ಜುಡ್ವಾ -2 ಚಿತ್ರಕ್ಕೆ ಆಫರ್ ಬಂದಿಲ್ಲ , ಈ ಬಗ್ಗೆ ನನ್ನನ್ನು ಸಂಪರ್ಕಿಸಲಾಗಿಲ್ಲ ಎಂದು ನಟಿ ಜಾಕ್ವಲಿನ್ ಫರ್ನಾಂಡಿಸ್ ತಿಳಿಸಿದ್ದಾರೆ. ಅವರ ಮುಂಬರುವ ಚಿತ್ರ ಹೌಸ್‌ಫುಲ್-3 ಚಿತ್ರದ ಪ್ರಚಾರದ ವೇಳೆ ಜಾಕ್ವೆಲಿನ್
ಆ್ಯಕ್ಷನ್ ಸಿಕ್ವೆನ್ಸ್ ಚಿತ್ರಗಳಲ್ಲಿ ನಟಿಸುವ ಆಸೆ ಇದೆ. ಇನ್ನೂ ಕಿಕ್ -2 ಚಿತ್ರದ ಬಗ್ಗೆ ಕೇಳಲಾದ ಪ್ರಶ್ನೆಗೆ ಸಲ್ಮಾನ್ ಖಾನ್ ಜತೆಗೆ ಮತ್ತೆ ನಟಿಸುವ ಇಂಗಿತ ವ್ಯಕ್ತಪಟಿಸಿದ್ದಾರೆ.
997 ರಲ್ಲಿ ತೆರೆ ಕಂಡ ಜುಡ್ವಾ ಸಿನಿಮಾದ ಸೀಕ್ವೆಲ್ ಇದೀಗ ಬಾಲಿವುಡ್ ನಲ್ಲಿ ಸೆಟ್ಟೇರುತ್ತಿದೆ. ಈ ಸಿನಿಮಾದಲ್ಲಿ ವರುಣ್ ಧವನ್ ಅವರಿಗೆ ಒಲಿದಿದೆ ಎನ್ನಲಾಗಿದೆ.
ಜುಡ್ವಾ-2 ಸಿನಿಮಾದಲ್ಲಿ ವರುಣ್ ಧವನ್ ಅವರಿಗೆ ನಾಯಕಿಯಾಗಿ ಶ್ರದ್ಧಾ ಕಪೂರ್ ಅವರು ಕಾಣಿಸಿಕೊಳ್ಳುತ್ತಿದ್ದಾರಂ ಅಂತಾ ಹೇಳಲಾಗ್ತಿದೆ. ಆದ್ರೆ ಶ್ರದ್ಧಾ ಕಪೂರ್ ಮಾತ್ರ ಈ ಬಗ್ಗೆ ಏನೂ ಹೇಳಿಲ್ಲ ಅಂತಾ ಹೇಳಲಾಗ್ತಿದೆ. ಒಂದು ವೇಳೆ ಶ್ರದ್ಧಾ ಈ ಬಗ್ಗೆ ಖಚಿತಪಡಿಸಿದ್ರೆ ಶೀಘ್ರವೇ ಈ ಸುದ್ದಿ ನಿಜವಾಗಲಿದೆ. ಅಲ್ಲದೇ ಶ್ರದ್ಧಾ ಕಪೂರ್ ಅವರು ವರುಣ್ ಧವನ್ ಅವರ ಜೊತೆ ಅಭಿನಯಿಸುತ್ತಿರುವ ಎರಡನೇ ಸಿನಿಮಾ ಇದಾಗಿರಲಿದೆ.
ಸದ್ಯ ಶ್ರದ್ಧಾ ಕಪೂರ್ ಅವರ ಕೈಯಲ್ಲಿ ಅನೇಕ ಸಿನಿಮಾಗಳಿವೆ.ಟೈಗರ್ ಶ್ರಾಫ್ ಅಭಿನಯಿಸುತ್ತರುವ ಭಾಗಿ ಸಿನಿಮಾದಲ್ಲಿ ಶ್ರದ್ಧಾ ಕಪೂರ್ ನಾಯಕಿಯಾಗಿದ್ದಾರೆ. ಅಲ್ಲದೇ ರಾಕ್ ಆನ್ 2 ಸಿನಿಮಾದಲ್ಲಿಯೂ ಶ್ರದ್ಧಾ ಕಪೂರ್ ಅವರೇ ನಾಯಕಿ. ಹಾಗಾಗಿ ಈ ಸಿನಿಮಾದಿಂದ ಕೊಂಚ ವಿರಾಮ ಸಿಕ್ಕ ನಂತರ ಶ್ರದ್ಧಾ ಕಪೂರ್ ಜುದ್ವಾ-2 ಸಿನಿಮಾದಲ್ಲಿ ಅಭಿನಯಿಸುವ ಸಾಧ್ಯತೆಯಿದೆ ಅಂತಾ ಹೇಳಲಾಗ್ತಿದೆ.