Select Your Language

Notifications

webdunia
webdunia
webdunia
webdunia

‘ವೈವಾಹಿಕ ಜೀವನದಲ್ಲಿ ನಡೆಯುವ ಅತ್ಯಾಚಾರವನ್ನು ಮುಚ್ಚಿಡುವುದು ತಪ್ಪು’

‘ವೈವಾಹಿಕ ಜೀವನದಲ್ಲಿ ನಡೆಯುವ ಅತ್ಯಾಚಾರವನ್ನು ಮುಚ್ಚಿಡುವುದು ತಪ್ಪು’
Mumbai , ಬುಧವಾರ, 7 ಡಿಸೆಂಬರ್ 2016 (10:41 IST)
ಮುಂಬೈ: ವೈವಾಹಿಕ ಜೀವನದಲ್ಲಿ ಮಹಿಳೆಯ ಇಚ್ಛೆಗೆ ವಿರುದ್ಧವಾಗಿ ನಡೆಯುವ ಲೈಂಗಿಕ ಶೋಷಣೆಯ ಗಂಭೀರ ಅಪರಾಧ. ಇದನ್ನು ಮುಚ್ಚಿಡುವುದು ತಪ್ಪು ಎಂದು ಬಾಲಿವುಡ್ ಬೆಡಗಿ ಕತ್ರಿನಾ ಕೈಫ್ ಹೇಳಿಕೊಂಡಿದ್ದಾರೆ.

ನಮ್ಮಲ್ಲಿ ಹೆಚ್ಚಿನ ಮಹಿಳೆಯರು ವಿದ್ಯಾವಂತರೇ. ಆದರೂ ಸಮಾಜಕ್ಕೆ ಹೆದರಿ ವೈವಾಹಿಕ ಜೀವನದಲ್ಲಿ ನಡೆಯುವ ಅತ್ಯಾಚಾರ ಪ್ರಕರಣಗಳ ಬಗ್ಗೆ ಮೌನವಹಿಸುತ್ತಾರೆ.  ನಮ್ಮ ಸಮಾಜ ವೈವಾಹಿಕ ಲೈಂಗಿಕ ಶೋಷಣೆಯನ್ನು ಅತ್ಯಾಚಾರ ಎಂದು ಪರಿಗಣಿಸುವುದೇ ಇಲ್ಲ. ಹೀಗಾಗಿ ಮಹಿಳೆಯರು ಮರ್ಯಾದೆಗೆ ಅಂಜಿ ಸುಮ್ಮನಿರುತ್ತಾರೆ ಎಂದು ಕತ್ರಿನಾ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.

ಇದಕ್ಕೆಲ್ಲಾ ಪ್ರಮುಖ ಕಾರಣ ನಮ್ಮಲ್ಲಿ ಲಿಂಗ ತಾರತಮ್ಯವಿರುವುದು ಎಂದೂ ಬಾಲಿವುಡ್ ನಟಿ ಹೇಳಿಕೊಂಡಿದ್ದಾರೆ. ಮಹಿಳೆಯ ಮೇಲಿನ ಅಪರಾಧಗಳ ಬಗ್ಗೆ ಪೊಲೀಸರಿಗೆ ದೂರು ಕೊಡುವವರ ಸಂಖ್ಯೆ ಹೆಚ್ಚುತ್ತಿರುವುದು ಕೂಡಾ ಪ್ರಕರಣ ಮಹಿಳೆಯರ ಮೇಲೆ ಶೋಷಣೆ ಹೆಚ್ಚುತ್ತಿರುವುದರ ಸೂಚನೆ ಅಲ್ಲ. ಪ್ರಕರಣ ದಾಖಲಿಸಲು ಮುಂದೆ ಬರುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿರುವುದರ ಸಂಕೇತವಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಬ್ಬಾ.. ಮದುವೆ ಹುಡುಗಿ ರಾಧಿಕಾ ಪಂಡಿತ್ ಬೋಲ್ಡ್ ಅವತಾರ ನೋಡಿದ್ದೀರಾ?