Select Your Language

Notifications

webdunia
webdunia
webdunia
webdunia

ಬಜೆಟ್ 2017: ಅಗ್ಗದ ದರದ ‘ನಮ್ಮ ಕ್ಯಾಂಟೀನ್’ ಗೆ ಚಾಲನೆ

ಬಜೆಟ್ 2017: ಅಗ್ಗದ ದರದ ‘ನಮ್ಮ ಕ್ಯಾಂಟೀನ್’ ಗೆ ಚಾಲನೆ
Bangalore , ಬುಧವಾರ, 15 ಮಾರ್ಚ್ 2017 (12:32 IST)
ಬೆಂಗಳೂರು: 2017 ನೇ ಸಾಲಿನ ಬಜೆಟ್ ಮಂಡಿಸುತ್ತಿರುವ ಸಿದ್ಧರಾಮಯ್ಯ ಹಿಂದೆ ನೀಡಿದ ಭರವಸೆ ಈಡೇರಿಸಲು ಕ್ರಮ ಕೈಗೊಂಡಿದ್ದಾರೆ. ಅದರಂತೆ ತಮಿಳುನಾಡಿನ ಅಮ್ಮ ಕ್ಯಾಂಟೀನ್ ಮಾದರಿಯ ಯೋಜನೆಗೆ ಹಸಿರು ನಿಶಾನೆ ತೋರಿದ್ದಾರೆ.

 
198 ವಾರ್ಡ್ ಗಳಲ್ಲಿ ‘ನಮ್ಮ ಕ್ಯಾಂಟೀನ್’ ಯೋಜನೆಯಡಿಯಲ್ಲಿ ಅಗ್ಗದ ದರಕ್ಕೆ ಊಟ ನೀಡುವ ಯೋಜನೆಗೆ ಸಿದ್ಧರಾಮಯ್ಯ ಚಾಲನೆ ನೀಡಿದ್ದಾರೆ. ಇದರಿಂದ ಕೈಗೆಟುಕುವ ದರದಲ್ಲಿ 5ರೂ.ಗೆ ತಿಂಡಿ, 10 ರೂ.ಗೆ ಊಟ ಜನರಿಗೆ ಸಿಗಲಿದೆ. ತಮಿಳುನಾಡಿನಲ್ಲಿ ಜಯಲಲಿತಾ ಆರಂಭಿಸಿದ್ದ ಅಮ್ಮ ಕ್ಯಾಂಟೀನ್ ಮಾದರಿಯಲ್ಲೇ ಇದು ಕಾರ್ಯನಿರ್ವಹಿಸಲಿದೆ.

ಇದಕ್ಕಾಗಿ ಬಜೆಟ್ ನಲ್ಲಿ 100 ಕೋಟಿ ರೂ. ಮೀಸಲಿಡಲಾಗಿದೆ. ನಮ್ಮ ಕ್ಯಾಂಟೀನ್ ನಲ್ಲಿ 5 ರೂ. ಉಪಾಹಾರ,  10 ರೂ. ಊಟ ಸಿಗಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ಮುಖ್ಯಾಂಶಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ