Select Your Language

Notifications

webdunia
webdunia
webdunia
webdunia

ಕತ್ರಿನಾಗೆ ಖಾಸಗಿ ಜೀವನದ್ಲಲಿ ಸುಖ ಕಡಿಮೆ

ಕತ್ರಿನಾಗೆ ಖಾಸಗಿ ಜೀವನದ್ಲಲಿ ಸುಖ ಕಡಿಮೆ
IFM
ಕತ್ರಿನಾ ಕೈಫ್ 1984ರಲ್ಲಿ ಜುಲೈ 16ರಲ್ಲಿ ಹಾಂಗ್‌ಕಾಂಗ್‌ನ್ಲಲಿ ಜನಿಸಿದಳು. ಈಕೆ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟೀಮಣಿಯರಲ್ಲಿ ಒಬ್ಬಳು. ಜತೆಗೆ ವಿಶ್ವದ 100 ಅತ್ಯಂತ ಸೆಕ್ಸೀ ಮಹಿಳೆಯ ಸಾಲಿನಲ್ಲಿಯೂ ಈಕೆಯ ಹೆಸರಿದೆ. ಬೂಮ್ ಚಿತ್ರದ ಮೂಲಕ ಬಾಲಿವುಡ್ ಪ್ರವೇಶ ಮಾಡಿದರೂ, ಚಿತ್ರ ತೋಪಾಯಿತು. ಆದರೆ ನಮಸ್ತೇ ಲಂಡನ್ ಚಿತ್ರ ಹೆಸರು ತಂದಿತು. 2006ರ ನಂತರ ಆಕೆ ತನ್ನ ಚಿತ್ರಗಳ ಮೂಲಕ ಯಶಸ್ಸಿನ ಉತ್ತುಂಗಕ್ಕೇರಿ ಸದ್ಯಕ್ಕೆ ಬಾಲ್ವುಡ್ಡಿನ ಬಹುಬೇಡಿಯ ನಟಿ. ಭಾರತದ ಬಾರ್ಬಿಯೂ ಆದ ಕೀರ್ತಿ ಈಕೆಗೆ ಸಲ್ಲುತ್ತದೆ.

ಕತ್ರಿನಾರದ್ದು ಕಟಕ ರಾಶಿ. ಜನ್ಮಸಂಖ್ಯೆ 7. ಅದೃಷ್ಟದ ದಿನಗಳು ಭಾನುವಾರ, ಸೋಮವಾರ, ಬುಧವಾರ ಹಾಗೂ ಗುರುವಾರಗಳು. ನೆಪ್ಚೂನ್ ಪ್ರಭಾವದಿಂದ ಈಕೆ ಕಲ್ಪನಾ ಲೋಕದಲ್ಲಿ ಸಾಕಷ್ಟು ವಿಹರಿಸುವ ಸ್ವಭಾವದವಳು. ಈಕೆ ಸುಖಾಭಿಲಾಷಿ, ಯಾವುದೇ ವಿಷಯವನ್ನೂ ದೊಡ್ಡದು ಮಾಡದೆ ಸಲೀಸಾಗಿ ತೆಗೆದುಕೊಳ್ಳುವವಳು, ಉದಾರ ಬುದ್ಧಿಯವಳು ಹಾಗೂ ತುಂಬ ಸೆನ್ಸಿಟಿವ್ ಗುಣವನ್ನು ಹೊಂದಿರುವಾಕೆ. ಅಷ್ಟೇ ಅಲ್ಲ. ತನ್ನ ಕುಟುಂಬವನ್ನು ತುಂಬ ಪ್ರೀತಿಸುವ ಹಾಗೂ ಕಾಳಜಿ ತೆಗೆದುಕೊಳ್ಳುವ ಈಕೆ ತನ್ನ ಪ್ರೀತಿಪಾತ್ರರಿಗೆ ಸಾಕಷ್ಟು ಪ್ರೀತಿಯನ್ನು ಧಾರೆಯೆರೆಯುವ ಜತೆಗೆ ಒಬ್ಬ ಉತ್ತಮ ತಾಯಿಯಾಗಿಯೂ ಕಾರ್ಯನಿಭಾಯಿಸಬಲ್ಲಳು.

ಈಕೆಗೆ ಇನ್ನೂ ಬಾಲಿವುಡ್ಡಿನಲ್ಲಿ ಉತ್ತಮ ಭವಿಷ್ಯ, ಅವಕಾಶವಿದೆ. ಆದರೂ, ಖಾಸಗಿ ಜೀವನದಲ್ಲಿ ಅಷ್ಟಾಗಿ ಸುಖ ಕಾಣದ ಈಕೆ ಸಲ್ಮಾನ್ ಖಾನ್‌ನಿಂದ ಖಾಸಗಿಯಾಗಿ ತುಂಬ ನೊಂದುಕೊಳ್ಳುತ್ತಾಳೆ. ಆರೋಗ್ಯದ ಬಗ್ಗೆ ತುಂಬ ಕಾಳಜಿ ತೆಗೆದುಕೊಳ್ಳುವ ಕತ್ರಿನಾ ತನ್ನ ಮೇಲೆ ತಾನು ಹೆಚ್ಚಿನ ಒತ್ತಡ ಹಾಕುವುದಿಲ್ಲ. ಆದರೆ ಯಶಸ್ಸಿನಲ್ಲಿ ಉತ್ತುಂಗಕ್ಕೇರುವ ಈಕೆ, ತನ್ನ ಪ್ರೀತಿಪಾತ್ರರ ಜತೆಗೆ ಈ ವರ್ಷ ಉತ್ತಮವಾಗಿ ಸಮಯ ಕಳೆಯಲಿದ್ದಾಳೆ.

Share this Story:

Follow Webdunia kannada