Select Your Language

Notifications

webdunia
webdunia
webdunia
webdunia

ರಾಜ್ ಕಪೂರ್ 28ನೇ ಪುಣ್ಯತಿಥಿ.. ಗೌರವಾರ್ಪಣೆ ಸಲ್ಲಿಸಿದ ಪುತ್ರ ರಿಷಿ ಕಪೂರ್

Raj Kapoor 28th death anniversary
ಮುಂಬೈ , ಗುರುವಾರ, 2 ಜೂನ್ 2016 (18:17 IST)
ರಾಜ್ ಕಪೂರ್ 28ನೇ ಪುಣ್ಯತಿಥಿ ಅಂಗವಾಗಿ ಪುತ್ರ ರಿಷಿ ಕಪೂರ್ ಗೌರವಾರ್ಪಣೆ ಸಲ್ಲಿಸಿದ್ದಾರೆ. ಈ ಬಗ್ಗೆ ಟ್ವಿಟರ್‌ನಲ್ಲಿ ರಿಷಿ ಕಪೂರ್ 'ರಹೇಂಗೆ ಸದಾ' ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೇ ಇದೇ ವೇಳೆ ನಾನು ರಾಜ್ ಕಪೂರ್ ಮಗನಾಗಿರುವುದಕ್ಕೆ ಹೆಮ್ಮೆ ಆಗ್ತಿದೆ ಎಂದು ಹೇಳಿದ್ದಾರೆ.

 
63 ವರ್ಷದ ರಾಜ್ ಕಪೂರ್ ರಾಜ್ ಕಪೂರ್ ಪುಣ್ಯತಿಥಿ ಅಂಗವಾಗಿ ಕಾಣಿಕೆ ಸಲ್ಲಿಸಿದ್ದಾರೆ. ಇನ್ನೂ ರಾಜಕಪೂರ್ ತಮ್ಮ 63ನೇ ವಯಸ್ಸಿನಲ್ಲೇ ನಿಧನರಾಗಿದ್ದರು. 1924-1988 28 ವರ್ಷಗಳ ಹಿಂದೆ ತುಂಬಾ ಖ್ಯಾತಿ ಕಂಡಿದ್ದ ರಾಜ್ ಕಪೂರ್ ಅವರ ಪುತ್ರನಾಗಿರುವುದಕ್ಕೆ ಹೆಮ್ಮೆ ಇದೆ ಎಂದು ರಿಷಿ ಕಪೂರ್ ತಿಳಿಸಿದ್ದಾರೆ.
 
ಹಿಂದಿ ಚಿತ್ರರಂಗದಲ್ಲಿ ರಾಜ್ ಕಪೂರ್ ಜೀನಾ ಹೇ ಮರಾನಾ ಹೇ, ಹಾಗೂ ಮೇರಾ ನಾಮ್ ಜೋಕರ್ ಚಿತ್ರದ ಮೂಲಕ ಅಪಾರ ಅಭಿಮಾನಿಗಳ ಗಮನ ಸೆಳೆದಿದ್ದರು. ಹಿಂದಿ ಚಿತ್ರರಂಗದ ಶೋ ಮ್ಯಾನ್ ಅಂತಲೇ ಖ್ಯಾತಿ ಗಳಿಸಿದ್ದ ರಾಜ್ ಕಪೂರ್ ಆವಾರಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು..  ಶ್ರೀ 420, ಬೂಟ್ ಪಾಲಿಶ್, ಚಿತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು.
 
ಅದಲ್ಲದೇ 1971ರಲ್ಲಿ ಭಾರತ ಸರ್ಕಾರದಿಂದ ಪದ್ಮ ವಿಭೂಷಣ ಪ್ರಶಸ್ತಿಗೆ ರಾಜ್ ಕಪೂರ್ ಭಾಜನರಾಗಿದ್ದರು.ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಕೂಡ ಅವರಿಗೆ ಲಭಿಸಿತ್ತು.
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

 

Share this Story:

Follow Webdunia kannada

ಮುಂದಿನ ಸುದ್ದಿ

ಕರೀನಾ ಜತೆ ಮತ್ತೆ ನಟಿಸಲು ಆಸೆ ವ್ಯಕ್ತಪಡಿಸಿದ ಮಾಜಿ ಪ್ರಿಯಕರ ಶಾಹಿದ್