Publish Date: Thu, 20 Oct 2016 (09:13 IST)
Updated Date: Thu, 20 Oct 2016 (13:20 IST)
ಅಶ್ವಿನಿ ನಕ್ಷತ್ರದ ಜೆ.ಕೆ. ಹೆಂಡ್ತಿ, ‘ಕೃಷ್ಣಲೀಲಾ’ದ ಲವ್ಲಿ ಹುಡುಗಿ, “ಇಷ್ಟಕಾಮ್ಯ’ದ ಬೆಡಗಿ ಮಯೂರಿ ಎಲ್ಲರಿಗೂ ಗೊತ್ತಿರಲೇಬೇಕು. ತಮ್ಮ ಹೊಸ ಚಿತ್ರ “ನಟರಾಜ ಸರ್ವಿಸ್” ಬಿಡುಗಡೆಯಾಗುವ ಸಂದರ್ಭದಲ್ಲಿ ಅವರು ವೆಬ್ ದುನಿಯಾ ಜತೆ ಮಾತನಾಡಿದ್ದಾರೆ.
ನಟರಾಜ ಸರ್ವಿಸ್ ಕ್ಯಾರೆಕ್ಟರ್ ಬಗ್ಗೆ ಹೇಳಿ?
ಸಿಂಪಲ್ ಹುಡುಗಿ ಪಾತ್ರ. ಸಹನಾ ಅನ್ನುವ ತುಂಬಾ ಸಹನೆಯಿರುವ ಹುಡುಗಿ ಪಾತ್ರ ನನ್ನದು. ಕಷ್ಟದಲ್ಲಿ ಬೆಳೆದ, ಅಪ್ಪ-ಅಮ್ಮನನ್ನು ಕಳೆದುಕೊಂಡ ಸ್ವಾವಲಂಬಿ ಪಾತ್ರ ನನ್ನದು. ನನ್ನ ಇತರ ಪಾತ್ರಗಳಿಗಿಂತ ಇದು ಭಿನ್ನವಾಗಿದೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಶರಣ್ ಸರ್ ಜತೆ ಆಕ್ಟಿಂಗ್ ಮಾಡಿದ್ದು ಒಳ್ಳೆಯ ಅನುಭವ ಕೊಟ್ಟಿದೆ.
ಹೊಸ ಸಿನಿಮಾ ಮಾಡ್ತಿದೀರಂತೆ?
ಹೌದು. ಕರಿಯಾ-2 ನನ್ನ ನಾಲ್ಕನೇ ಚಿತ್ರ. ಸಂತೋಷ್ ಬಾಲರಾಜ್ ಜತೆ ಮಾಡ್ತಾ ಇದೀನಿ. ಇದು ಒಂಥರಾ ನನ್ನ ನಿಜ ಜೀವನಕ್ಕೆ ಹತ್ತಿರವಾದ ಪಾತ್ರ. ಇದರಲ್ಲಿ ಹೀರೋಯಿನ್ ತನ್ನ ಜೀವನದ ಮಹತ್ವದ ಘಟ್ಟದಲ್ಲಿ ತಂದೆಯನ್ನು ಕಳೆದುಕೊಳ್ಳುವ ಸನ್ನಿವೇಶವಿದೆ. ಅದೇ ರೀತಿ ನಾನೂ ಆಕ್ಟಿಂಗ್ ಶುರು ಮಾಡಿದ ಕೆಲವೇ ದಿನಗಳಲ್ಲಿ ಅಪ್ಪನನ್ನು ಕಳೆದುಕೊಂಡಿದ್ದೆ.
ಕಿರುತೆರೆಯಿಂದ ಬೆಳ್ಳಿ ತೆರೆಗೆ ಬಂದವರಲ್ಲಿ ಹೆಚ್ಚಿನವರು ಕಲರ್ಸ್ ಕನ್ನಡ ಕೂಸುಗಳು. ಅದು ಲಕ್ಕಿ ಚಾನೆಲ್ಲಾ?
ಲಕ್ ನಲ್ಲಿ ನಂಗೆ ನಂಬಿಕೆಯಿಲ್ಲ. ನಾನು ಇಂದು ಏನಾಗಿದ್ದೇನೋ ಅದಕ್ಕೆ ನನ್ನ ಕಠಿಣ ಪರಿಶ್ರಮವೇ ಕಾರಣ. ನಾನು ಹುಬ್ಬಳ್ಳಿ ಹುಡುಗಿ. ನಾನು ಬೆಳೆದು ಬಂದ ರೀತಿಯೇ ಹಾಗಿದೆ. ಆದರೂ ಚಾನೆಲ್ ನಂಗೆ ಒಂದು ವೇದಿಕೆ ಕಲ್ಪಿಸಿದ್ದು ನಿಜ. ಅಶ್ವಿನಿ ನಕ್ಷತ್ರದಿಂದಾಗಿಯೇ ನಾನಿವತ್ತು ಈ ಮಟ್ಟಕ್ಕೆ ಬೆಳೆದಿದ್ದೇನೆ.
ಜೆಕೆ ಜೊತೆ ಆಕ್ಟಿಂಗ್ ಮಾಡುವ ಅವಕಾಶ ಮತ್ತೆ ಬಂದ್ರೆ?
ಖಂಡಿತಾ. ಒಳ್ಳೆ ಪ್ರಾಜೆಕ್ಟ್ ಬಂದರೆ ಮಾಡೋಣ. ಜನ ಈಗ್ಲೂ ಮತ್ತೆ ನಾವು ಜತೆಯಾಗಿ ಅಭಿನಯಿಸ್ತೀವಾ ಅಂತ ಕೇಳುವವರಿದ್ದಾರೆ.
ಸಿನಿಮಾಗೆ ಬಂದ ಮೇಲೆ ಮಯೂರಿ ಬದಲಾಗಿದ್ದಾರ?
ಬದಲಾವಣೆ ಖಂಡಿತಾ ಇದೆ. ಆದ್ರೆ ಅದು ವೃತ್ತಿಯಲ್ಲಿ. ಅದರ ಹೊರತಾಗಿ ನಾನು ಈಗಲೂ ಅದೇ ನಾರ್ಮಲ್ ಹುಡುಗಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ