ನಟಿ ಜರೀನಾ ಖಾನ್‌ಗೆ ತೂಕ ಇಳಿಸುವ ಮಾತ್ರೆಗಳ ಬಗ್ಗೆ ಪ್ರಚಾರ ಮಾಡುವುದರ ಕುರಿತು ಆಫರ್ ನೀಡಲಾಗಿತಂತೆ. ಆದ್ರೆ ಜರೀನಾ ಖಾನ್ ಈ ಆಫರ್‌ನ್ನು ನಿರಾಕರಿಸಿದ್ದಾರಂತೆ.
ತೂಕ ಕಡಿಮೆ ಮಾಡುವ ಮಾತ್ರಗಳ ಬಗ್ಗೆ ಜರೀನಾಗೆ ನಂಬಿಕೆ ಇಲ್ವಂತೆ. ಹಾಗಾಗಿ ಜರೀನಾ ಅಂಥ ವಸ್ತುಗಳನ್ನು ಎಂದಿಗೂ ಪ್ರಚಾರ ಮಾಡುವುದಿಲ್ಲ. ಯಾಕೆಂದ್ರೆ ಜರೀನಾಗೆ ಮಾತ್ರೆಗಳ ಬಗ್ಗೆ ನಂಬಿಕೆ ಇಲ್ವಂತೆ. ಅದಕ್ಕಾಗಿ ಇದನ್ನು ನಿರಾಕರಿಸಿದ್ರಂತೆ..
ಜರೀನಾ ಪ್ರಕಾರ ನಿತ್ಯ ವ್ಯಾಯಾಮ ಮಾಡ್ತಾರಂತೆ. ತುಂಬಾ ಕೆಲಸದಲ್ಲಿ ತೊಡಗಿಕೊಳ್ತಾರಂತೆ...ಅದಕ್ಕಾಗಿ ತೂಕ ಇಳಿಸಬೇಕಾದರೆ ಯಾವುದೇ ಶಾರ್ಟ್‌ಕಟ್ ವಿಧಾನವಿಲ್ಲ ಎಂದು ಈ ಸುಂದರಿ ಹೇಳಿದ್ದಾಳೆ.
ಇನ್ನೂ ತೂಕ ಇಳಿಸುವುದರ ಕುರಿತು 1 ಕೋಟಿಯ ಆಫರ್ ಬಂದಿತಂತೆ. ಆದ್ರೆ ಜರೀನಾ ಮಾತ್ರ ಇದನ್ನು ನಿರಾಕರಿಸಿದ್ದರಂತೆ.
ನೀವೂ ತೂಕ ಇಳಿಸಬೇಕಂದ್ರೆ ಹೆಚ್ಚು ಶ್ರಮಪಡಿ ಇದ್ದರಿಂದ ನಿಮ್ಮ ತೂಕವನ್ನು ಕಡಿಮೆ ಮಾಡಬಹುದು ಎಂದು ಜರೀನಾ ಸಲಹೆ ನೀಡಿದ್ದಾರೆ. ಬಾಲಿವುಡ್‌ನಲ್ಲಿ ವೀರ್ ಚಿತ್ರದಿಂದ ಮೊದಲ ಬಾರಿಗೆ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು.