Article Bollywood Star Profile %e0%b2%95%e0%b2%ae%e0%b2%b2%e0%b3%8d %e0%b2%b9%e0%b2%be%e0%b2%b8%e0%b2%a8%e0%b3%8d %e0%b2%b9%e0%b3%81%e0%b2%9f%e0%b3%8d%e0%b2%9f%e0%b3%81%e0%b2%b9%e0%b2%ac%e0%b3%8d%e0%b2%ac 107110700014_1.htm

Daily Horoscope

Select Your Language

Notifications

webdunia
webdunia
webdunia
webdunia

ಕಮಲ್ ಹಾಸನ್ ಹುಟ್ಟುಹಬ್ಬ

ನಟ ಕಮಲ್ ಹಾಸನ್
WD
ಪ್ರಸಿದ್ಧ ಬಹುಭಾಷಾ ನಟ, ನಾಲ್ಕು ಬಾರಿಯ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತ ಕಮಲ್ ಹಾಸನ್ ಅವರು ಸದ್ದಿಲ್ಲದೆ 53ನೇ ವರ್ಷಕ್ಕಿಂದು ಕಾಲಿಟ್ಟರು.

200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕಮಲ್ ಹಾಸನ್, 1954ರಲ್ಲಿ ಜನಿಸಿದ್ದು, ಯಾವತ್ತೂ ಪ್ರಯೋಗಶೀಲತೆಯನ್ನೇ ಧ್ಯೇಯವಾಗಿಸಿಕೊಂಡವರು. ಅವರ ಹೊಚ್ಚ ಹೊಸ ಪ್ರಯೋಗ, ಇನ್ನೂ ನಿರ್ಮಾಣ ಹಂತದಲ್ಲಿರುವ "ದಶಾವತಾರ"ದಲ್ಲಿ ಅವರು 10 ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ.

ಭಾರತೀಯ ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆಗಾಗಿ 1990ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.

18 ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ ಅವರ "ನಾಯಕನ್" ಚಿತ್ರವು 2005ರ "ಟೈಮ್ಸ್"ನ ಸಾರ್ವಕಾಲಿಕ ಟಾಪ್ 100 ಚಿತ್ರಗಳಲ್ಲಿ ಒಂದಾಗಿ ದಾಖಲಾಗಿದೆ.

ಅವರ ಏಳು ಚಿತ್ರಗಳು ಆಸ್ಕರ್ ಪ್ರಶಸ್ತಿಗೆ ಅಧಿಕೃತವಾಗಿ ಪ್ರವೇಶ ಪಡೆದಿರುವುದು ಭಾರತದಲ್ಲಿ ಬೇರಾವುದೇ ನಟರಿಗೆ ದೊರೆಯದ ಗೌರವವಾಗಿದೆ. ಅದಲ್ಲದೆ ಅವರಿಗೆ ಎಫ್ಐಸಿಸಿಐ "ಚಿತ್ರೋದ್ಯಮದ ಜೀವಂತ ದಂತಕತೆ" ಬಿರುದು ನೀಡಿ ಸನ್ಮಾನಿಸಿದೆ.

Share this Story:

Follow Webdunia kannada