Select Your Language

Notifications

webdunia
webdunia
webdunia
webdunia

'ಚಮೇಲಿ' ಕರೀನಾ ಕಪೂರ್

'ಚಮೇಲಿ' ಕರೀನಾ ಕಪೂರ್
, ಮಂಗಳವಾರ, 10 ಮಾರ್ಚ್ 2009 (14:36 IST)
ಮುಂಬೈಯಲ್ಲಿ ಕಪೂರ್ ಕುಟುಂಬದಲ್ಲಿ 1980 ಸೆಪ್ಟೆಂಬರ್ 21ರಂದು ಜನಿಸಿದ ಕರೀನಾ ಕಪೂರ್ 2000 ಇಸವಿಯಲ್ಲಿ ಸಿನಿಮಾರಂಗಕ್ಕೆ ಕಾಲಿರಿಸಿದಳು. ಕರೀನಾಳ ಮೊದಲ ಚಿತ್ರ ರೆಫ್ಯೂಜಿ. ಈ ಸಿನಿಮಾದಲ್ಲಿ ನಾಯಕ ನಟ ಅಭಿಷೇಕ್‌ ಬಚ್ಚನ್‌. ಈ ಚಿತ್ರದ ಅಭಿನಯಕ್ಕಾಗಿ ಕರೀನಾಳಿಗೆ ಪೀಲ್ಮ್‌ಫೇರ್‌ನ 'ಬೆಸ್ಟ್ ಫಿಮೇಲ್ ಡೆಬ್ಯೂಟ್ ಅವಾರ್ಡ್' ಲಭಿಸಿತು. 2001ರ 'ಮುಜೆ ಕುಚ್ ಕಹನಾ ಹೇ', 'ಅಶೋಕ' ಮತ್ತು 'ಕಭಿ ಖುಷ್ ಕಭಿ ಗಮ್' ಚಿತ್ರಗಳು ಭರ್ಜರಿ ಯಶಸ್ಸನ್ನು ಕಂಡಿತು. ಅದಾದ ನಂತರ ತೆರಿಕಂಡ 'ಮುಜ್‌ಸೆ ದೋಸ್ತಿ ಕರೋಗಿ', 'ಖುಷಿ' ಚಿತ್ರಗಳೂ ಸಹ ಯಶಸ್ಸನ್ನು ಕಂಡಿತು. 2004ರಲ್ಲಿ ತೆರೆಕಂಡ 'ಚಮೇಲಿ'ಯಲ್ಲಿ ಕರೀನಾ ವೇಶ್ಯೆಯ ಪಾತ್ರ ನಿಭಾಯಿಸಿದಳು. ಇದಾದ ನಂತರ 2006ರಲ್ಲಿ 'ಓಂಕಾರ', 2007ರ 'ಜಬ್ ವಿ ಮೆಟ್' ಚಿತ್ರಕ್ಕೆ ಫೀಲ್ಮ್‌ಫೇರ್‌ನ 'ಉತ್ತಮ ನಟಿ ಪ್ರಶಸ್ತಿ' ಲಭಿಸಿತು. ಕರೀನಾ ಕೊನೆಯದಾಗಿ ಅಭಿನಯಿಸಿದ ಚಿತ್ರ 'ಗೋಲ್‌ಮಾಲ್ ರಿಟರ್ನ್ಸ್'.

Share this Story:

Follow Webdunia kannada