Select Your Language

Notifications

webdunia
webdunia
webdunia
webdunia

ಶ್ರೀದೇವಿ ಬಗ್ಗೆ ಹಾಗೇಕೆ ಹೇಳಿದೆ? ಬಾಹುಬಲಿ ನಿರ್ದೇಶಕ ರಾಜಮೌಳಿ ಸ್ಪಷ್ಟನೆ

ಶ್ರೀದೇವಿ ಬಗ್ಗೆ ಹಾಗೇಕೆ ಹೇಳಿದೆ? ಬಾಹುಬಲಿ ನಿರ್ದೇಶಕ ರಾಜಮೌಳಿ ಸ್ಪಷ್ಟನೆ
NewDelhi , ಭಾನುವಾರ, 9 ಜುಲೈ 2017 (12:33 IST)
ನವದೆಹಲಿ: ಬಾಹುಬಲಿ ಸಿನಿಮಾದಲ್ಲಿ ಶ್ರೀದೇವಿ ನಟಿಸದೇ ಇರುವುದಕ್ಕೆ ಕಾರಣಗಳ ಬಗ್ಗೆ ಹೇಳಿಕೆ-ಪ್ರತಿಕ್ರಿಯೆಗಳು ಇನ್ನೂ ನಿಂತಿಲ್ಲ. ಶ್ರೀದೇವಿ ಹೇಳಿಕೆಗೆ ಪ್ರತಿಯಾಗಿ ಇದೀಗ ನಿರ್ದೇಶಕ ರಾಜಮೌಳಿ ಪ್ರತಿಕ್ರಿಯಿಸಿದ್ದಾರೆ.


ರಾಜಮೌಳಿ ನನ್ನನ್ನು ಕೇಳದೇ ಸಾರ್ವಜನಿಕವಾಗಿ ನಾನು ಚಿತ್ರದಲ್ಲಿ ನಟಿಸುವುದಕ್ಕೆ ನಿರಾಕರಿಸಿದ್ದೆ ಎಂದಿದ್ದರು ಎಂದು ಶ್ರೀದೇವಿ ಸಾರ್ವಜನಿಕವಾಗಿ ತಮ್ಮ ಅಸಮಾಧಾನ ಬಹಿರಂಗಪಡಿಸಿದ್ದರು. ಇದೀಗ ಆ ಹೇಳಿಕೆಗೆ ನಿರ್ದೇಶಕ ರಾಜಮೌಳಿ ಪ್ರತಿಕ್ರಿಯಿಸಿದ್ದಾರೆ.

‘ನಾನು ಸಾರ್ವಜನಿಕವಾಗಿ ಆಕೆ ಬಗ್ಗೆ ಹಾಗೆ ಹೇಳಿದ್ದಕ್ಕೆ ನನಗೆ ಬೇಸರವಿದೆ. ಹಾಗೆ ನಾನು ಹೇಳಬಾರದಿತ್ತು. ಅದನ್ನೀಗ ಮತ್ತಷ್ಟು ಚರ್ಚೆ ಮಾಡಿ ರಾಡಿಗೊಳಿಸುವುದು ಇಷ್ಟವಿಲ್ಲ. ಶ್ರೀದೇವಿ ಬಗ್ಗೆ ನನಗೆ ಅಪಾರ ಗೌರವವಿದೆ. ಆಕೆ ಭಾರತೀಯ ಸಿನಿಮಾಗಳ ಮುಂಚೂಣಿ ನಟಿ’ ಎಂದು ರಾಜಮೌಳಿ ಹೇಳಿದ್ದಾರೆ. ಈ ಮೂಲಕ ವಿವಾದಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಪಿಲ್ ಶೋ ಆರಂಭಕ್ಕೂ ಮುನ್ನವೇ ಶಾರೂಖ್, ಅನುಷ್ಕಾ ಹೊರಹೋಗಿದ್ದೇಕೆ..?