Select Your Language

Notifications

webdunia
webdunia
webdunia
webdunia

ದೀಪಿಕಾ ಪ್ರೇಮ ಫಿನಿಶ್, ಭವಿಷ್ಯ ಉತ್ತಮ

ದೀಪಿಕಾ ಪ್ರೇಮ ಫಿನಿಶ್, ಭವಿಷ್ಯ ಉತ್ತಮ
IFM
ದೀಪಿಕಾ ಪಡುಕೋಣೆ ಮಾಡೆಲ್ ಆಗಿ ಯಶಸ್ಸು ಗಳಿಸಿದ ನಂತರ ಬಾಲಿವುಡ್ಡಿಗೆ ಧುಮುಕಿದಾಕೆ. 1986ರ ಜನವರಿ 5ರಂದು ಡೆನ್ಮಾರ್ಕಿನ ಕೋಪನ್‌ಹೇಗನ್‌ನಲ್ಲಿ ಜನಿಸಿದ ಈಕೆ ಒಬ್ಬ ಯಶಸ್ವೀ ಮಾಡೆಲ್ ಆಗಿ, ಫ್ಯಾಷನ್ ವಲಯದ ಖ್ಯಾತನಾಮ ಡಿಸೈನರ್‌ಗಳ ಜತೆಗೆ ಕೆಲಸ ಮಾಡಿದಳು. ನಂತರ ಒಂ ಶಾಂತಿ ಓಂ ಚಿತ್ರದ ಮೂಲಕ ಬಾಲಿವುಡ್ಡಿನಲ್ಲಿ ಬೇರೂರಿದಳು. ಚಿತ್ರ ಹಿಟ್ ಆಗುವ ಜತೆಗೆ ಈಕೆಗೆ ಫಿಲಂಫೇರ್ ಪ್ರಶಸ್ತಿಯನ್ನೂ ತಂದಿತು. ಬಚ್ನಾ ಏ ಹಸಿನೋ ಚಿತ್ರದಲ್ಲಿ ನಂತರ ನಟಿಸಿದ ಈಕೆಯ ಕೈಯಲ್ಲಿ ಈಗ ಹಲವು ಚಿತ್ರಗಳಿವೆ. ಸದ್ಯಕ್ಕೆ ರಣಬೀರ್ ಕಪೂರ್ ಜತೆ ಅಫೇರ್ ಹೊಂದಿರುವ ಈಕೆಯ ಹಾಗೂ ರಣಬೀರರ ಜೋಡಿ ಬಾಲಿವುಡ್ಡಿನ ಹಾಟ್ ಜೋಡಿಗಳಲ್ಲಿ ಒಂದಾಗಿದೆ.

ದೀಪಿಕಾದು ಮಕರ ರಾಶಿ. ಜನ್ಮಸಂಖ್ಯೆ 5. ಬುಧವಾರ, ಶುಕ್ರವಾರ, ಶನಿವಾರ ಅದೃಷ್ಟದ ದಿನಗಳು. ಈಕೆ ಧನಾತ್ಮಕ ಮನಸ್ಸಿನವಳು. ಅಲ್ಲದೆ ಮತ್ತೊಬ್ಬರ ಮೇಲೆ ತನ್ನ ಪ್ರಭಾವ ಬೀರುವ ಶಕ್ತಿ ಉಳ್ಳವಳು. ತುಂಬ ಪ್ರಾಕ್ಟಿಕಲ್ ಆಗಿರುವ ಈಕೆ ಸರಳತೆ, ಪರಿಶುದ್ಧತೆ ಹಾಗೂ ರಸಿಕತನವನ್ನು ಇಷ್ಟಪಡುತ್ತಾಳೆ. ಈಕೆ ಯಾವತ್ತೂ ಶಾರ್ಟ್‌ಕಟ್‌ನ್ನು ಆರಿಸುವುದಿಲ್ಲ. ಆಕೆಯ ಒಂದು ಲೌಕಿಕ ದಿವ್ಯಸೌಂದರ್ಯ ಆಕೆಯನ್ನು ಬಾಲಿವುಡ್ಡಿನ ಸ್ಟಾರ್ ಆಗಿ ಮಾಡಿದೆ.

ದೀಪಿಕಾಗೆ ಬಾಲಿವುಡ್ಡಿನಲ್ಲಿ ಉತ್ತಮ ಭವಿಷ್ಯವಿದೆ. ಯಶಸ್ಸು ಲಭಿಸುತ್ತದೆ. ಅಲ್ಲದೆ ಆಕೆ ಕಷ್ಟಪಟ್ಟು ಕೆಲಸ ಮಾಡುವ ವರ್ಗದವಳಾದ್ದರಿಂದ ಶ್ರಮಕ್ಕೆ ತಕ್ಕ ಫಲ ದೊರೆಯತ್ತದೆ. ಆಕೆಯನ್ನು ಆಶುಲ ಗ್ರಹ ಶನಿಯಾದರೂ, ತನ್ನ ಕೆಟ್ಟ ಪರಿಣಾಮವನ್ನು ಆಕೆಯ ಮೇಲೆ ಬೀರುವುದಿಲ್ಲ. ಏಪ್ರಿಲ್- ಮೇ ತಿಂಗಳಲ್ಲಿ ಆಕೆಯ ಪ್ರೇಮ ಸಂಬಂಧಗಳು ಸ್ವಲ್ಪ ಕೆಟ್ಟ ಪರಿಣಾಮಗಳನ್ನು ಪಡೆಯುವ ಸಂಭವವಿದೆ. ನವೆಂಬರ್- ಡಿಸೆಂಬರ್‌ವರೆಗೂ ಕೆಲವು ಏರಿಳಿತಗಳು ಜೀವನದಲ್ಲಿ ಕಂಡರೂ ನಂತರ ಉತ್ತಮ ಭವಿಷ್ಯ ಈಕೆಗಿದೆ.

Share this Story:

Follow Webdunia kannada