Daily Horoscope

Select Your Language

Notifications

webdunia
webdunia
webdunia
webdunia

ದೀಪಿಕಾ ಪಡುಕೋಣೆ ಪತಿ ರಣವೀರ್ ಸಿಂಗ್ ನಟಿಸಿರುವ ಧುರಂಧರ್ ಸಿನಿಮಾ ಬಗ್ಗೆ ಯಾಕೆ ಮಾತಾಡ್ತಿಲ್ಲ: ನೆಟ್ಟಿಗರ ಪ್ರಶ್ನೆ

Deepika Padukone-Ranveer Singh
ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ಪತಿ ರಣವೀರ್ ಸಿಂಗ್ ನಾಯಕರಾಗಿರುವ ಧುರಂಧರ್ ಸಿನಿಮಾ ಬಗ್ಗೆ ಯಾಕೆ ಒಂದೇ ಒಂದು ಮಾತನಾಡ್ತಿಲ್ಲ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ.
 

ರಣವೀರ್ ಸಿಂಗ್ ನಾಯಕರಾಗಿರುವ ಧುರಂಧರ್ ಪಾರ್ಟ್ 2 ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅನೇಕ ಸೆಲೆಬ್ರಿಟಿಗಳಿಗೂ ಸಿನಿಮಾ ಬಗ್ಗೆ ಹೊಗಳಿ ಟ್ವೀಟ್ ಮಾಡುತ್ತಿದ್ದಾರೆ. ಇನ್ನೊಂದೆಡೆ ಎಡಪಂಥೀಯರು ಸಿನಿಮಾ ಬಗ್ಗೆ ಟೀಕೆಯನ್ನೂ ಮಾಡಿದ್ದಾರೆ.

ಆದರೆ ದೀಪಿಕಾ ಇದುವರೆಗೆ ತಮ್ಮ ಪತಿ ಸಿನಿಮಾ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಗಲೀ ಮಾಧ್ಯಮಗಳ ಮುಂದೆಯಾಗಲೀ ಒಂದೇ ಒಂದು ಹೇಳಿಕೆ ನೀಡಿಲ್ಲ. ಅಲ್ಲದೆ ಸಿನಿಮಾ ನೋಡಿರುವ ಬಗ್ಗೆಯೂ ಯಾವುದೇ ಮಾಹಿತಿ ಬಂದಿಲ್ಲ.

ಹೀಗಾಗಿ ನೆಟ್ಟಿಗರು ದೀಪಿಕಾರನ್ನು ಪ್ರಶ್ನೆ ಮಾಡಿದ್ದಾರೆ. ಗಂಡನ ಸಿನಿಮಾವನ್ನು ಯಾಕೆ ದೀಪಿಕಾ ನೋಡಿಲ್ಲ ಮತ್ತು ಮಾತನಾಡುತ್ತಿಲ್ಲ. ಅದೇ ಧುರಂಧರ್ ನಿರ್ದೇಶಕ ಆದಿತ್ಯ ಧಾರ್ ಪತ್ನಿ ಯಾಮಿ ಗೌತಮ್ ಗಂಡನಿಗೆ ಬೆಂಬಲವಾಗಿ ನಿಂತಿದ್ದಾರೆ. ಆದರೆ ರಣವೀರ್ ಪತ್ನಿ ದೀಪಿಕಾ ಮಾತ್ರ ಸಿನಿಮಾ ಬಗ್ಗೆ ಮಾತೇ ಆಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಕುಂಭಮೇಳದ ವೈರಲ್ ಹುಡುಗಿ ಮೊನಾಲಿಸಾ ಮದುವೆ ಲವ್‌ ಜಿಹಾದ್‌: ನಿರ್ದೇಶಕ ಸನೋಜ್ ಮಿಶ್ರಾ