ್ರನ ಮಹಾದೆಸೆ ನಡೆಯುತ್ತಿದೆ. ಆದರೆ ಇದರ ಜತೆಗೆ ಕೇತುವಿನ ಅಂತರವೂ ಇದೆ. ಶುಕ್ರ ತನ್ನ ಫಲ ನೀಡುತ್ತಲೇ ಇರುತ್ತಾನೆ. ಆದರೆ ಮೋದಿಯವರು ಪ್ರಧಾನ ಮಂತ್ರಿ ಪಟ್ಟದೆಡೆಗೆ ಕಮ್ಣಿಟ್ಟರೆ ಕೇತು ಕೂಡಾ ತನ್ನ ಪ್ರಭಾವ ತೋರಿಸಿ ಅದನ್ನು ಕಷ್ಟಸಾಧ್ಯವನ್ನಾಗಿಸುತ್ತಾನೆ. ಅಲ್ಲದೆ ತಮ್ಮವರಿಂದಲೇ ಕೆಲವು ಅಡೆತಡೆಗಲು ಮೋದಿಯವರಿಗೆ ಎದುರಾಗಬಹುದು. 2010ರ ನಂತರ ಸೂರ್ಯನ ಮಹಾದೆಸೆ ಮೋದಿಯವರ ಜೀವನದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಅದು ಆರಂಭವಾಗುವವರೆಗೆ ಮೋದಿ ಸ್ವಲ್ಪ ಕಾಲ ತಾಳ್ಮೆಯಿಂದ ಸುಮ್ಮನಿದ್ದರೆ ಅವರಿಗೂ ಒಳ್ಳೆಯದು. ಭವಿಷ್ಯ ಉಜ್ವಲವಿದೆ. ಹಿರಿಯರ, ದೊಡ್ಡವರ ಹಾಗೂ ಜನತೆಯ ಆಶಿರ್ವಾದ, ಸ್ನೇಹ ಇವರ ಮೇಲೆ ಸದಾ ಇರುತ್ತದೆ.