ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಹಾಗೂ ಅಮೀರ್ ಖಾನ್ ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಕೆಲ ಮೂಲಗಳ ಪ್ರಕಾರ ಬಿಗ್ ಬಿ ಈಗಾಗ್ಲೇ ಚಿತ್ರಕ್ಕೆ ಸಹಿ ಹಾಕಿದ್ದಾರಂತೆ... ಈ ಚಿತ್ರದಲ್ಲಿ ಪಿಕೆ ನಟ ಅಮೀರ್ ಖಾನ್ ಕೂಡ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನೂ ಈ ಚಿತ್ರವನ್ನು ಧೂಮ್ -3 ನಿರ್ದೇಶಕ ವಿಜಯ್ ಕೃಷ್ಣ ಆಚಾರ್ಯ ನಿರ್ದೇಶನ ಮಾಡುತ್ತಿದ್ದಾರೆ. ಅಮೀರ್ ಖಾನ್ ಅಭಿನಯದ ದಾಂಗಲ್ ಸಿನಿಮಾ ರಿಲೀಸ್ ಆಗದೇ ಹಾಗೇ ಇದೆ ಹೀಗಿರುವಾಗಲೇ ತುಗ್ ಸಿನಿಮಾದಲ್ಲಿ ಅಮೀರ್ ಖಾನ್ ಅವರು ತಾನು ಅಭಿನಯಿಸುತ್ತಿದ್ದೇನೆ ಅಂತಾ ಬಹಿರಂಗಗೊಳಿಸಿದ್ದರು.
ಆದ್ರೆ ಅಭಿಮಾನಿಗಳು ಮಾತ್ರ ಅಮೀರ್ ಅವರ ದಾಂಗಲ್ ಸಿನಿಮಾವೇ ರಿಲೀಸ್ ಆಗಿಲ್ಲ. ಹೀಗಿರುವಾಗಲೇ ಅಮೀರ್ ತುಗ್ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿತ್ತು.
ಆದ್ರೀಗ ಅಮೀರ್ ಖಾನ್ ಅವರೇ ತುಗ್ ಸಿನಿಮಾದ ಬಗ್ಗೆ ಬಾಯ್ಬಿಟ್ಟಿದ್ದಾರೆ.ತಮ್ಮ ದಾಂಗಲ್ ಸಿನಿಮಾ ರಿಲೀಸ್ ಆದ ಬಳಿಕವಷ್ಟೇ ತುಗ್ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಾರೆ ಎಂದು ತಿಳಿದು ಬಂದಿದೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ